ಆನ್ಲೈನ್ ಪೇಮೆಂಟ್ ಮಾಡೋರಿಗೆ ಹೊಸ ನಿಯಮ! ಇನ್ಮುಂದೆ ಹಣ ಕಳಿಸೋದು ಇನ್ನಷ್ಟು ಸುಲಭ

ಆನ್ಲೈನ್ ಪೇಮೆಂಟ್ ಮಾಡುವವರಿಗೆ ಹೊಸ ನಿಯಮ ಒಂದನ್ನು ಜಾರಿಗೆ ತರಲಾಗಿದೆ. ಇನ್ಮುಂದೆ ಆನ್ಲೈನ್ ಮೂಲಕ ಹಣ ಕಳಿಸುವುದು ಬಹಳ ಸುಲಭವಾಗುತ್ತದೆ

ಈಗ ಬ್ಯಾಂಕ್ ಗೆ ಹೋಗಿ ಹಣದ ವಹಿವಾಟು ನಡೆಸುವುದು ಬಹಳ ಕಡಿಮೆ, ಅಗತ್ಯವಿದ್ದರೆ ಎಮರ್ಜೆನ್ಸಿ ಇದ್ದರೆ ಮಾತ್ರ ಜನರು ಬ್ಯಾಂಕ್ ಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಈಗ ಹೆಚ್ಚಿನ ಜನರು ಆನ್ಲೈನ್ ಪೇಮೆಂಟ್ (Online Payment) ಮಾಡುತ್ತಾರೆ. ಗೂಗಲ್ ಪೇ (Google Pay), ಫೋನ್ ಪೇ (PhonePe) ಸೇರಿದಂತೆ ಅನೇಕ ರೀತಿಯ ಆನ್ಲೈನ್ ಪೇಮೆಂಟ್ ವಿಧಾನಗಳಿವೆ.

ಯಾರಿಗೆ ಆದರೂ ಹಣ ಕಳಿಸಬೇಕು ಎಂದರೆ ಈ ಸುಲಭ ವಿಧಾನವನ್ನು ಅನುಸರಿಸುತ್ತಾರೆ. ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಡಿಜಿಟಲ್ ಇಂಡಿಯಾ (Digital India) ಶುರು ಮಾಡಿದ ಮೇಲೆ ಹೆಚ್ಚಿನ ಜನರು ಆನ್ಲೈನ್ ಪೇಮೆಂಟ್ ಮಾಡುತ್ತಾರೆ.. ಈಗ ಆನ್ಲೈನ್ ಪೇಮೆಂಟ್ ಮಾಡುವವರಿಗೆ ಹೊಸ ನಿಯಮ ಒಂದನ್ನು ಜಾರಿಗೆ ತರಲಾಗಿದೆ.

ಈ ಹೊಸ ನಿಯಮದಿಂದ ಇನ್ಮುಂದೆ ಆನ್ಲೈನ್ ಮೂಲಕ ಹಣ ಕಳಿಸುವುದು ಬಹಳ ಸುಲಭವಾಗುತ್ತದೆ. ಅದು ಹೇಗೆ ಎಂದರೆ, ನೀವು ಆನ್ಲೈನ್ ಪೇಮೆಂಟ್ ಮಾಡುವುದನ್ನು ಫೇಶಿಯಲ್ ರೆಕಗ್ನಿಶನ್ (Facial Recognition) ಮೂಲಕ ಮಾಡಬಹುದು. ಈ ಸೇವೆ ಈಗ ಲಭ್ಯವಿರುವುದು ಪೇಟಿಎಂ (PayTm) ಅಪ್ಲಿಕೇಶನ್ ನಲ್ಲಿ. ಹೌದು ಸ್ನೇಹಿತರೇ ನಮ್ಮಲ್ಲಿ ಹಲವಾರು ಜನರು ಆನ್ಲೈನ್ ವಹಿವಾಟು ನಡೆಸಲು ಪೇಟಿಎಂ ಬಳಸುತ್ತೇವೆ.

ಆನ್ಲೈನ್ ಪೇಮೆಂಟ್ ಮಾಡೋರಿಗೆ ಹೊಸ ನಿಯಮ! ಇನ್ಮುಂದೆ ಹಣ ಕಳಿಸೋದು ಇನ್ನಷ್ಟು ಸುಲಭ - Kannada News

ಇನ್ನುಮುಂದೆ ನೀವು ಕಾರ್ಡ್ ಸ್ಟೈಪಿಂಗ್ ಅಥವಾ QR Code ಮೂಲಕ ಹಣ ಕಳಿಸುವ ಬದಲು ಫೇಶಿಯಲ್ ರೆಕಗ್ನಿಶನ್ ಮೂಲಕ ಹಣ ಕಳಿಸಬಹುದು. ಪೇಟಿಎಂ ಸಂಸ್ಥೆಯ ನಿರ್ದೇಶರಾಗಿರುವ ವಿಜಯ್ ಶೇಖರ್ ಶರ್ಮಾ ಅವರು ಈ ವಿಚಾರದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಭಾರತ ದೇಶದಲ್ಲಿ ಹೆಚ್ಚು ಉಪಯೋಗಿಸಲ್ಪಡುವ ಪೇಟಿಎಂ ಇನ್ನುಮುಂದೆ ಫೇಶಿಯಲ್ ರೆಕಗ್ನಿಶನ್ ಮೂಲಕ ಹಣದ ವಹಿವಾಟು ನಡೆಸುವುದಕ್ಕೆ ಹೊಸ ತಂತ್ರಜ್ಞಾನವನ್ನು ಬಳಸಿ ಆ ರೀತಿಯಲ್ಲೇ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಈ ಹೊಸ ತಂತ್ರಜ್ಞಾನದ ಅನುಸಾರ ಚೆಕ್ ಇನ್ ಮಾಡುವಾಗ ಕಾರ್ಡ್, ಸ್ಟೈಪಿಂಗ್, ಪಂಚಿಂಗ್, ಫೋನ್ QR Code ಪ್ರಕ್ರಿಯೆ ಇದ್ಯಾವುದರ ಅವಶ್ಯಕತೆ ಕೂಡ ಇನ್ಮುಂದೆ ಬರುವುದಿಲ್ಲ. ಇನ್ನುಮುಂದೆ ಆನ್ಲೈನ್ ಪಾವತಿ ಮಾಡುವುದು ಇನ್ನಷ್ಟು ಸುಲಭವಾಗುತ್ತದೆ. ಪ್ರಾಡಕ್ಟ್ ಗಳನ್ನು ಹಾಕುವುದು ಸರಕುಗಳ ಲಿಸ್ಟ್ ಪಡೆಯುವುದು ಇದೆಲ್ಲದಕ್ಕೂ ಸರಳ ಕ್ರಮ ಸಾಕು ಎಂದು ತಿಳಿಸಿದ್ದಾರೆ.

ಹೊಸ ತಂತ್ರಜ್ಞಾನ ಸೇವೆಗಳಿಂದ ನಿಮ್ಮ ಮುಖವನ್ನು ಫೇಶಿಯಲ್ ರೆಕಗ್ನಿಶನ್ ಇಂದ ನೀವು ಹನಪಾವತಿ ಮಾಡಬಹುದು.. ಈ ಸೇವೆಯನ್ನು ಸಕ್ಸಸ್ ಫುಲ್ ಆಗಿ ಮಾಡುವ ಹೊಸ ತಂತ್ರಜ್ಞಾನವನ್ನು ತಯಾರಿಸುವ ಕೆಲಸ ಈಗಾಗಲೇ ಶುರುವಾಗಿದ್ದು, ಯಾವ ಹಂತದಲ್ಲಿದೆ, ಯಾವಾಗ ಪೂರ್ತಿಯಾಗುತ್ತದೆ ಎಂದು ಅಧಿಕೃತ ಮಾಹಿತಿ ಸಿಗಬೇಕಿದೆ.

Government new rules for online payment

ಇದರ ಬಗ್ಗೆ ಈಗಲೇ ಏನು ಹೇಳಲು ಆಗೋದಿಲ್ಲ ಎಂದು ಪೇಟಿಎಂ ಸಂಸ್ಥೆ ತಿಳಿಸಿದೆ.. ನಮ್ಮ ದೇಶದಲ್ಲಿ QR ಕೋಡ್ ಶುರು ಮಾಡಿದ ಮೊದಲ ಕಂಪನಿ ಪೇಟಿಎಂ. ನಂತರದ ದಿನಗಳಲ್ಲಿ QR ಬಳಸಿ ಪೇಮೆಂಟ್ ಮಾಡುವ ಯಶಸ್ಸು ಗೂಗಲ್ ಪೇ, ಫೋನ್ ಪೇ, ಮೆಟಾ ಈ ಎಲ್ಲಾ ಸಂಸ್ಥೆಗಳಿಗೂ ಸಿಗುತ್ತದೆ..

Government new rules for online payment

Follow us On

FaceBook Google News

Government new rules for online payment