ತಗ್ಗಿದ ಚಿನ್ನದ ಬೆಲೆ, ಹೊಸ ವರ್ಷದ ಮೊದಲ ದಿನವೇ ಚಿನ್ನ ಬೆಳ್ಳಿ ಬೆಲೆ ಇಳಿಕೆ
Gold Price Today : ಚಿನ್ನದ ಬೆಲೆ ಕ್ರಮವಾಗಿ ರೂ.400 ಮತ್ತು ರೂ.440 ಇಳಿಕೆಯಾಗಿದೆ, ಹೊಸ ವರ್ಷ 2025 ಕ್ಕೆ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕುಸಿದಿದೆ
- ಹೊಸ ವರ್ಷ 2025 ಕ್ಕೆ ಸಿಹಿ ಸುದ್ದಿ ಚಿನ್ನದ ಬೆಲೆ ಇಳಿಕೆ
- ಚಿನ್ನ ಬೆಳ್ಳಿ ಬೆಲೆ ಕುಸಿತ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್
- ಎರಡು ದಿನಗಳಲ್ಲಿ ಚಿನ್ನದ ಬೆಲೆ ರೂ. 450 ಇಳಿಕೆ
Gold Price Today : ಹೊಸ ವರ್ಷ 2025 ಕ್ಕೆ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಇದು ಬಿಗ್ ರಿಲೀಫ್ ಆಗಿದೆ. 2024 ರ ಕೊನೆಯ ದಿನದಂದು, ವರ್ಷಾಂತ್ಯದ ಚಿನ್ನದ ದರಗಳು (Gold Rate) ಸ್ವಲ್ಪಮಟ್ಟಿಗೆ ಕುಸಿದವು.
ಹೈದರಾಬಾದ್, ವಿಜಯವಾಡ, ಬೆಂಗಳೂರು, ಮುಂಬೈನಲ್ಲಿ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 71,100 ರೂ. ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ರೂ. 77,560 ತಲುಪಿದೆ. ಹಿಂದಿನ ಬೆಲೆಗಳಿಗೆ ಹೋಲಿಸಿದರೆ ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ ರೂ.400 ಮತ್ತು ರೂ.440 ಇಳಿಕೆಯಾಗಿದೆ.
ಅಂದರೆ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಎರಡು ದಿನಗಳಲ್ಲಿ ಚಿನ್ನದ ಬೆಲೆ ರೂ. 450 ಇಳಿಕೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ದೇಶಿಯ ಮಾರುಕಟ್ಟೆಯೂಇಳಿಕೆ ಕಾಣುತ್ತಿದೆ ಎನ್ನುತ್ತಾರೆ ತಜ್ಞರು. ಈಗ ಹೊಸ ವರ್ಷದ ವೇಳೆಗೆ ದೇಶದ ಹಲವು ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು (Gold and Silver Prices) ತಿಳಿಯೋಣ..!
ಚಿನ್ನದ ಬೆಲೆ
ದೆಹಲಿ : 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,240 ಇದ್ದು 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,700 ಇದೆ
ಮುಂಬೈ : 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,090 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,550
ಕೋಲ್ಕತ್ತಾ : 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,090 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,550 ಇದೆ.
ಚೆನ್ನೈ : 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,090 ಇದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,550 ಇದೆ.
ಬೆಂಗಳೂರು : 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,090 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,550 ಮುಂದುವರೆದಿದೆ
ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,550 ಆಗಿದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,090 ಮುಂದುವರಿದಿದೆ.
ಬೆಳ್ಳಿ ಬೆಲೆ ಹೀಗಿದೆ..
ಚಿನ್ನದ ಹಾದಿಯಲ್ಲಿ ಬೆಳ್ಳಿಯ ಹಾದಿಯೂ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಬೆಳ್ಳಿ ಬೆಲೆ (Silver Price) ರೂ. 2200 ಕಡಿಮೆಯಾಗಿದೆ. ಈ ಕ್ರಮದಲ್ಲಿ ಹೈದರಾಬಾದ್, ಕೇರಳ ಮತ್ತು ಚೆನ್ನೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 97,900 ಆಗಿದ್ದರೆ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 90,400 ಇದೆ.
Gold price today on 1st January 2025, Gold and Silver rates in Bengaluru, Delhi, Chennai, Mumbai, Kolkata, Hyderabad cities