ಗೋಲ್ಡ್ ಲೋನ್ ತೆಗೆದುಕೊಳ್ಳಬೇಕೆ? ಅಥವಾ ಮಾರಾಟ ಮಾಡಬೇಕೆ? ಯಾವುದು ಹೆಚ್ಚು ಲಾಭ
Gold Loan: ತುರ್ತು ಹಣದ ಅವಶ್ಯಕತೆ ಬಂದಾಗ ಬಂಗಾರವನ್ನು ಅಡ ಇಡುವುದು ಲಾಭವೇ, ಮಾರಾಟ ಮಾಡುವುದೇ ಸೂಕ್ತವೇ ಎಂಬ ಪ್ರಶ್ನೆಗೆ ಉತ್ತರ, ಪರಿಸ್ಥಿತಿ ಮತ್ತು ಅಗತ್ಯಗೆ ಅವಲಂಬಿತವಾಗಿರುತ್ತದೆ.

Gold Loan: ಹಣ ತುರ್ತಾಗಿ ಬೇಕಾದಾಗ ಎಲ್ಲರ ನೆನಪಿಗೆ ಮೊದಲು ಬರುವುದು ಮನೆಯಲ್ಲಿರುವ ಬಂಗಾರ. ಆದರೆ ಅದನ್ನು ಅಡ ಇಡುವುದಾ ಅಥವಾ ನೇರವಾಗಿ ಮಾರಾಟ ಮಾಡುವುದಾ? ಯಾವುದು ಲಾಭ ಎಂಬ ಗೊಂದಲ ಸಾಮಾನ್ಯ. ಈ ನಿರ್ಧಾರ ಬಹಳಷ್ಟು ನಿಮ್ಮ ಹಣಕಾಸು ಸ್ಥಿತಿ, ಅವಶ್ಯಕತೆ ಮತ್ತು ಸಮಯದ ಮೇಲೆ ಅವಲಂಬಿತವಾಗಿರುತ್ತದೆ.
ಬಂಗಾರ ಮಾರಾಟ (Sale Gold) ಮಾಡಿದರೆ, ನಿಮಗೆ ತಕ್ಷಣ ಹಣ ಸಿಗುತ್ತದೆ ಮತ್ತು ಬಡ್ಡಿಯ ಬಗ್ಗೆ ಯಾವುದೇ ಚಿಂತೆಯೂ ಇರದು. ಆದರೆ ಅದರ ದೊಡ್ಡ ನಷ್ಟ ಎಂದರೆ, ಆ ಬಂಗಾರ ನಿಮ್ಮಿಂದ ಶಾಶ್ವತವಾಗಿ ದೂರವಾಗುತ್ತದೆ. ಭಾವನಾತ್ಮಕ ಮೌಲ್ಯವಿರುವ ಆಭರಣಗಳಿದ್ದರೆ, ಮಾರಾಟ ಮಾಡಿದ ನಂತರ ಪಶ್ಚಾತ್ತಾಪವಾಗುವುದು ಸಹಜ.
ಇನ್ನೊಂದೆಡೆ, ಬ್ಯಾಂಕ್ ಅಥವಾ ಫೈನಾನ್ಸ್ ಸಂಸ್ಥೆಗಳು ನೀಡುವ ಗೋಲ್ಡ್ ಲೋನ್ ಮೂಲಕ ನೀವು ಬಂಗಾರವನ್ನು ನಿಮ್ಮದೇ ಹತ್ತಿರ ಇಟ್ಟುಕೊಂಡಂತೆ ಉಳಿಸಬಹುದು. ಸಾಲವನ್ನು EMI ಮೂಲಕ ಸಮಯಕ್ಕೆ ಸರಿಯಾಗಿ ಪಾವತಿಸಿದರೆ, ಅದೇ ಬಂಗಾರವನ್ನು ಮರಳಿ ಪಡೆದುಕೊಳ್ಳಬಹುದು. ಆದರೆ ಇಲ್ಲಿ ಬಡ್ಡಿ ಪಾವತಿ ತಪ್ಪಿಸುವುದು ಸಾಧ್ಯವಿಲ್ಲ.
ಇದನ್ನೂ ಓದಿ: ಮಾರುತಿ ಆಲ್ಟೋಗಿಂತಲೂ ಕಮ್ಮಿ ಬೆಲೆ! 3.5 ಲಕ್ಷಕ್ಕೆ ಹೊಸ 5 ಸೀಟರ್ ಕಾರು ಬಿಡುಗಡೆ
ಸ್ವಲ್ಪ ಸಮಯಕ್ಕೆ ಸ್ವಲ್ಪ ಮೊತ್ತವಷ್ಟೇ ಬೇಕಿದ್ದರೆ, ಗೋಲ್ಡ್ ಲೋನ್ ತೆಗೆದುಕೊಳ್ಳುವುದು ಹೆಚ್ಚು ಲಾಭದಾಯಕ. ಏಕೆಂದರೆ ಬಡ್ಡಿ ಕಡಿಮೆ ಆಗುತ್ತದೆ ಮತ್ತು ಬಂಗಾರ ನಿಮ್ಮದಾಗಿಯೇ ಉಳಿಯುತ್ತದೆ. ಜೊತೆಗೆ, ಬಂಗಾರಕ್ಕೆ ಇದ್ದ ಭಾವನಾತ್ಮಕ ನಂಟು ಇದ್ದರೆ ಇದು ಅತ್ಯುತ್ತಮ ಆಯ್ಕೆ.
ಆದರೆ, ದೊಡ್ಡ ಮೊತ್ತ ಬಹಳ ದಿನಗಳ ಕಾಲ ಬೇಕಿದ್ದರೆ, ಅಥವಾ ಸಾಲ ತೀರಿಸುವ ಸಾಮರ್ಥ್ಯ ಇಲ್ಲದ ಪರಿಸ್ಥಿತಿಯಲ್ಲಿ, ಬಂಗಾರ ಮಾರಾಟ ಹೆಚ್ಚು ಸೂಕ್ತ. ಬಡ್ಡಿ ಚಿಂತೆ ಇಲ್ಲದೆ ನೇರ ಹಣ ಸಿಗುತ್ತದೆ. ಸಾಲದ ಒತ್ತಡವಿಲ್ಲದೆ, ಹಣಕಾಸು ಬಿಕ್ಕಟ್ಟಿನಿಂದ ಹೊರಬರುತ್ತೀರಿ.
ಬಂಗಾರ ಅಡವಿಡುವುದು ಲಾಭವೇ? ಮಾರಾಟ ಲಾಭವೇ? ಉತ್ತರ ಒಂದೇ: ನಿಮ್ಮ ಅಗತ್ಯತೆ, ಅವಧಿ ಮತ್ತು ಹಣಕಾಸು ಸಾಮರ್ಥ್ಯ ನೋಡಿಕೊಂಡು ನಿರ್ಧಾರ ಮಾಡಬೇಕು.
Gold Loan or Sell Gold



