ಸ್ವಂತ ಬಿಸಿನೆಸ್ ಪ್ಲಾನ್ ಇರೋರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 2 ಲಕ್ಷ! ಈಗಲೇ ಅರ್ಜಿ ಸಲ್ಲಿಸಿ
Business Loan Scheme : ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ ಇರುವುದರ ಜೊತೆಗೆ ನಿರುದ್ಯೋಗದ ಸಮಸ್ಯೆ ಕೂಡ ಅಷ್ಟೇ ಹೆಚ್ಚಾಗಿದೆ. ಚೆನ್ನಾಗಿ ಓದಿಕೊಂಡಿರುವ ಯುವಕ ಯುವತಿಯರಿಗೂ ಕೆಲಸ ಸಿಗುತ್ತಿಲ್ಲ. ನಿರುದ್ಯೋಗದ ಸಮಸ್ಯೆ ಒಂದು ರೀತಿ ಪಿಡುಗಿನ ಹಾಗೆ ಭಾರತದ ಯುವ ಪೀಳಿಗೆಯನ್ನು ಕಾಡುತ್ತಿದೆ ಎಂದರೂ ತಪ್ಪಲ್ಲ. ಈ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಲು ಸರ್ಕಾರ ಕೂಡ ಪ್ರಯತ್ನ ಪಡುತ್ತಿದೆ.
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ
ಕೆಲಸ ಮಾಡುವ ಆಸಕ್ತಿ ಇದ್ದು, ಅವಕಾಶ ಸಿಗದವರಿಗೆ ಸರ್ಕಾರವು ಹಲವು ಯೋಜನೆಗಳನ್ನು ತರುತ್ತಿದೆ. ಕೇಂದ್ರ ಸರ್ಕಾರವು ನಿರುದ್ಯೋಗಿಗಳಿಗೆ, ಸ್ವಂತ ಉದ್ಯೋಗ ಶುರು ಮಾಡಲು ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗಿ, ಅವರ ಕನಸುಗಳು ಈಡೇರಲಿ, ಹಣಕಾಸಿನ ವಿಚಾರದಲ್ಲಿ ಎಲ್ಲರೂ ಸ್ವಾವಲಂಬಿಗಳಾಗಿ ಇರಬೇಕು ಎಂದು ಸಾಕಷ್ಟು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಇದೀಗ ಯುವಕರಿಗಾಗಿ ಮತ್ತೊಂದು ಯೋಜನೆಯನ್ನು ಸಹ ಜಾರಿಗೆ ತಂದಿದೆ.
ಎಸ್‌ಬಿಐ ಬ್ಯಾಂಕಿನಿಂದ ವಿಶೇಷ ಯೋಜನೆ! ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇನ್ನಷ್ಟು ಬೆನಿಫಿಟ್
ಸ್ವಂತ ಉದ್ಯೋಗಕ್ಕೆ ಸಿಗಲಿದೆ ಸಾಲ
ಒಂದು ವೇಳೆ ನಿಮಗೆ ಸ್ವಂತ ಉದ್ಯೋಗ ಮಾಡುವ ಆಸಕ್ತಿ ಇದ್ದರೆ, ಇದಕ್ಕಾಗಿ ಕೇಂದ್ರ ಸರ್ಕಾರವೇ ನಿಮಗೆ ಸಾಲ (Business Loan) ಕೊಡಲಿದೆ. ನಿರುದ್ಯೋಗಿಗಳಿಗಾಗಿ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಈ ಒಂದು ಅಭಿಯಾನದ ಹೆಸರು ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ. ಈ ಅಭಿಯಾನದಲ್ಲಿ ಸಾಲ ಸೌಲಭ್ಯ (Loan Scheme) ಸಿಗಲಿದೆ. ನಿರುದ್ಯೋಗಿಗಳು ಸ್ವಂತ ಉದ್ಯಮ (Own Business) ಶುರು ಮಾಡಲು ಈ ಅಭಿಯಾನದಲ್ಲಿ ಅರ್ಜಿ ಸಲ್ಲಿಸಬಹುದು.
ಚಿನ್ನಾಭರಣ ಪ್ರಿಯರಿಗೆ ಭಾರೀ ಸಂತಸದ ಸುದ್ದಿ, ಚಿನ್ನ ಬೆಳ್ಳಿ ಬೆಲೆ ಬರೋಬ್ಬರಿ 4 ಸಾವಿರ ಇಳಿಕೆ!
ಯಾರಿಗೆಲ್ಲಾ ಸಿಗಲಿದೆ ಸಾಲ?
ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಲು ಯುವಕ/ಯುವತಿಯ ವಯಸ್ಸು 18 ವರ್ಷ ದಾಟಿರಬೇಕು. ಈ ಅಭಿಯಾನದಲ್ಲಿ ಒಟ್ಟು 100 ಅಭ್ಯರ್ಥಿಗಳಿಗೆ ಸಾಲದ (Loan) ಸೌಲಭ್ಯ ಸಿಗುತ್ತದೆ.
ಇಲ್ಲಿ ನಿಮ್ಮ ಉದ್ಯೋಗ ಶುರು ಮಾಡಲು ₹2 ಲಕ್ಷ ರೂಪಾಯಿಯವರೆಗೂ ಸಾಲ ಸಿಗಲಿದ್ದು, ಒಂದು ವೇಳೆ ನೀವು ಪಡೆಯುವ ಸಾಲಕ್ಕೆ 7% ಗಿಂತ ಹೆಚ್ಚಿನ ಬಡ್ಡಿದರ ಇದ್ದರೆ, ಅದಕ್ಕಾಗಿ ಬಡ್ಡಿ ಸಹಾಯಧನ ಕೂಡ ಸಿಗಲಿದೆ. ಸೇವಾವಲಯಕ್ಕೆ ಸೇರಿದ ಎಲ್ಲಾ ಬ್ಯಾಂಕ್ ಗಳಲ್ಲಿ ಈ ಸಾಲದ (Bank Loan) ಸೌಲಭ್ಯ ಸಿಗಲಿದೆ.
ಸಾಲ ಪಡೆಯುವ ಅರ್ಹತೆ ಏನು?
ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಮೂಲಕ ಸಾಲ ಪಡೆಯುವವರು ಯಾವುದೇ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಾಗಿರಬೇಕು ಅಥವಾ ಅವರ ಮನೆಯಲ್ಲಿರುವ ಯಾರಾದರೂ ಸಹ ಸಂಘದಲ್ಲಿ ಇರಬೇಕು. ಆಗ ಮಾತ್ರ ಸಾಲ ಸಿಗುತ್ತದೆ.
ಪ್ರಸ್ತುತ ಎಸ್.ಜೆ.ಆರ್.ಎಸ್.ವೈ ಯೋಜನೆ ಮತ್ತು ಡೇ ನಲ್ಮ್ ಯೋಜನೆಯ ಮೂಲಕ ಈಗಾಗಲೇ 8 ಗುಂಪುಗಳನ್ನು ಜಾರಿಗೆ ತರಲಾಗಿದ್ದು, ಅವುಗಳು ಸ್ವಂತ ಉದ್ಯಮ ಅಥವಾ ಸ್ವಂತ ಉದ್ಯೋಗ ಶುರು ಮಾಡಲು 10 ಲಕ್ಷದ ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ. ಹಾಗೆಯೇ 7% ಗಿಂತ ಜಾಸ್ತಿ ಬಡ್ಡಿ ಇದ್ದರೆ, ಅದಕ್ಕೂ ಬಡ್ಡಿಸಹಾಯ ಸಿಗುತ್ತದೆ.
ಈ ಸಾಲ ಪಡೆಯುವ ಆಸಕ್ತಿ ಇರುವವರು ಬೇಕಿರುವ ಎಲ್ಲಾ ದಾಖಲೆಗಳ ಜೊತೆಗೆ ಮಹಾನಗರ ಪಾಲಿಕೆ ವಲಯ ಕಚೇರಿ ಅಥವಾ ಡೇ ನಲ್ಮ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 24 ಆಗಿದೆ.
get 2 lakhs from the central government if You Have own business plan
Our Whatsapp Channel is Live Now 👇