ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಗೋಲ್ಡ್ ಲೋನ್ ನಿಯಮಗಳಲ್ಲಿ ಧಿಡೀರ್ ಬದಲಾವಣೆ

Gold Loan : ಯಾವುದೇ ಅಡಮಾನ ಇಲ್ಲದೆ ವೈಯಕ್ತಿಕ ಸಾಲವನ್ನು (Personal Loan) ಸುಲಭವಾಗಿ ಪಡೆಯಬಹುದು. ಆದರೆ ವೈಯಕ್ತಿಕ ಸಾಲ ಹಾಗೂ ಚಿನ್ನದ ಮೇಲಿನ ಸಾಲ (Gold Loan) ಎನ್ನುವ ಆಯ್ಕೆ ಬಂದಾಗ ಯಾವುದು ಉತ್ತಮ ಆಯ್ಕೆ ಎಂಬುದನ್ನು ನೋಡಬೇಕು

Gold Loan : ತುರ್ತು ಪರಿಸ್ಥಿತಿಯಲ್ಲಿ (emergency time) ಹಣದ ಅವಶ್ಯಕತೆ ಇರುವಾಗ ಒಂದಲ್ಲ ಒಂದು ರೀತಿಯಲ್ಲಿ ಧನ ಸಹಾಯ ಪ್ರತಿಯೊಬ್ಬರಿಗೂ ಅಗತ್ಯ ಇರುತ್ತದೆ. ಅದಕ್ಕಾಗಿ ನಾವು ಬ್ಯಾಂಕ್ (Bank) ಅಥವಾ ಫೈನಾನ್ಸ್ ಕಂಪನಿಗಳಲ್ಲಿ (finance company) ಸಾಲ ಸೌಲಭ್ಯ ತೆಗೆದುಕೊಳ್ಳುವುದು ಸಹಜ.

ನೀವು ಯಾವುದೇ ಉದ್ಯೋಗದಲ್ಲಿ ಇದ್ದರೂ ಸ್ವಂತ ಉದ್ದಿಮೆ ಮಾಡುತ್ತಿದ್ದರು ಕೂಡ ಯಾವುದೇ ಅಡಮಾನ ಇಲ್ಲದೆ ವೈಯಕ್ತಿಕ ಸಾಲವನ್ನು (Personal Loan) ಸುಲಭವಾಗಿ ಪಡೆಯಬಹುದು. ಆದರೆ ವೈಯಕ್ತಿಕ ಸಾಲ ಹಾಗೂ ಚಿನ್ನದ ಮೇಲಿನ ಸಾಲ (Gold Loan) ಎನ್ನುವ ಆಯ್ಕೆ ಬಂದಾಗ ಯಾವುದು ಉತ್ತಮ ಆಯ್ಕೆ ಎಂಬುದನ್ನು ನೋಡಬೇಕು.

ರೈತರಿಗಾಗಿ ಕ್ರೆಡಿಟ್ ಕಾರ್ಡ್ ಯೋಜನೆ! ಕೃಷಿ ಅಗತ್ಯಗಳಿಗಾಗಿ ಪಡೆಯಬಹುದು ಸಾಲ

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಗೋಲ್ಡ್ ಲೋನ್ ನಿಯಮಗಳಲ್ಲಿ ಧಿಡೀರ್ ಬದಲಾವಣೆ - Kannada News

ವೈಯಕ್ತಿಕ ಸಾಲದ ಮೇಲಿನ ನಿಯಮ ಬದಲಾವಣೆ (personal loan rules changed)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕ್ ನಲ್ಲಿ ನೀಡಲಾಗುವ ವೈಯಕ್ತಿಕ ಸಾಲದ ಮೇಲಿನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ವೈಯಕ್ತಿಕ ಸಾಲ (personal loan) ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೆ ಕೊಡುವಂತಹ ಸಾಲವಾಗಿರುತ್ತೆ.

ಈ ಸಾಲವನ್ನು ತೆಗೆದುಕೊಂಡ ವ್ಯಕ್ತಿ ಸಾಲ ಮರುಪಾವತಿ ಮಾಡದೆ ಇದ್ದರೆ ಆತ ಡೀಫಾಲ್ಟರ್ (defaulter) ಆಗುತ್ತಾನೆ. ಹಾಗೂ ಇದು ಬ್ಯಾಂಕಿಗೆ ನಷ್ಟವು ಆಗಬಹುದು. ಆದ್ದರಿಂದ ವೈಯಕ್ತಿಕ ಸಾಲದ ನಿಯಮಗಳನ್ನು ಇನ್ನಷ್ಟು ಬಲಪಡಿಸಲಾಗಿದೆ. ಅದೇ ರೀತಿ ಬಡ್ಡಿ ದರ ಕೂಡ ಜಾಸ್ತಿಯಾಗಿದೆ.

ಚಿನ್ನ ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ? ಶುದ್ಧತೆ ಚೆಕ್ ಮಾಡಲು ಸುಲಭ ವಿಧಾನ

ಚಿನ್ನದ ಸಾಲದ ನಿಯಮಗಳಲ್ಲಿ ಬದಲಾವಣೆ! (Gold loan rules changed)

Gold Loanಇದೀಗ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಲು ನೀವು ಬಯಸಿದರೆ ಬದಲಾದ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವುದಿದ್ದರೆ ಈಗ ಬಹಳ ಬೇಗ ಸಾಲ ಪಡೆಯಬಹುದು. ನೀವು ಚಿನ್ನವನ್ನು ಅಡವಿಟ್ಟು ಕೆಲವೇ ನಿಮಿಷಗಳಲ್ಲಿ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ಅಷ್ಟೇ ಅಲ್ಲ ಆನ್ಲೈನ್ ಮೂಲಕವೂ ಕೂಡ ಚಿನ್ನದ ಮೇಲಿನ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.

ಮಹಿಳೆಯರಿಗೆ ಸಂತಸದ ಸುದ್ದಿ, ಚಿನ್ನದ ಬೆಲೆ ಭಾರೀ ಇಳಿಕೆ! ಚಿನ್ನ ಬೆಳ್ಳಿ ಖರೀದಿ ಜೋರು

ಚಿನ್ನದ ಸಾಲ ಬೆನಿಫಿಟ್ (Benefits of gold loan)

ಚಿನ್ನದ ಮೇಲೆ ಸಾಲ ಪಡೆದುಕೊಂಡರೆ ಸಾಕಷ್ಟು ಬೆನಿಫಿಟ್ ಗಳು ಕೂಡ ಇದೆ, ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಮೇಲಿನ ಸಾಲದ ಬಡ್ಡಿದರ ಕೂಡ ಕಡಿಮೆ, ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ (credit score) ಉತ್ತಮ ವಾಗಿಲ್ಲದೆ ಇದ್ದರೂ ಕೂಡ ಚಿನ್ನದ ಮೇಲೆ ಸಾಲವನ್ನು ಪಡೆದುಕೊಳ್ಳಬಹುದು.

ಚಿನ್ನದ ಮೇಲಿನ ಸಾಲದ ಮತ್ತೊಂದು ಪ್ರಮುಖ ಪ್ರಯೋಜನ ಅಂದ್ರೆ ನೀವು ವೈಯಕ್ತಿಕ ಸಾಲದಂತೆ ಚಿನ್ನದ ಸಾಲಕ್ಕೆ ಪ್ರತಿ ತಿಂಗಳು EMI ಪಾವತಿಸಬೇಕಾಗಿಲ್ಲ. ನೀವು ಸಾಲ ತೆಗೆದುಕೊಂಡ ತಕ್ಷಣವೇ ಸಂಪೂರ್ಣ ಬಡ್ಡಿಯನ್ನು (interest) ಪಾವತಿಸಿ ಸಾಲದ ಅವಧಿ ಮುಗಿಯುವಾಗ ಉಳಿದ ಹಣವನ್ನು ಪಾವತಿಸಬಹುದು ಅಥವಾ ಪ್ರತಿ ತಿಂಗಳು ಕೇವಲ ಬಡ್ಡಿಯನ್ನು ಮಾತ್ರ ಪಾವತಿಸಿ ಸಂಪೂರ್ಣ ಅಸಲು ಮೊತ್ತವನ್ನು ಸಾಲದ ಅವಧಿ ಮುಗಿದಾಗ ಪಾವತಿಸಬಹುದು.

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ (gold rate increased) ಕೂಡ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ನೀವು ಇಡುವ ಚಿನ್ನಕ್ಕೆ ಹೆಚ್ಚಿನ ಮೊತ್ತದ ಸಾಲವನ್ನು ಕೂಡ ಪಡೆದುಕೊಳ್ಳಬಹುದು. ನಿಮ್ಮ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತದೆ ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಗೋಲ್ಡ್ ಲೋನ್ ಬೇಕಾದ್ರೆ ಚಿನ್ನ ಖರೀದಿ ಮಾಡಿರೋ ರಶೀದಿ ಇರಬೇಕಾ? ಇಲ್ಲಿದೆ ಮಾಹಿತಿ

ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಂಡರೆ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಹಜವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಜಾಸ್ತಿ ಆಗುತ್ತದೆ, ಒಂದೊಂದು ಬ್ಯಾಂಕ್ಗಳಲ್ಲಿ ಒಂದೊಂದು ರೀತಿಯ ಬಡ್ಡಿ ದರ ನಿಗದಿಪಡಿಸಲಾಗಿದ್ದು ಸುಮಾರು 8.5% ನಿಂದ 29% ವರೆಗೂ ಕೂಡ ಬಡ್ಡಿದರ ಇರುತ್ತದೆ. ನೀವು ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಬ್ಯಾಂಕ್ನ ಚಿನ್ನದ ಮೇಲಿನ ಸಾಲದ ಬಡ್ಡಿ ದರದ ಬಗ್ಗೆ ತಿಳಿದುಕೊಳ್ಳಿ.

Follow us On

FaceBook Google News

Have you taken a Gold loan, Know changes in gold loan terms