ಸೆಕೆಂಡ್ ಹ್ಯಾಂಡ್ ಬೈಕ್ ಬೇಕಾ? ಬರಿ ₹21,000 ಕ್ಕೆ ಮಾರಾಟಕ್ಕಿದೆ ಸ್ಪ್ಲೆಂಡರ್ ಪ್ಲಸ್
ಸೆಕೆಂಡ್ ಹ್ಯಾಂಡ್ ಬೈಕ್‌ಗಳಿಗೆ ಜನರಲ್ಲಿ ಬೇಡಿಕೆ ಏರಿದ ಬೆನ್ನಲ್ಲೇ, ಹೀರೋ ಸ್ಪ್ಲೆಂಡರ್ ಪ್ಲಸ್ ಇದೀಗ OLX ಮತ್ತು ಇತರ (online platforms) ನಲ್ಲಿ ಕೇವಲ ₹21,000 ಕ್ಕೆ ಲಭ್ಯವಿರುವ ಸುದ್ದಿ ಗಮನ ಸೆಳೆಯುತ್ತಿದೆ.

- OLX ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್‌ಗಳು
- ಮುಂಗಡ ಪಾವತಿ ಮಾಡುವ ಮೊದಲು ಪರಿಶೀಲನೆ ಮುಖ್ಯ
- ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳು 80+ km/l ಮೈಲೇಜ್ ನೀಡುವ ವಿಶ್ವಾಸಾರ್ಹ ಆಯ್ಕೆ
Secondhand Bikes : ಇತ್ತೀಚೆಗಿನ ಆಫರ್‌ಗಳ ಪ್ರಕಾರ, ಹರಿಯಾಣದ ಫಾರಿದಾಬಾದ್‌ನಲ್ಲಿ ನೋಂದಾಯಿತವಾಗಿ ಕೇವಲ 3 ತಿಂಗಳ (90 days used bike) ಹಳೆಯ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus Bike) ಒಂದು ಕೇವಲ ₹21,000 ಕ್ಕೆ ಮಾರಾಟಕ್ಕಿದೆ.
A1 ಕಂಡೀಷನ್, 81 ಕಿಮೀ/ಲೀಟರ್ ಮೈಲೇಜ್, ಹಾಗೂ ಎಂಜಿನ್ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ತಿಳಿಸಲಾಗಿದೆ. ಕೇವಲ ಇದೊಂದೇ ಅಲ್ಲ, ಇಂತಹ ಅನೇಕ ಬೈಕ್ ಗಳನ್ನು ಇತ್ತೀಚಿಗೆ ಬಹುತೇಕ ಕಾಣಬಹುದು.
ಇದನ್ನೂ ಓದಿ: ರೈತರಿಗೆ ಸಬ್ಸಿಡಿ, ಕೃಷಿ ಉಪಕರಣಗಳ ಖರೀದಿಗೆ ₹3 ಲಕ್ಷದವರೆಗೆ ಸಾಲ ಸೌಲಭ್ಯ
OLX, Quikr ಮುಂತಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಬೈಕ್‌ಗಳು ಲಭ್ಯ
ಹೀರೋ ಸ್ಪ್ಲೆಂಡರ್ ಪ್ಲಸ್ ಖರೀದಿ ಮಾಡಲು OLX ಮುಂತಾದ (online classifieds) ಪ್ಲಾಟ್‌ಫಾರ್ಮ್‌ಗಳು ಜನಪ್ರಿಯವಾಗಿವೆ. ಇಲ್ಲಿ 360 ಡಿಗ್ರಿ ವೀಕ್ಷಣೆ, ಡೀಲರ್ ವಿವರಣೆ, ಫೋಟೋಗಳು, ಹಾಗೂ ಇನ್‌ಸ್ಪೆಕ್ಷನ್ ಆಯ್ಕೆಗಳಿವೆ. ಆದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲೂ ನಕಲಿ ಲಿಸ್ಟಿಂಗ್‌ಗಳು ಇರುವ ಸಾಧ್ಯತೆ ಇರುವ ಕಾರಣ, ಖರೀದಿ ಮಾಡುವ ಮೊದಲು ಚೆನ್ನಾಗಿ ಪರಿಶೀಲಿಸಿ.
ವಾಹನದ ಮೇಲಿನ ಬೆಲೆ ಏರಿಕೆ ನಡುವೆಯೂ, ಹೆಚ್ಚು ದುಡ್ಡು ಹೂಡಿಸಲು ಸಾದ್ಯವಾಗದವರಿಗೆ ಉತ್ತಮ ಸೆಕೆಂಡ್ ಹ್ಯಾಂಡ್ ಬೈಕ್‌ಗಳು ಒಳ್ಳೆಯ ಆಯ್ಕೆಯಾಗಿದೆ. ಹೊಸದಾಗಿ ಖರೀದಿಸದೇ ಇದ್ದರೂ, ಖುದ್ದಾಗಿ ಉಪಯೋಗಿಸಿ ನೋಡಿದ ಬೈಕ್‌ಗಳನ್ನು ಮರುಮಾರಾಟದ (resale bikes) ಮೂಲಕ ಪಡೆದುಕೊಳ್ಳುವುದು ಯೋಗ್ಯ ಆಯ್ಕೆ.
ಇದನ್ನೂ ಓದಿ: ಇನ್ಮುಂದೆ ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಮುಗೀತು ಕತೆ! ಕಠಿಣ ರೂಲ್ಸ್ ಜಾರಿ
ಈ ರೀತಿ ಎಚ್ಚರಿಕೆ ಕ್ರಮ ಕೈಗೊಂಡರೆ ನಿಮ್ಮ ಹಣ ಸುರಕ್ಷಿತ
ಯಾವುದೇ ಪಾವತಿ ಮಾಡುವ ಮೊದಲು RC, ಇನ್ಶೂರೆನ್ಸ್ ಸೇರಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ
QR ಕೋಡ್ ಅಥವಾ OTP ಮೂಲಕ ನೇರ ಪಾವತಿ ಮಾಡದಿರಿ
ಆನ್‌ಲೈನ್‌ನಲ್ಲಿ ಲಭ್ಯವಿರುವ ರಿವ್ಯೂ ಓದಿ, ಪ್ಲಾಟ್‌ಫಾರ್ಮ್ ನಿಂದ ಬೆಂಬಲ ಲಭ್ಯವಿದೆಯೆ ಎಂದು ನೋಡಿ
ಸೆಕೆಂಡ್ ಹ್ಯಾಂಡ್ ಬೈಕ್ ಆಯ್ಕೆ ಮಾಡುವಾಗ ಏನು ನೋಡಬೇಕು?
ಬೈಕ್ ಖರೀದಿಸುವ ಮೊದಲು ಅದರ ಇತಿಹಾಸ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ವಾಹನದ RC (Registration Certificate) ಪರಿಶೀಲಿಸಿ, ಅದು ಮಾಲಿಕರ ಹೆಸರಿನಲ್ಲಿ ಸರಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇನ್ಶೂರೆನ್ಸ್ ಮತ್ತು ಸರ್ವಿಸ್ ದಾಖಲಾತಿ ಇದ್ದರೆ ಮತ್ತಷ್ಟು ಉತ್ತಮ. ಈ ಮೂಲಕ ನೀವು ಕಾನೂನುಬದ್ಧವಾಗಿ ಬಳಸಬಹುದಾದ ಬೈಕ್ ಅನ್ನೇ ಖರೀದಿಸುತ್ತೀರಿ ಎಂಬ ವಿಶ್ವಾಸ ಪಡೆಯಬಹುದು.
ಇದನ್ನೂ ಓದಿ: 150 ಕಿಮೀ ಮೈಲೇಜ್ ರೇಂಜ್ ನಲ್ಲಿ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ 2025 ಲಾಂಚ್
ಟೆಸ್ಟ್ ರೈಡ್, ಮೈಲೇಜ್ ಪರಿಶೀಲನೆ, ಮೆಕ್ಯಾನಿಕ್ ನ ಅಭಿಪ್ರಾಯ ಪಡೆಯಿರಿ
ಬೈಕ್ ಖರೀದಿಸುವ ಮೊದಲು ನೀವು ಪರ್ಸನಲ್ ಟೆಸ್ಟ್ ರೈಡ್ (test ride) ಮಾಡುವುದು ಬಹುಮುಖ್ಯ. ಎಂಜಿನ್ ಶಬ್ದ, ಬ್ರೇಕ್ ಸ್ಥಿತಿ, ಗಿಯರ್ ಬದಲಾವಣೆ, ಟೈರ್ ನ ಸ್ಥಿತಿ ಮುಂತಾದವುಗಳನ್ನು ಗಮನಿಸಿ. ಸಾಧ್ಯವಾದರೆ ಒಬ್ಬ ಅನುಭವಿ ಮೆಕ್ಯಾನಿಕ್ ಜೊತೆಗೂ ಹೋಗಿ, ಪರಿಶೀಲಿಸಿ.
ಕೆಲ ಪ್ಲಾಟಫಾರ್ಮ್ (bike resale platforms) ಗಳು ತಮ್ಮದೇ ಆದ ತಜ್ಞರ ಪರೀಕ್ಷೆಯ ಬಳಿಕ ಬೈಕ್ ಪಟ್ಟಿ ಮಾಡುತ್ತವೆ – ಈ ರೀತಿಯ ಸೇವೆಗಳೂ ಉಪಯುಕ್ತವಾಗಬಹುದು.
ಇವುಗಳಿಂದ ನೀವು ಉತ್ತಮ, ನಂಬಿಕಸ್ತ ಸೇವೆಯೊಂದಿಗೆ ಬೆಲೆಬಾಳುವ ಸೆಕೆಂಡ್ ಹ್ಯಾಂಡ್ ಬೈಕ್ (Secondhand Bike) ಅನ್ನು ಆಯ್ಕೆ ಮಾಡಬಹುದು.
Hero Splendor Plus Available at Just ₹21,000 Online




