Business News

ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ

Gold Price Today : ಚಿನ್ನದ ಬೆಲೆ ಗಣನೀಯ ಏರಿಕೆಯಾಗಿದೆ. ಒಂದು ಕಾಲದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಐದು ಸಾವಿರ ರೂಪಾಯಿಗೆ ಇಳಿದಿತ್ತು. ಸುಮಾರು ಎರಡು ವಾರಗಳಿಂದ ಕಡಿಮೆಯಾಗುತ್ತಿದ್ದ ಚಿನ್ನದ ದರ ಇದೀಗ ಜೆಟ್ ಸ್ಪೀಡ್‌ನೊಂದಿಗೆ ಮತ್ತೆ ಏರುತ್ತಿದೆ.

ಮದುವೆ ಸೀಸನ್ ಆಗಿರುವುದರಿಂದ.. ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈಗ ಡಿಸೆಂಬರ್ 11 ರಂದು ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rate) ಹೇಗಿದೆ ಎಂದು ತಿಳಿಯೋಣ…

ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ

ನಿನ್ನೆಯವರೆಗೂ ಎಲ್ಲರೂ ಚಿನ್ನ ಖರೀದಿಸಲು ಮುಗಿ ಬೀಳುತ್ತಿದ್ದರು. ಚಿನ್ನದ ದರ ಇಳಿಕೆಯಾಗುತ್ತಿದ್ದಂತೆ ಬೇಡಿಕೆ ಹೆಚ್ಚಿತ್ತು. ಆದರೆ ಒಂದೇ ದಿನದಲ್ಲಿ ಚಿನ್ನದ ಬೆಲೆ ಸಾಕಷ್ಟು ಏರಿಕೆಯಾಗಿದೆ. ಡಿಸೆಂಬರ್ 11ರ ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಚಿನ್ನದ ದರ 80 ಸಾವಿರ ಗಡಿ ಮುಟ್ಟಿದೆ.

ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 80,060 ರೂ. ಇದ್ದರೆ, 10 ಗ್ರಾಂ 22ಕ್ಯಾರೆಟ್ ಚಿನ್ನ ರೂ.79,470 ಇದೆ. ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಇಷ್ಟೊಂದು ಬದಲಾವಣೆಯಾಗಲು ಅಂತಾರಾಷ್ಟ್ರೀಯ ಆರ್ಥಿಕ ಸ್ಥಿತಿಗತಿಗಳೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಒಂದೇ ದಿನದಲ್ಲಿ ಬೆಳ್ಳಿ 4000 ರೂ. ಏರಿಕೆ

ಚಿನ್ನದ ಬೆಲೆಚಿನ್ನಕ್ಕೆ ಪೈಪೋಟಿ ನೀಡುವ ಮೂಲಕ ಬೆಳ್ಳಿಯ ಬೆಲೆಯೂ ಭಾರೀ ಏರಿಕೆಯಾಗುತ್ತಿದೆ. ಇಂದು ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 4000 ರೂ. ಏರಿಕೆಯಾಗಿದೆ, ಕಳೆದ ಕೆಲ ದಿನಗಳಿಂದ ಕಡಿಮೆಯಾಗುತ್ತಿದ್ದರೂ ಇಂದು ದಿಢೀರ್ ಏರಿಕೆಯಾಗಿದೆ.

Gold Price Today on 11th December 2024, Gold and Silver Rates

English Summary

Our Whatsapp Channel is Live Now 👇

Whatsapp Channel

Related Stories