ಫೋನ್‌ಪೇ ಬಳಕೆದಾರರಿಗೆ ಸಿಗುತ್ತೆ 5 ಲಕ್ಷ ದವರೆಗೆ ಪರ್ಸನಲ್ ಲೋನ್! ಬಂಪರ್ ಅವಕಾಶ
ತುರ್ತು ಹಣದ ಅವಶ್ಯಕತೆಯಾದಾಗ ಈಗ ಬ್ಯಾಂಕ್ ಓಡಾಟ ಬೇಡ. ಫೋನ್‌ಪೇ ಆಪ್‌ನಲ್ಲಿ ಕೆಲ ಹಂತಗಳಲ್ಲಿ ₹5 ಲಕ್ಷವರೆಗೆ ವೈಯಕ್ತಿಕ ಸಾಲ ಪಡೆಯುವ ವ್ಯವಸ್ಥೆ ಪ್ರಾರಂಭವಾಗಿದೆ, ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ.

PhonePe Personal Loan: ಹಣದ ತುರ್ತು ಅವಶ್ಯಕತೆ ಯಾವಾಗ ಬೇಕಾದರೂ ಎದುರಾಗಬಹುದು, ಅದು ವೈದ್ಯಕೀಯ ತುರ್ತು ಪರಿಸ್ಥಿತಿ ಆಗಿರಲಿ, ಮದುವೆ ಖರ್ಚು ಇರಲಿ ಅಥವಾ ಶಿಕ್ಷಣಕ್ಕಾಗಿ ಆಗಿರಲಿ.
ಇಂತಹ ಸಂದರ್ಭಗಳಲ್ಲಿ ತಕ್ಷಣದ ಹಣಕಾಸಿನ ಪರಿಹಾರವನ್ನು ನೀಡಲು ಫೋನ್‌ಪೇ (PhonePe) ಈಗ ಹೊಸ ಸೌಲಭ್ಯವನ್ನು ಪರಿಚಯಿಸಿದೆ.
ಈಗ ಫೋನ್‌ಪೇ ಆಪ್ ಮೂಲಕ ನೀವು ₹50,000 ರಿಂದ ₹5 ಲಕ್ಷವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಫೋನ್‌ಪೇ ಈಗ ಕೇವಲ ಯುಪಿಐ ಪಾವತಿ ಪ್ಲಾಟ್‌ಫಾರ್ಮ್ ಮಾತ್ರವಲ್ಲ, ಇದು ಪೂರ್ಣ ಡಿಜಿಟಲ್ ಹಣಕಾಸು ಸೇವಾ ಕೇಂದ್ರವಾಗಿ ರೂಪಾಂತರಗೊಂಡಿದೆ. ಸಾಲ ಮಂಜೂರಾದ ನಂತರ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಫೋನ್‌ಪೇ ನೀಡುವ ಈ ವೈಯಕ್ತಿಕ ಸಾಲದ ವಾರ್ಷಿಕ ಬಡ್ಡಿದರವು ನಿಮ್ಮ ಸಿಬಿಲ್ ಸ್ಕೋರ್ (CIBIL Score) ಆಧಾರವಾಗಿ 12% ರಿಂದ 36% ವರೆಗೆ ಇರಬಹುದು. ಮರುಪಾವತಿಗೆ 6 ರಿಂದ 60 ತಿಂಗಳವರೆಗೆ ಆಯ್ಕೆಯ ಅವಕಾಶವಿದೆ.
ಸಾಲ ಪಡೆಯಲು ಅಭ್ಯರ್ಥಿಯು ಭಾರತೀಯ ನಾಗರಿಕನಾಗಿದ್ದು, ಕನಿಷ್ಠ 21 ರಿಂದ 55 ವರ್ಷ ವಯಸ್ಸಿನೊಳಗಿರಬೇಕು. ಮಾಸಿಕ ಆದಾಯ ಕನಿಷ್ಠ ₹15,000 ಇರಬೇಕು ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಗತ್ಯ.
ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್, ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ನೋಂದಾಯಿತ ಮೊಬೈಲ್ ನಂಬರ್.
ಅರ್ಜಿ ಸಲ್ಲಿಸುವ ವಿಧಾನ:
- PhonePe ಆಪ್ ಡೌನ್‌ಲೋಡ್ ಮಾಡಿ ಹಾಗೂ ಬ್ಯಾಂಕ್ ಖಾತೆ ಲಿಂಕ್ ಮಾಡಿ.
- ‘Loan’ ಆಯ್ಕೆಗೆ ತೆರಳಿ ಬೇಕಾದ ಮೊತ್ತ ಆಯ್ಕೆಮಾಡಿ.
- ವೈಯಕ್ತಿಕ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಸಾಲ ಅನುಮೋದನೆಯಾದ ಬಳಿಕ 5–10 ನಿಮಿಷಗಳಲ್ಲಿ ಹಣ ನೇರವಾಗಿ ಖಾತೆಗೆ ಬರುತ್ತದೆ.
ಕಡಿಮೆ ದಾಖಲೆ, ವೇಗವಾದ ಪ್ರಕ್ರಿಯೆ ಮತ್ತು ಸಂಪೂರ್ಣ ಆನ್‌ಲೈನ್ ವಿಧಾನದಿಂದ ಫೋನ್‌ಪೇ ವೈಯಕ್ತಿಕ ಸಾಲವು ತುರ್ತು ಹಣದ ಅಗತ್ಯವಿರುವವರಿಗೆ ನಿಜಕ್ಕೂ ನೆರವಾಗುತ್ತಿದೆ.
Get Instant Personal Loan on PhonePe



