Gold Rate: ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ, ಚಿನ್ನದ ಅಂಗಡಿಗಳಲ್ಲಿ ಜನಜಂಗುಳಿ

Gold Rate Today : ಸತತ ಎರಡನೇ ದಿನವೂ ಚಿನ್ನದ ಬೆಲೆ (Gold Price) ಕುಸಿತ ಕಂಡಿದೆ. ಕಡಿಮೆಯಾಗುತ್ತಿದೆ.. ಹೌದು, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದೆ. ಹಾಗೂ ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಲ್ಲಿ ಸುಮಾರು ರೂ. 110 ಇಳಿಕೆಯಾಗಿದೆ.

ಬುಧವಾರ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 70,890 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,340 ಮುಂದುವರೆದಿದೆ. ಇನ್ನು ಬೆಳ್ಳಿ ಬೆಲೆಯ ವಿಚಾರಕ್ಕೆ ಬಂದರೆ.. ಅವುಗಳ ಬೆಲೆಯೂ ಕಡಿಮೆಯಾಗುತ್ತಿದೆ. ಇಂದು..ಅಂದರೆ ಗುರುವಾರ ಪ್ರತಿ ಕಿಲೋ ಬೆಳ್ಳಿ ಬೆಲೆ (Silver Price) ರೂ. 98,800 ವರದಿಯಾಗಿದೆ.

ಈಗ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ತಿಳಿಯೋಣ.

ಚಿನ್ನದ ಬೆಲೆ

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 77,450 ರೂ. ಇದ್ದು 22 ಕ್ಯಾರೆಟ್ ಚಿನ್ನದ ಬೆಲೆ ರೂ. ₹71,000 ಇದೆ.

ಹೈದರಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 77,340 ರೂ.  ಇದ್ದರೆ, ವಿಶಾಖಪಟ್ಟಣ ಮತ್ತು ವಿಜಯವಾಡದಲ್ಲೂ ಇದೇ ಬೆಲೆ ಮುಂದುವರಿದಿದೆ.

ಇದೇ ವೇಳೆ ದೇಶದ ರಾಜಧಾನಿ ನವದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 77490 ರೂ. ಇದ್ದು 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,040 ಇದೆ.

ಇನ್ನು ಬೆಳ್ಳಿ ಬೆಲೆಯ ವಿಚಾರಕ್ಕೆ ಬಂದರೆ, ಹೈದರಾಬಾದ್, ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ ಒಂದು ಕಿಲೋ ಬೆಳ್ಳಿ ರೂ. 98,800 ಆಗಿದ್ದರೆ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 91,300 ದಾಖಲಾಗಿದೆ.

Gold Price Today On December 25th, Gold And Silver Price In Bengaluru, Delhi, Mumbai, Hyderabad Cities

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories