ಚಿನ್ನದ ಬೆಲೆ ಇಳಿಕೆ ಕೇಳಿ ಬೆಂಗಳೂರು ಚಿನ್ನದಂಗಡಿಗಳಲ್ಲಿ ಜನವೋ ಜನ
ಕೆಲ ದಿನಗಳಿಂದ ಏರಿಳಿತದಲ್ಲಿರುವ ಚಿನ್ನದ ಬೆಲೆ ಇಂದು ಕಡಿಮೆಯಾಗಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಬಂಗಾರದ ಬೆಲೆ ಇಳಿಕೆಯಾಗಿದೆ.

- ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ
- 24 ಕ್ಯಾರೆಟ್ ಚಿನ್ನ ₹350 ಇಳಿಕೆ
- ಬೆಳ್ಳಿ ದರವೂ ₹1000 ಇಳಿಮುಖ
Gold Price Today : ಕಳೆದ ಕೆಲವು ದಿನಗಳಿಂದ ಏರಿಳಿತಕ್ಕೊಳಗಾಗಿದ್ದ ಚಿನ್ನದ ಬೆಲೆ (Gold Rates) ಇಂದು (ಶುಕ್ರವಾರ) ಇಳಿಕೆಯಾಗಿದೆ. ಅದರೊಂದಿಗೆ ಬೆಳ್ಳಿ (Silver) ದರದಲ್ಲೂ ಇಳಿಕೆ ಕಂಡುಬಂದಿದೆ, ಇದು ಗ್ರಾಹಕರಿಗೆ ಬಿಗ್ ರಿಲೀಫ್ ಸುದ್ದಿ.
ಹೌದು, ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದ್ದು, 24 ಕ್ಯಾರೆಟ್ ದರವು ₹350 ಹಾಗೂ 22 ಕ್ಯಾರೆಟ್ (22 Carat Gold Rate) ₹380 ಇಳಿಕೆಯಾಗಿದೆ. ಮುಂಬೈ, ದೆಹಲಿ, ಕೋಲ್ಕತಾ ನಗರಗಳಲ್ಲಿ ಈ ದರಗಳು ಸಮಾನವಾಗಿ ಕಂಡುಬಂದಿದ್ದರೆ, ಬೆಂಗಳೂರಿನಲ್ಲಿ (Bengaluru) 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹97,530 ಹಾಗೂ 22 ಕ್ಯಾರೆಟ್ ₹89,400ರಷ್ಟಿದೆ.
ಅದೇ ರೀತಿ, ಚೆನ್ನೈ, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿ ಕೂಡಾ ಈ ಇಳಿಕೆಯಾಗಿದೆ. ಖರೀದಿಗೆ ಯೋಚಿಸುತ್ತಿದ್ದವರಿಗೆ ಇದೀಗ ಸಮಯ ಸೂಕ್ತವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ, ಬೆಳ್ಳಿ ಬೆಲೆಗಳಲ್ಲಿ (Silver Price) ಕೂಡ ಇಳಿಕೆ ಕಂಡುಬಂದಿದ್ದು, ಕಳೆದ ಎರಡು ದಿನಗಳಲ್ಲಿ ₹4000ರಷ್ಟು ಏರಿದ್ದ ಬೆಲೆ, ಈಗ ಸುಮಾರು ₹1000 ಇಳಿಕೆ ಕಂಡಿದೆ. ಮುಂಬೈ, ದೆಹಲಿ ನಗರಗಳಲ್ಲಿ ಬೆಳ್ಳಿ ಬೆಲೆ ₹1,00,000 ದಷ್ಟಿದ್ದರೆ, ಹೈದರಾಬಾದ್, ಚೆನ್ನೈ, ಕೇರಳ ಮತ್ತು ವಿಶಾಖಪಟ್ಟಣಂನಲ್ಲಿ ₹1,11,000 ಮುಂದುವರೆದಿದೆ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಅಂತಾರಾಷ್ಟ್ರೀಯ ಡಾಲರ್ ಬಲ ಮತ್ತು ಇತರ ಆರ್ಥಿಕ ಅಂಶಗಳು ಇಂತಹ ಬೆಲೆಬದಲಾವಣೆಗಳಿಗೆ ಕಾರಣವಾಗುತ್ತವೆ. ಈ ಇಳಿಕೆಯಿಂದಾಗಿ ಔದ್ಯೋಗಿಕ ಬಳಕೆದಾರರು ಹಾಗೂ ಗೃಹ ಬಳಕೆದಾರರಿಗೆ ತಾತ್ಕಾಲಿಕ ಲಾಭ ದೊರೆಯಬಹುದು ಎಂಬ ನಿರೀಕ್ಷೆಯಿದೆ.
Gold Prices Drop Today in Bengaluru and other cities




