ಗ್ಯಾಸ್ ಸಿಲಿಂಡರ್ ದರದಲ್ಲಿ ₹57 ರೂಪಾಯಿ ಇಳಿಕೆ, ಎಲ್ಲೆಲ್ಲಿ ಎಷ್ಟೆಷ್ಟಿದೆ ದರ ಗೊತ್ತಾ?
ಇದೀಗ ಸಿಲಿಂಡರ್ ದರ ಪರಿಷ್ಕರಣೆ (cylinder price) ಗೊಂಡಿದ್ದು ನವಂಬರ್ ತಿಂಗಳಿನಲ್ಲಿ ಬೆಲೆ ತಿಳಿಯೋಣ, ಸಿಲಿಂಡರ್ ದರ ಪರಿಷ್ಕರಣೆ (Cylinder Rate Revision) ವಿವರ
ಪ್ರತಿ ತಿಂಗಳು ಕೇಂದ್ರ ಸರ್ಕಾರ (Central government) ಕೆಲವೊಂದಿಷ್ಟು ವಿಷಯಗಳಲ್ಲಿ ಬೆಲೆ ಪರಿಷ್ಕರಣೆ ಮಾಡಿ ಪ್ರತಿ ತಿಂಗಳು ಹೊಸ ಬೆಲೆಯನ್ನು ಪ್ರಕಟಿಸುತ್ತದೆ. ಕೆಲವೊಮ್ಮೆ ಬೆಲೆಗಳು ಸ್ಥಿರತೆ ಕಾಯ್ದುಕೊಂಡರೆ ಇನ್ನೂ ಕೆಲವೊಮ್ಮೆ ಏರಿಳಿತ ಉಂಟಾಗಬಹುದು.
ಇದೀಗ ಸಿಲಿಂಡರ್ ದರ ಪರಿಷ್ಕರಣೆ (cylinder price) ಗೊಂಡಿದ್ದು ನವಂಬರ್ ತಿಂಗಳಿನಲ್ಲಿ ಬೆಲೆ ಹೀಗಿದೆ.
ಕಾರ್ ಲೋನ್ ತೆಗೆದುಕೊಳ್ಳಲು ನಿಖರವಾದ ಯೋಜನೆ ಮುಖ್ಯ! ಇಲ್ಲವೇ ಬಾರೀ ನಷ್ಟ ಎದುರಿಸಬೇಕು
ಸಿಲಿಂಡರ್ ದರ ಪರಿಷ್ಕರಣೆ (Cylinder Rate Revision)
ಎಲ್ಪಿಜಿ ಸಿಲಿಂಡರ್ ದರ (LPG cylinder rate) ವನ್ನು ಕೇಂದ್ರ ಸರ್ಕಾರ ಕಳೆದ ನಾಲ್ಕೈದು ತಿಂಗಳ ಹಿಂದೆ 200 ರೂಪಾಯಿಗಳಷ್ಟು ಇಳಿಕೆ ಮಾಡಿದ್ದು ಗೊತ್ತೇ ಇದೆ. ಹಣದುಬ್ಬರವನ್ನು ಎದುರಿಸುತ್ತಿದ್ದ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ದರ 200 ರೂಪಾಯಿಗಳವರೆಗೆ ಇಳಿಕೆಯಾಗಿದ್ದು ನಿಜಕ್ಕೂ ಗ್ರಾಹಕರಿಗೆ ದೊಡ್ಡ ಸಮಾಧಾನ ನೀಡಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಪರಿಷ್ಕರಣೆಗೊಂಡ ದರದ ಪ್ರಕಾರ ವಾಣಿಜ್ಯ ಸಿಲೆಂಡರ್ ಬೆಲೆ ಮತ್ತೆ ಏರಿಕೆ ಕಂಡಿದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆ (Commercial cylinder price increased)
19 ಕೆಜಿ ಸಿಲಿಂಡರ್ ದರ ಅಕ್ಟೋಬರ್ ತಿಂಗಳಿನಲ್ಲಿ 207 ರೂಪಾಯಿಗಳಷ್ಟು ಏರಿಕೆಯಾಗಿತ್ತು. ಬಹುಶಃ ನವೆಂಬರ್ ತಿಂಗಳಿನಲ್ಲಿ ಈ ಬೆಲೆ ಇಳಿಕೆ ಆಗಬಹುದು ಎಂದು ಜನ ನಿರೀಕ್ಷೆ ಮಾಡಿದ್ದರು.
ಆದ್ರೆ ತೈಲ ಕಂಪನಿಗಳು ಹೊಸದಾಗಿ ಪರಿಷ್ಕರಣೆ ಮಾಡಿರುವ ಪ್ರಕಾರ ನವೆಂಬರ್ ತಿಂಗಳಿನಲ್ಲಿಯೂ ಕೂಡ 103 ರೂಪಾಯಿಗಳಷ್ಟು ಏರಿಕೆ ಆಗಿದೆ ಅಂದರೆ ಒಟ್ಟು 310 ರೂಪಾಯಿಗಳು ಹೆಚ್ಚಾಗಿದ್ದವು.
ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಸಕಾಲ! ಕಡಿಮೆ ಬಡ್ಡಿಗೆ ಸಿಗುತ್ತಿದೆ ಹೋಮ್ ಲೋನ್
ಸಿಲಿಂಡರ್ ಬೆಲೆ ಇಳಿಕೆ!
ಇನ್ಮುಂದೆ ಅಮೆಜಾನ್ ಆನ್‌ಲೈನ್‌ನಲ್ಲೇ ಕಾರುಗಳ ಮಾರಾಟ ಮಾಡಲಿದೆ! ಮಾರಾಟ, ಬುಕಿಂಗ್ ಎಲ್ಲವೂ ಆನ್‌ಲೈನ್‌ನಲ್ಲೆ
ವಾಣಿಜ್ಯ ಸಿಲಿಂಡರ್ ದರ ಎಲ್ಲಿ ಎಷ್ಟು?
19 ಕೆ.ಜಿ ವಾಣಿಜ್ಯ ಸಿಲಿಂಡರ್ ದರ 57 ರೂಪಾಯಿಗಳಷ್ಟು ಇಳಿಕೆ ಮಾಡಿದ್ದು ವ್ಯಾಪಾರ ಮಾಡುವವರಿಗೆ ಬಹಳ ಅನುಕೂಲವಾಗಿದೆ. ಈಗ ವಾಣಿಜ್ಯ 19 ಕೆಜಿ ಸಿಲಿಂಡರ್ ನ ದರ ದೆಹಲಿಯಲ್ಲಿ 1755.50 ರೂಪಾಯಿಗಳಾಗಿದ್ದರೆ ಕೊಲ್ಕತ್ತಾದಲ್ಲಿ 1885.50 ರೂಪಾಯಿಗಳಾಗಿವೆ.
ಅದೇ ರೀತಿ ಮುಂಬೈನಲ್ಲಿ 19 kg ವಾಣಿಜ್ಯ ಸಿಲಿಂಡರ್ ಅಂತರ 1728.50ರೂ. ಗಳಾಗಿದ್ದರೆ ಚೆನ್ನೈನಲ್ಲಿ 1947.50 ಗಳು ದಾಖಲಾಗಿವೆ. ಒಟ್ಟಿನಲ್ಲಿ ಕಮರ್ಷಿಯಲ್ ಸಿಲಿಂಡರ್ ದರ ಪರಿಷ್ಕರಣೆಗೊಂಡಿದ್ದು ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ.
Gas cylinder price reduced by 57 rupees, Know the Latest Price
Follow us On
Google News |