ಕೇವಲ 10 ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಪಡೆಯಿರಿ! ಇಲ್ಲಿದೆ ಸರಳ ಪ್ರಕ್ರಿಯೆ
ಪ್ಯಾನ್ ಕಾರ್ಡ್ ಇಲ್ಲದೆ ಬ್ಯಾಂಕ್ ಖಾತೆ ತೆರೆಯುವುದು ಸಾಧ್ಯವಿಲ್ಲ. ಆದರೆ ಈಗ ನೀವು 10 ನಿಮಿಷಗಳಲ್ಲಿ ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ಪಡೆಯಬಹುದು. ಇಲ್ಲಿದೆ ಸರಳ ಪ್ರಕ್ರಿಯೆ.

- ಪ್ಯಾನ್ ಕಾರ್ಡ್ ಈಗ ಆನ್ಲೈನ್ ಮೂಲಕ 10 ನಿಮಿಷದಲ್ಲೇ
- ಕೇವಲ ಆಧಾರ್ ಬಳಸಿ OTP ಮೂಲಕ ದಾಖಲೆ
- ಇ-ಫೈಲಿಂಗ್ ವೆಬ್ಸೈಟ್ನಿಂದ ತಕ್ಷಣ ಪ್ಯಾನ್ ಡೌನ್ಲೋಡ್
ಬ್ಯಾಂಕ್ ಖಾತೆ ತೆರೆಯೋಕೆ, ಉದ್ಯೋಗಕ್ಕೆ ಸೇರೋಕೆ ಅಥವಾ ಯಾವುದೇ ಆರ್ಥಿಕ ಲೆಕ್ಕಪತ್ರಗಳಿಗಾಗಿ ಅಗತ್ಯವಾಗಿರುವ ಪ್ಯಾನ್ ಕಾರ್ಡ್ (PAN Card) ಇದೀಗ ತಕ್ಷಣ ಲಭ್ಯ.
ಭಾರತೀಯ ಆದಾಯ ತೆರಿಗೆ ಇಲಾಖೆಯು ನೀಡಿರುವ ಇ-ಪಾನ್ ಸೇವೆ (e-PAN service) ಮೂಲಕ 10 ನಿಮಿಷಗಳಲ್ಲಿ ಪ್ಯಾನ್ ಪಡೆಯಲು ಸಾಧ್ಯವಾಗಿದೆ.
ನೀವು ಆಧಾರ್ ಸಂಖ್ಯೆ (Aadhaar number) ಹೊಂದಿದ್ದರೆ ಸಾಕು, ಯಾವುದೇ ಪೇಪರ್ವರ್ಕ್ ಇಲ್ಲದೇ ತಕ್ಷಣ ಆನ್ಲೈನ್ ಮೂಲಕ ಈ ಕಾರ್ಡ್ ಪಡೆಯಬಹುದು.
ಇದನ್ನೂ ಓದಿ: ತಾಯಿ ಹೆಸರಲ್ಲಿ ಆಸ್ತಿ ಇದ್ರೆ, ಹೆಣ್ಣುಮಕ್ಕಳಿಗೂ ಹಕ್ಕು ಇದ್ಯಾ? ಕಾನೂನು ತಿಳಿಯಿರಿ
ಇದಕ್ಕಾಗಿ ನೀವು ಆದಾಯ ತೆರಿಗೆ ಇ-ಫೈಲಿಂಗ್ ವೆಬ್ಸೈಟ್ (www.incometax.gov.in) ನ ‘Quick Links’ ವಿಭಾಗದಲ್ಲಿ ಇರುವ ‘Instant e-PAN’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ನಂತರ “Get New e-PAN” ಆಯ್ಕೆಮಾಡಿ ನಿಮ್ಮ ಆಧಾರ್ ನಂಬರನ್ನು ನಮೂದಿಸಿ, ಪ್ರಮಾಣೀಕರಣ ಬಟನ್ ಕ್ಲಿಕ್ ಮಾಡಿ. ಇದರಿಂದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಗೆ OTP ಬರಲಿದೆ. OTP ನಮೂದಿಸಿ ‘Validate Aadhaar OTP and Proceed’ ಆಯ್ಕೆಮಾಡಿದರೆ ಮುಂದಿನ ಹಂತಕ್ಕೆ ಹೋಗಬಹುದು.
ಇದನ್ನೂ ಓದಿ: ಎಸ್ಬಿಐನಲ್ಲಿ ₹60 ಲಕ್ಷ ಮನೆ ಸಾಲಕ್ಕೆ EMI ಎಷ್ಟು? ಬಡ್ಡಿ ಎಷ್ಟಾಗುತ್ತೆ? ಇಲ್ಲಿದೆ ಲೆಕ್ಕ
ಇದನ್ನು ಮುಕ್ತಾಯಗೊಳಿಸಲು ನೀವು ಎಲ್ಲ ನಿಯಮಗಳನ್ನು ಓದಿ, ಟಿಕ್ಮಾರ್ಕ್ ಹಾಕಿ, ಮುಂದಕ್ಕೆ ಸಾಗಬೇಕು. ಈ ಪ್ರಕ್ರಿಯೆ ಎಲ್ಲವೂ ಸರಿಯಾಗಿ ಮುಕ್ತಾಯವಾದ ಬಳಿಕ, ನಿಮಗೆ ಇ-ಪಾನ್ (e-PAN) ನ್ನು PDF ರೂಪದಲ್ಲಿ ತಕ್ಷಣವೇ ನೀಡಲಾಗುತ್ತದೆ.
ಇದನ್ನೂ ಓದಿ: ಪೇಟಿಎಂ ಬಳಕೆದಾರರಿಗೆ ಗುಡ್ ನ್ಯೂಸ್! 5 ಹೊಸ ಫೀಚರ್ಸ್ ಲಾಂಚ್
ಈ ಸೇವೆ ಬೆಂಗಳೂರು (Bengaluru), ಮುಂಬೈ (Mumbai), ಹೈದರಾಬಾದ್ (Hyderabad), ಚೆನ್ನೈ (Chennai) ಸೇರಿದಂತೆ ದೇಶದ ಎಲ್ಲೆಡೆ ಲಭ್ಯವಿದ್ದು, ಸಾಮಾನ್ಯ ನಾಗರಿಕರ ಕೆಲಸ ತ್ವರಿತಗೊಳಿಸುವ ಉದ್ದೇಶ ಹೊಂದಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಪ್ಯಾನ್ ವಿಳಂಬವಾಗಬಾರದು ಅಂದರೆ ಈ ದಾರಿ ಅತ್ಯುತ್ತಮ.
Get PAN Card Instantly in 10 Minutes Online
ನಾಳೆಯ ದಿನ ಭವಿಷ್ಯ: 14-11-2026, ಶನಿವಾರ
Read the story
ಚಿನ್ನದ ಬೆಲೆ ಮತ್ತೆ ಕುಸಿತ; ಮಹಿಳೆಯರಿಗೆ ಬಂಪರ್ ಸುದ್ದಿ
Read the story
ಸ್ವಂತ ಫಾಸ್ಟ್ ಫುಡ್ ಸೆಂಟರ್ ಶುರು ಮಾಡಬೇಕಾ? ಇಲ್ಲಿದೆ ಉಚಿತ ತರಬೇತಿ
Read the story
ಡಾ.ರಾಜ್ ಕುಮಾರ್ ರನ್ನು ಸ್ಮರಿಸಿದ ಪ್ರಧಾನಿ ಮೋದಿ
Read the story
ಫ್ಯಾಮಿಲಿಗೆ ಬೆಸ್ಟ್, 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು ಇವು
Read the story




