ಭಾರತೀಯರ ಕೂದಲು ಅಂದ್ರೆ ಭಾರೀ ಬೇಡಿಕೆ, ಅಷ್ಟಕ್ಕೂ ಒಂದು ಕೆಜಿ ಕೂದಲಿನ ಬೆಲೆ ಎಷ್ಟು ಗೊತ್ತಾ?
1 KG Hair Price : ನಮಗೆ ಕೂದಲು ಅಂದರೆ ವೇಸ್ಟ್ ಗೆ ಸಮ, ಆದರೆ ನೀವು ಬೆಚ್ಚಿ ಬೀಳುವ ಸುದ್ದಿ ಇದೆ! ಹೌದು, ಸ್ನೇಹಿತರೆ ನಮ್ಮ ಕೂದಲಿನಿಂದ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಅದರಲ್ಲೂ ಭಾರತೀಯರ ಕೂದಲಿಗೆ (Hair) ವಿಶ್ವದಲ್ಲಿ ಉತ್ತಮ ಬೇಡಿಕೆಯಿದೆ.
ಪ್ರಪಂಚದಲ್ಲಿ ಕೂದಲು ಬೆಳೆಯುವ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇದು ಕೇಳಲು ಹೊಸ ಮತ್ತು ಕುತೂಹಲಕಾರಿಯಾಗಿದೆ ಅಲ್ಲವೇ? ಇಷ್ಟಕ್ಕೂ ಈ ಕೂದಲು ಆಮದು ಮಾಡಿಕೊಂಡು ಅವರು ಏನು ಮಾಡ್ತಾರೆ ಎಂಬ ಸಹಜ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು, ಬನ್ನಿ ಆ ಪ್ರಶ್ನೆಗೆ ಉತ್ತರ ತಿಳಿಯೋಣ. ಪ್ರಪಂಚದ ದೇಶಗಳಿಗೆ ರಫ್ತು ಮಾಡುವ ಕೂದಲನ್ನು ಅವರು ಏನು ಮಾಡುತ್ತಾರೆ ಎಂಬ ಸಂಪೂರ್ಣ ವಿವರ ನೋಡೋಣ.

ನಮ್ಮ ದೇಶದಲ್ಲಿ ನಾವು ವೆಸ್ಟೇಜ್ ಎಂದು ಕರೆಯುವ ನಮ್ಮ ಕೂದಲು ಕೋಟಿಗಟ್ಟಲೆ ವ್ಯಾಪಾರವಾಗುತ್ತದೆ. ಸಲೂನ್ ಮತ್ತು ದೇವಸ್ಥಾನಗಳಲ್ಲಿ ಬಿಡುವ ಕೂದಲನ್ನು ಖಾಸಗಿಯವರೊಂದಿಗೆ ಹೆಚ್ಚಾಗಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.
ರಿಲಯನ್ಸ್ ಜಿಯೋ ಇಂಡಿಪೆಂಡೆನ್ಸ್ ಡೇ ಆಫರ್! ವರ್ಷ ಪೂರ್ತಿ ಬಳಸಿ ಫ್ರೀ ಇಂಟರ್ನೆಟ್, ಇಲ್ಲಿದೆ ಹೊಸ ರಿಚಾರ್ಜ್ ಪ್ಲಾನ್
ರಫ್ತು ಮಾಡಿದ ಕೂದಲನ್ನು ಹೆಚ್ಚಾಗಿ ವಿಗ್ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಇನ್ನು ಕೆಲವೆಡೆ ಔಷಧ ಮತ್ತು ಇತರ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನಮ್ಮಲ್ಲಿ ಕೆಜಿ ಕೂದಲು ಇದ್ರೆ ಅದರ ಬೆಲೆ ಬರೋಬ್ಬರಿ 30,000 ಕ್ಕೂ ಹೆಚ್ಚು, ಅಲ್ಲದೆ ಭಾರತವು ವಿಶ್ವದ 2,27,372 ರವಾನೆಯೊಂದಿಗೆ ಅಗ್ರಸ್ಥಾನದಲ್ಲಿದೆ.
ಇಂಡೋನೇಷ್ಯಾ 29,230 ಸಾಗಣೆಯೊಂದಿಗೆ 2 ನೇ ಸ್ಥಾನದಲ್ಲಿದೆ, ಚೀನಾ 24,128 ಸಾಗಣೆಗಳೊಂದಿಗೆ ಮೂರನೇ ಸ್ಥಾನ. ಹಾಂಗ್ ಕಾಂಗ್, ಪಾಕಿಸ್ತಾನ, ಬ್ರೆಜಿಲ್ ನಂತರದ ಸ್ಥಾನದಲ್ಲಿವೆ. ಭಾರತದಲ್ಲಿ ದೊರೆಯುವ ಕೂದಲಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಭಾರತದಲ್ಲಿ ದೊರೆಯುವ ಕೂದಲು ಉತ್ತಮ ಗುಣಮಟ್ಟದ್ದಾಗಿದೆ ಹಾಗಾಗಿ ಹಲವು ದೇಶಗಳಲ್ಲಿ ಭಾರತೀಯ ಕೂದಲಿಗೆ ಬೇಡಿಕೆಯಿದೆ.
ಈ ಮೂಲಕ ಭಾರತದಿಂದ ರಫ್ತಾಗುವ ಕೂದಲಿನಿಂದ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿದೆ. ಕಳೆದ 5 ವರ್ಷಗಳಲ್ಲಿ ತಲೆಗೂದಲನ್ನು ಹೊರದೇಶಗಳಿಗೆ ಸಾಕಷ್ಟು ರಫ್ತು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ಅಧಿಕೃತವಾಗಿ ಘೋಷಿಸಿದ್ದಾರೆ. ಸಂಸತ್ ಅಧಿವೇಶನಗಳಲ್ಲಿ ಅನುಪ್ರಿಯಾ ಪಟೇಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಶ್ವದ ಹಲವು ದೇಶಗಳು ರಫ್ತು ಮಾಡುವ ಕೂದಲನ್ನು ಆಮದು ಮಾಡಿಕೊಳ್ಳುತ್ತವೆ. ಇದರಲ್ಲಿ ಇಂಡೋನೇಷ್ಯಾ ಶೇ.31ರಷ್ಟು ಕೂದಲನ್ನು ಆಮದು ಮಾಡಿಕೊಳ್ಳುತ್ತದೆ. ಆಸ್ಟ್ರಿಯಾ ಶೇ.16.5, ಮ್ಯಾನ್ಮಾರ್ ಶೇ.14.6, ವಿಯೆಟ್ನಾಂ ಮತ್ತು ಇಟಲಿ ನಂತರದ ಸ್ಥಾನದಲ್ಲಿದೆ. ನಮ್ಮ ದೇಶದಿಂದ ರಫ್ತಾಗುವ ಬಹುತೇಕ ಕೂದಲು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ರಫ್ತು ಮಾಡಲಾಗುತ್ತದೆ
Growing demand for Indian hair, Know the 1 KG Hair Price