ಕೊನೆಗೂ ಚಿನ್ನದ ಬೆಲೆ ಇಳಿಕೆ, ಅಷ್ಟಕ್ಕೂ ಇಂದು ಎಷ್ಟು ಇಳಿಕೆಯಾಗಿದೆ ಗೊತ್ತಾ

Gold Rate Today: ಸೆಪ್ಟೆಂಬರ್ 19ರಂದು ದೇಶೀಯ ಮಾರುಕಟ್ಟೆ ಸೇರಿ ಬೆಂಗಳೂರಿನಲ್ಲೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ಒಂದು ವಾರದಿಂದ ಚಿನ್ನ ಹಾಗೂ ಬೆಳ್ಳಿಯ ದರ ಏರಿಳಿತ ನಡೆಯುತ್ತಲೇ ಇತ್ತು

Gold Price Today: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ನಿಧಾನವಾಗಿ ಇಳಿಯುತ್ತಿದ್ದು, ಆದರೂ ಮಹಿಳಾ ಖರೀದಿದಾರರಿಗೆ ಇದರಿಂದ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿಲ್ಲ. ಏಕೆಂದರೆ ಇಳಿಕೆ ಪ್ರಮಾಣವು ಅಲ್ಪವಾಗಿದ್ದು, ಹೆಚ್ಚುವರಿ ಖರೀದಿ ನಿರೀಕ್ಷೆಯನ್ನು ಹುಟ್ಟಿಸಿಲ್ಲ.

ಸೆಪ್ಟೆಂಬರ್ 19ರಂದು ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹1,11,160 ಮತ್ತು 22 ಕ್ಯಾರಟ್ ಬಂಗಾರದ ಬೆಲೆ ₹1,01,890 ದಾಖಲಾಗಿದೆ. ಬೆಂಗಳೂರಿನಲ್ಲಿಯೂ ಇದೇ ದರಗಳು ಅಸ್ತಿತ್ವದಲ್ಲಿವೆ.

ಮುಂಬೈ, ಹೈದರಾಬಾದ್ ಮತ್ತು ವಿಜಯವಾಡದಲ್ಲಿಯೂ ಸಹ ಇದೇ ಮಟ್ಟದ ದರಗಳು ದಾಖಲಾಗಿದ್ದರೆ, ದೆಹಲಿ ಹಾಗೂ ಚೆನ್ನೈಯಲ್ಲಿ ಸ್ವಲ್ಪ ಹೆಚ್ಚು ಬೆಲೆ ಕಂಡುಬಂದಿದೆ. ಚೆನ್ನೈ ಮಾರುಕಟ್ಟೆಯಲ್ಲಿ 24 ಕ್ಯಾರಟ್ 10 ಗ್ರಾಂ ಬೆಲೆ ₹1,11,480 ಆಗಿದ್ದು, 22 ಕ್ಯಾರಟ್ ದರ ₹1,02,190 ತಲುಪಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಿಸಿಕೊಂಡಿದ್ದು, ಅಮೇರಿಕಾದಲ್ಲಿ ಸ್ಪಾಟ್ ಗೋಲ್ಡ್ 0.2% ಇಳಿದು $3,654.29ಕ್ಕೆ ತಲುಪಿದೆ.

ಇದನ್ನೇ ಹೋಲುವಂತೆ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಗೋಲ್ಡ್ ಅಕ್ಟೋಬರ್ ಫ್ಯೂಚರ್ಸ್ ದರ 0.44% ಇಳಿಕೆ ಕಂಡು ₹1,09,339ಕ್ಕೆ ತಲುಪಿದೆ. ಬೆಳ್ಳಿ ಡಿಸೆಂಬರ್ ಫ್ಯೂಚರ್ಸ್ ದರ 0.63% ಇಳಿಕೆ ಕಂಡು ₹1,26,189 ದಾಖಲಾಗಿದೆ.

ಬೆಳ್ಳಿಯ ದರದಲ್ಲಿಯೂ ದೇಶೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ದಾಖಲಾಗಿ, ಪ್ರತಿ ಕಿಲೋಗೆ ₹1,30,900 ತಲುಪಿದೆ. ಆದರೆ ಕೆಲವು ರಾಜ್ಯಗಳಲ್ಲಿ ದರ ₹1,40,900 ಕ್ಕೂ ಹೆಚ್ಚು ದಾಖಲಾದದ್ದು ಗಮನಾರ್ಹ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,11,310 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,02,040 ರೂ.ಗಳಾಗಿದೆ.

ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,11,160 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,01,890 ರೂ.ಗಳಾಗಿದೆ.

ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,11,160 ರೂ.ಗಳಾಗಿದ್ದರೆ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,01,890 ರೂ.ಗಳಾಗಿದೆ.

ವಿಜಯವಾಡದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,11,160 ರೂ.ಗಳಾಗಿದ್ದರೆ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,01,890 ರೂ.ಗಳಲ್ಲೇ ಮುಂದುವರಿದಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,11,160 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,01,890 ರೂ.ಗಳಾಗಿದೆ.

ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,11,480 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,02,190 ರೂ.ಗಳಾಗಿದೆ.

Gold Prices Drop Slightly in Bengaluru and Major Cities

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories