Aadhaar-Pan Linking: ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡುವು ವಿಸ್ತರಣೆ? ಉಪಯುಕ್ತ ಮಾಹಿತಿ

ಪ್ರಸ್ತುತ ಹಣಕಾಸು ಸಂಬಂಧಿತ ವಿಷಯಗಳಿಗೆ ಪ್ಯಾನ್ ಕಾರ್ಡ್ (Pan Card) ಕಡ್ಡಾಯವಾಗಿದೆ. ಅಂತೆಯೇ ಪ್ರತಿಯೊಬ್ಬರಿಗೂ ಆಧಾರ್ (Aadhaar Card) ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನೀವು ಇನ್ನೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ Link ಮಾಡದಿದ್ದರೆ ಶೀಘ್ರದಲ್ಲೇ ಲಿಂಕ್ ಮಾಡಿಕೊಳ್ಳಿ.

Aadhaar Card-Pan Card Linking: ಪ್ರಸ್ತುತ ಹಣಕಾಸು ಸಂಬಂಧಿತ ವಿಷಯಗಳಿಗೆ ಪ್ಯಾನ್ ಕಾರ್ಡ್ (Pan Card) ಕಡ್ಡಾಯವಾಗಿದೆ. ಅಂತೆಯೇ ಪ್ರತಿಯೊಬ್ಬರಿಗೂ ಆಧಾರ್ (Aadhaar Card) ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನೀವು ಇನ್ನೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ Link ಮಾಡದಿದ್ದರೆ ಶೀಘ್ರದಲ್ಲೇ ಲಿಂಕ್ ಮಾಡಿಕೊಳ್ಳಿ.

Updated: ಈ ಲೇಖನ ಇತ್ತೀಚಿನ ಮಾಹಿತಿಯೊಂದಿಗೆ ಅಪ್ಡೇಟ್ ಆಗಿದೆ, ಆಧಾರ್ ಪ್ಯಾನ್ ಲಿಂಕ್ ಗಡುವು ವಿಸ್ತರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ದಿನಾಂಕ ಹಾಗೂ ಮಾಹಿತಿಗಾಗಿ ಈ ಲೇಖನ ಓದಿ : PAN Aadhaar Link: ಪ್ಯಾನ್ ಆಧಾರ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದ ಕೇಂದ್ರ ಸರ್ಕಾರ, ಜೂನ್ 30 ರವರೆಗೆ ಗಡುವು ವಿಸ್ತರಣೆ

ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್

ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೇಂದ್ರವು ಈಗಾಗಲೇ ಹಲವು ಬಾರಿ ಗಡುವನ್ನು ವಿಸ್ತರಿಸಿದೆ. ಈಗ ರೂ.1000 ದಂಡದೊಂದಿಗೆ ಮಾರ್ಚ್ 31, 2023 ರ ತನಕ ಗಡುವು ಇದೆ. ಗಡುವು ಮುಗಿದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

Aadhaar-Pan Linking: ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡುವು ವಿಸ್ತರಣೆ? ಉಪಯುಕ್ತ ಮಾಹಿತಿ - Kannada News

PAN Aadhaar Link: ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಈ ಪ್ರಮುಖ 5 ಸಮಸ್ಯೆಗಳು ಎದುರಾಗುತ್ತವೆ!

ಆದರೆ ಯಾವುದೇ ದಂಡ ಶುಲ್ಕವಿಲ್ಲದೆ ಮಾರ್ಚ್ 31, 2022 ರ ಮೊದಲು ಪ್ಯಾನ್ ಅನ್ನು ಲಿಂಕ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಅದರ ನಂತರ ದಂಡವನ್ನು ಪಾವತಿಸಬೇಕಾಯಿತು. ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು 500 ರೂಪಾಯಿ ದಂಡವನ್ನು ಸಹ ಪಾವತಿಸಬೇಕಾಯಿತು. ನಂತರ ಸರ್ಕಾರವು ಪ್ಯಾನ್-ಆಧಾರ್ ಲಿಂಕ್‌ಗೆ ಗಡುವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿತು. ಆದರೆ ರೂ. 1000 ದಂಡ ಪಾವತಿಸಿ ಲಿಂಕ್ ಮಾಡಬೇಕಾಗುತ್ತದೆ.

ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್ ಗಡುವು ವಿಸ್ತರಣೆ?

ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು ಕೆಲವು ತಿಂಗಳುಗಳವರೆಗೆ ವಿಸ್ತರಿಸಬಹುದು ಮತ್ತು ಆದಾಯ ತೆರಿಗೆ ಇಲಾಖೆ ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ ಗಡುವು ಮಾರ್ಚ್ 31, 2023 ರಂದು ಮುಕ್ತಾಯಗೊಳ್ಳುವ ಮೊದಲು ತೆರಿಗೆದಾರರಿಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಹೆಚ್ಚಿನ ಸಮಯವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

Aadhaar Ration Card Link: ರೇಷನ್ ಕಾರ್ಡ್ ಆಧಾರ್ ಕಾರ್ಡ್‌ ಲಿಂಕ್ ಗಡುವನ್ನು ವಿಸ್ತರಿಸಲು ಕೇಂದ್ರ ನಿರ್ಧಾರ

ಆದಾಯ ತೆರಿಗೆ ಇಲಾಖೆಯ ಪ್ರಕಾರ.. ಮೇ 2017 ರ ಅಧಿಸೂಚನೆಯು ತೆರಿಗೆ ವಿನಾಯಿತಿ ವರ್ಗಕ್ಕೆ ಒಳಪಡದ ಎಲ್ಲಾ ಪ್ಯಾನ್ ಹೊಂದಿರುವವರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಪ್ಯಾನ್ ರದ್ದಾಗುತ್ತದೆ.

https://www.incometax.gov.in ನಲ್ಲಿ 1,000 ರೂಪಾಯಿ ಶುಲ್ಕವನ್ನು ಪಾವತಿಸಿದ ನಂತರ ಮಾನ್ಯ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬಹುದು.

ಆಧಾರ್-ಪ್ಯಾನ್ ಲಿಂಕ್ ಮಾಡುವ ಗಡುವು ಹಲವು ಬಾರಿ ವಿಸ್ತರಣೆ

ಆಧಾರ್-ಪ್ಯಾನ್ ಲಿಂಕ್ ಮಾಡುವ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಮಾರ್ಚ್ 31, 2022 ರ ಮೊದಲು ಲಿಂಕ್ ಮಾಡುವ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿತ್ತು. ಏಪ್ರಿಲ್ 1, 2022 ರಿಂದ ರೂ. 500 ಶುಲ್ಕ ವಿಧಿಸಲಾಯಿತು. ನಂತರ ಜುಲೈ 1, 2022 ರಿಂದ ರೂ. 1,000 ಕ್ಕೆ ಹೆಚ್ಚಿಸಲಾಯಿತು. ಆಧಾರ್-ಪ್ಯಾನ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸುವ ಮೂಲಕ, ಈ ಬಾರಿ ಸರ್ಕಾರವು ಸಾಮಾನ್ಯ ಜನರಿಗೆ ಇದೆ ದಂಡದೊಂದಿಗೆ ಲಿಂಕ್ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Voter ID Aadhaar Card Link: ವೋಟರ್ ಐಡಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಗಡುವು ವಿಸ್ತರಣೆ !

ಆದರೆ ಲಿಂಕ್ ಮಾಡದವರು ತಪ್ಪದೆ ಈ ಕೂಡಲೇ ಲಿಂಕ್ ಮಾಡಿಕೊಳ್ಳಿ ಇಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ, ಇದರಿಂದ ನಿಮ್ಮ ಬ್ಯಾಂಕ್ ವಹಿವಾಟು ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗುತ್ತದೆ.

Government may extend the deadline for Aadhaar Card Pan Card linking

Follow us On

FaceBook Google News

Government may extend the deadline for Aadhaar Card Pan Card linking

Read More News Today