Gold Rate: ಚಿನ್ನದ ಬೆಲೆ ಆಲ್ಟೈಮ್ ಹೈ, ಬೆಂಗಳೂರು ಸೇರಿದಂತೆ ಗೋಲ್ಡ್ ಲವರ್ಸ್ಗೆ ಶಾಕ್!
Gold Price Today: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಆಲ್ಟೈಮ್ ಹೈ ತಲುಪಿದ್ದು, ಕಳೆದ ಐದು ದಿನಗಳಿಂದ ನಿರಂತರ ಏರಿಕೆಯಿಂದ ಗ್ರಾಹಕರು ಹಾಗೂ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದೆ.
- ಬೆಂಗಳೂರು ಚಿನ್ನದ ಬೆಲೆ ಆಲ್ಟೈಮ್ ಹೈ ತಲುಪಿದೆ
- 24 ಕ್ಯಾರಟ್, 22 ಕ್ಯಾರಟ್ ಗೋಲ್ಡ್ ರೇಟ್ ನಿರಂತರ ಏರಿಕೆ
- ಬೆಳ್ಳಿ ಬೆಲೆ ಕೂಡ ಜಿಗಿತ, ಮುಂದಿನ ವರ್ಷವೂ ಏರಿಕೆ ಅಂದಾಜು
Gold Price Today: ಬಂಗಾರ ಪ್ರಿಯರಿಗೆ ಇದು ನಿಜಕ್ಕೂ ಕಹಿ ಸುದ್ದಿ. ಬೆಂಗಳೂರು ಸೇರಿದಂತೆ ದೇಶದಾದ್ಯಂತ ಬಂಗಾರ ಮತ್ತು ಬೆಳ್ಳಿ ಬೆಲೆಗಳು ಆಕಾಶಕ್ಕೆ ಏರುತ್ತಿದ್ದು, ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಹೂಡಿಕೆ ಮತ್ತು ದೇಶೀಯ ಡಿಮ್ಯಾಂಡ್ ಕಾರಣವಾಗಿ ಕಳೆದ ಐದು ದಿನಗಳಿಂದ ನಿರಂತರ ಬೆಲೆ ಏರಿಕೆ ಕಂಡುಬಂದಿದೆ ಎಂದು ವ್ಯಾಪಾರ ವಲಯ ತಿಳಿಸಿದೆ.
ವಿಶೇಷವಾಗಿ ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರಗಳು (Gold Prices) ಆಲ್ಟೈಮ್ ಹೈ ತಲುಪಿದ್ದು, ಆಭರಣ ಖರೀದಿಗೆ ಮುಂದಾಗುವವರಿಗೆ ಬಜೆಟ್ ಪ್ಲಾನ್ ಬದಲಾಯಿಸುವ ಅನಿವಾರ್ಯತೆ ಎದುರಾಗಿದೆ. ಮುಂದಿನ ವರ್ಷವೂ ಗೋಲ್ಡ್ ಶಾಕ್ ತಪ್ಪುವುದಿಲ್ಲ ಎಂಬುದು ತಜ್ಞರ ಅಂದಾಜು.
ಕಳೆದ ಐದು ದಿನಗಳಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚುತ್ತಿವೆ. ಮುಂದಿನ ವರ್ಷವೂ ಬೆಲೆಗಳು ಹೆಚ್ಚಾಗಲಿವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ವರ್ಷ, ಚಿನ್ನದ ಬೆಲೆಗಳು ಶೇಕಡಾ 70 ರಷ್ಟು ಮತ್ತು ಬೆಳ್ಳಿ ಬೆಲೆಗಳು ಶೇಕಡಾ 140 ರಷ್ಟು ಹೆಚ್ಚಾಗಿದೆ.
ಇಂದಿನ ಬೆಂಗಳೂರು ಚಿನ್ನದ ಬೆಲೆ (Bengaluru Gold Rate Today)
- 24 ಕ್ಯಾರೆಟ್ ಬಂಗಾರ (ಪ್ರತಿ ಗ್ರಾಂ): ₹14,003
- 8 ಗ್ರಾಂ: ₹1,12,024
- 10 ಗ್ರಾಂ: ₹1,40,030
- 22 ಕ್ಯಾರೆಟ್ ಬಂಗಾರ (ಪ್ರತಿ ಗ್ರಾಂ): ₹12,836
- 8 ಗ್ರಾಂ: ₹1,02,688
- 10 ಗ್ರಾಂ: ₹1,28,360
ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಬೆಂಗಳೂರಿನಂತೆ ಹಲವೆಡೆ ಬೆಳ್ಳಿ ಕಿಲೋ ದರ ₹2.40 ಲಕ್ಷದಿಂದ ₹2.54 ಲಕ್ಷದವರೆಗೆ ವಹಿವಾಟಾಗಿದೆ.
ಪ್ರಮುಖ ನಗರಗಳ ಬಂಗಾರ–ಬೆಳ್ಳಿ ದರ
- ಚೆನ್ನೈ: 24K – ₹1,40,630 | 22K – ₹1,28,910 | ಬೆಳ್ಳಿ – ₹2,54,100
- ಮುಂಬೈ: 24K – ₹1,40,030 | 22K – ₹1,28,360 | ಬೆಳ್ಳಿ – ₹2,40,100
- ದೆಹಲಿ: 24K – ₹1,40,180 | 22K – ₹1,28,510 | ಬೆಳ್ಳಿ – ₹2,40,100
- ಹೈದರಾಬಾದ್ / ವಿಜಯವಾಡ / ವಿಶಾಖಪಟ್ನಂ: 24K – ₹1,40,030 | 22K – ₹1,28,360 | ಬೆಳ್ಳಿ – ₹2,54,100
ಹವಾಮಾನ, ಜಾಗತಿಕ ಮಾರುಕಟ್ಟೆ, ಡಾಲರ್ ಮೌಲ್ಯ, ಸ್ಥಳೀಯ ತೆರಿಗೆ ಹಾಗೂ ಡಿಮ್ಯಾಂಡ್ ಅಂಶಗಳ ಪ್ರಭಾವದಿಂದ ಚಿನ್ನದ ದರಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ಹೀಗಾಗಿ ಖರೀದಿಗೆ ಮುನ್ನ ನೇರ ಮಾರುಕಟ್ಟೆ ದರ ಪರಿಶೀಲಿಸುವಂತೆ ವ್ಯಾಪಾರಿಗಳು ಸಲಹೆ ನೀಡಿದ್ದಾರೆ.
ಗಮನಿಸಿ: ಮೇಲಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಾಲಕಾಲಕ್ಕೆ ಮಾರುಕಟ್ಟೆಯಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಆದ್ದರಿಂದ, ನೀವು ಚಿನ್ನವನ್ನು ಖರೀದಿಸುವಾಗ ಬೆಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಒಳ್ಳೆಯದು.



