ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು - Gold Price Today

ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ದರ ಏರಿಕೆ ಕಂಡಿದೆ. ಆದರೆ ಬೆಳ್ಳಿಯ ದರ ಸ್ವಲ್ಪ ಇಳಿಕೆಯಾಗಿದೆ.

  • ಬೆಂಗಳೂರು ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ
  • 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರ ಹೆಚ್ಚಳ
  • ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ದಾಖಲು

Gold Price Today : ಚಿನ್ನವು ಭಾರತೀಯರ ಜೀವನದಲ್ಲಿ ಕೇವಲ ಆಭರಣವಲ್ಲ, ಒಂದು ಬಲವಾದ ಹೂಡಿಕೆ ಆಯ್ಕೆಯೂ ಹೌದು. ಚಿನ್ನ ಒಂದು ಭದ್ರವಾದ ಆಸ್ತಿ ಎಂದು ಪರಿಗಣಿಸಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು ಹಾಗೂ ಡಾಲರ್ ಮೌಲ್ಯದ ಬದಲಾವಣೆಗಳು ನೇರವಾಗಿ ಭಾರತದ ಚಿನ್ನದ ದರಗಳ ಮೇಲೆ ಪರಿಣಾಮ ಬೀರುತ್ತವೆ.

ಇಂದು (ಆಗಸ್ಟ್ 30) ಶನಿವಾರ, ಬೆಂಗಳೂರು (Bangalore Gold Price) ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಏರಿಕೆ ದಾಖಲಾಗಿದೆ. 24 ಕ್ಯಾರೆಟ್ ಚಿನ್ನದ (99.9 ಶುದ್ಧತೆ) 10 ಗ್ರಾಂ ದರವು ರೂ. 1,03,320 ತಲುಪಿದ್ದು, 22 ಕ್ಯಾರೆಟ್ ಚಿನ್ನದ (916 ಶುದ್ಧತೆ) 10 ಗ್ರಾಂ ದರವು ರೂ. 94,710 ತಲುಪಿದೆ.

ಇದನ್ನೂ ಓದಿ: ಬಂತು ಇಎಂಐ ಕ್ರೆಡಿಟ್ ಕಾರ್ಡ್, ಜಸ್ಟ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಬಹುದು

ಬೆಂಗಳೂರು (Bengaluru) ಸೇರಿದಂತೆ ಮುಂಬೈ, ಕೋಲ್ಕತಾ, ದೆಹಲಿ, ಚೆನ್ನೈ, ಕೇರಳ ನಗರಗಳಲ್ಲಿ ದರಗಳು ಒಂದೇ ಸಮಾನವಾಗಿ ದಾಖಲಾಗಿವೆ.

ಮುಂಬೈ ಮತ್ತು ಕೋಲ್ಕತಾದಲ್ಲಿ 24 ಕ್ಯಾರೆಟ್ ಚಿನ್ನ ರೂ. 1,03,320, 22 ಕ್ಯಾರೆಟ್ ರೂ. 94,710ಗೆ ಮಾರಾಟವಾಗಿದೆ. ದೆಹಲಿಯಲ್ಲಿ 24 ಕ್ಯಾರೆಟ್ ರೂ. 10,347, 22 ಕ್ಯಾರೆಟ್ ರೂ. 9,486 ದರ ದಾಖಲಾಗಿದೆ.

ಇದೇ ವೇಳೆ, ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಹೈದರಾಬಾದ್ ಹಾಗೂ ಇತರೆ ನಗರಗಳಲ್ಲಿ 1 ಕೆ.ಜಿ ಬೆಳ್ಳಿ ದರ ರೂ. 1,29,800ಕ್ಕೆ ಇಳಿದಿದೆ. ದೀರ್ಘಾವಧಿ ಹೂಡಿಕೆ ಮಾಡಲು ಬಯಸುವವರಿಗೆ ಬೆಳ್ಳಿ ಸಹ ಉತ್ತಮ ಆಯ್ಕೆಯಾಗಿದೆ ಎಂಬ ಅಭಿಪ್ರಾಯ ತಜ್ಞರದು.

ಇದನ್ನೂ ಓದಿ: ಈ ಯೋಜನೆಯಲ್ಲಿ ನಿಮಗೂ ಸಿಗುತ್ತೆ 15 ಸಾವಿರ, ಮೋದಿಜಿ ಸರ್ಕಾರದಿಂದ ಭರ್ಜರಿ ಸುದ್ದಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

ಚೆನ್ನೈ 24 ಕ್ಯಾರೆಟ್ ಚಿನ್ನದ ಬೆಲೆ ರೂ. 103320, 22 ಕ್ಯಾರೆಟ್ ಚಿನ್ನದ ಬೆಲೆ ರೂ. 94710

ಮುಂಬೈ 24 ಕ್ಯಾರೆಟ್ ಚಿನ್ನದ ಬೆಲೆ ರೂ. 103320, 22 ಕ್ಯಾರೆಟ್ ಚಿನ್ನದ ಬೆಲೆ  ರೂ. 94710

ದೆಹಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 10,347, 22 ಕ್ಯಾರೆಟ್ ಚಿನ್ನದ ಬೆಲೆ ರೂ. 94860

ಕೋಲ್ಕತ್ತಾ 24 ಕ್ಯಾರೆಟ್ ಚಿನ್ನದ ಬೆಲೆ ರೂ. 103320 , 22 ಕ್ಯಾರೆಟ್ ಚಿನ್ನದ ಬೆಲೆ ರೂ. 94710

ಬೆಂಗಳೂರು 24 ಕ್ಯಾರೆಟ್ ಚಿನ್ನದ ಬೆಲೆ ರೂ. 103320, 22 ಕ್ಯಾರೆಟ್ ಚಿನ್ನದ ಬೆಲೆ  ರೂ. 94710

ಕೇರಳ 24 ಕ್ಯಾರೆಟ್ ಚಿನ್ನದ ಬೆಲೆ ರೂ. 103320, 22 ಕ್ಯಾರೆಟ್ ಚಿನ್ನದ ಬೆಲೆ ರೂ. 94710

Gold Prices Rise in Bengaluru, Silver Sees a Slight Dip Today

English Summary▼

TRENDING ARTICLES1 / 5
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories