ಮಹಿಳೆಯರಿಗೆ ಸಿಗಲಿದೆ 32 ಸಾವಿರ, ಮೋದಿ ಸರ್ಕಾರದಿಂದ ಬಂಪರ್ ಯೋಜನೆ

ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ಹೊಂದಿರುವವರು ಕನಿಷ್ಠ ರೂ.1,000 ರಿಂದ ರೂ.2 ಲಕ್ಷದವರೆಗೆ ಹೂಡಿಕೆ ಮಾಡಬಹುದು.

- - - - - - - - - - - - - Story - - - - - - - - - - - - -

ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅವುಗಳಲ್ಲಿ ಒಂದು ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ (MSSC).

ಮಹಿಳೆಯರನ್ನು ಹೂಡಿಕೆಯತ್ತ ಆಕರ್ಷಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗಾಗಿ ಪರಿಚಯಿಸಲಾಗಿದೆ.

ಮಹಿಳೆಯರು ಮಾಡಿದ ಹೂಡಿಕೆಯ ಮೇಲೆ ಆಕರ್ಷಕ ಆದಾಯವನ್ನು ಒದಗಿಸುವುದು ಇದರ ಮೂಲ ಉದ್ದೇಶ. 2023 ರ ಕೇಂದ್ರ ಬಜೆಟ್‌ನಲ್ಲಿ ಭಾರತ ಸರ್ಕಾರ ಘೋಷಿಸಿದ ಈ ಯೋಜನೆಯು ಮಹಿಳೆಯರಿಗೆ ಬೆಂಬಲವಾಗಿದೆ.

Women Scheme

ಈ ಯೋಜನೆಯ ಮೂಲಕ ಮಹಿಳೆಯರು ಅಥವಾ ಬಾಲಕಿಯರ ಹೆಸರಿನಲ್ಲಿ 2 ವರ್ಷಗಳ ಅವಧಿಗೆ 2 ಲಕ್ಷ ರೂ. ಹೂಡಿಕೆ ಮಾಡಬಹುದು, ಇದಕ್ಕೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯು ಅಂಚೆ ಕಛೇರಿ ಮತ್ತು ಅನೇಕ ಬ್ಯಾಂಕುಗಳಲ್ಲಿ (Banks) ಲಭ್ಯವಿದೆ. 2023 ರಲ್ಲಿ ಪ್ರಾರಂಭವಾದ ಈ ಯೋಜನೆಯು ಎರಡು ವರ್ಷಗಳವರೆಗೆ ಅಂದರೆ ಮಾರ್ಚ್ 2025 ರವರೆಗೆ ಲಭ್ಯವಿರುತ್ತದೆ.

ರೈತರಿಗೆ ಗುಡ್ ನ್ಯೂಸ್, ಯಾವುದೇ ಅಡಮಾನವಿಲ್ಲದೆ ಸಿಗುತ್ತೆ 2 ಲಕ್ಷ ರೂ.ವರೆಗೆ ಸಾಲ

ಮಹಿಳಾ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಈ ಯೋಜನೆ ತಂದಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ವರ್ಷಕ್ಕೆ 7.5 ಪ್ರತಿಶತದಷ್ಟು ಸ್ಥಿರ ಬಡ್ಡಿಯನ್ನು ಪಡೆಯುತ್ತಾರೆ. ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಈ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ಯಾವುದೇ ಮಹಿಳೆ ಈ ಯೋಜನೆಗೆ ಸೇರಲು ಅವಕಾಶವಿದೆ.

ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ಹೊಂದಿರುವವರು ಕನಿಷ್ಠ ರೂ.1,000 ರಿಂದ ರೂ.2 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದರ ಅವಧಿಯ ಮಿತಿ ಎರಡು ವರ್ಷ ಎಂದು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ.

ಚಿನ್ನದ ಬೆಲೆ ಇಳಿಕೆ, ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ! ಇಲ್ಲಿದೆ ಡೀಟೇಲ್ಸ್

High interest is being paid on this Women Scheme

Related Stories