ಹೋಂ ಲೋನ್ ಇಎಂಐ ಹೇಗೆ ಆಯ್ಕೆ ಮಾಡಬೇಕು? ಬ್ಯಾಂಕ್‌ಗಳು ಮುಚ್ಚಿಡುವ ಸತ್ಯ ಇದು - Home Loan Tenure

Home Loan: ಗೃಹ ಸಾಲಕ್ಕೆ ಸರಿಯಾದ ಅವಧಿ ಆರಿಸದೇ ಇರೋದ್ರಿಂದ EMI ಹೆಚ್ಚಳ-ಬಡ್ಡಿ ಭಾರ ಹೆಚ್ಚಾಗೋ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡ್ತಿದ್ದಾರೆ. ಮೊದಲೇ ಸ್ಪಷ್ಟತೆ ಇಟ್ಟುಕೊಂಡ್ರೆ ಮಾತ್ರ ಸಾಲದ ಒತ್ತಡ ಕಡಿಮೆಯಾಗುತ್ತದೆ.

Home Loan: ಸ್ವಂತ ಮನೆ ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಇದಕ್ಕಾಗಿ ಅನೇಕರು ಹೋಮ್ ಲೋನ್ ಮೊರೆ ಹೋಗುತ್ತಾರೆ. ಆದರೆ ಸಾಲಕ್ಕೆ ಅರ್ಜಿ ಹಾಕುವ ಮೊದಲು ಟೇನ್ಯುರ್‌ (Home Loan Tenure) ಬಗ್ಗೆ ಸ್ಪಷ್ಟ ಅರಿವು ಇರೋದು ಅತ್ಯಂತ ಮುಖ್ಯ. ಟೇನ್ಯುರ್‌ ತಪ್ಪಾಗಿ ಆಯ್ಕೆ ಮಾಡಿದ್ರೆ EMI ಜಾಸ್ತಿ ಅಥವಾ ಬಡ್ಡಿ ದ್ವಿಗುಣವಾಗುವ ಸ್ಥಿತಿ ಬರಬಹುದು.

ಬಹುತೇಕ ಜನರಿಗೆ 10 ವರ್ಷ, 20 ವರ್ಷ ಅಥವಾ 30 ವರ್ಷ ಟೇನ್ಯುರ್‌ ಯಾವುದು ಸೂಕ್ತ ಅನ್ನೋದು ಗೊಂದಲವಾಗಿರುತ್ತದೆ. ಕಡಿಮೆ ಅವಧಿ ಆಯ್ಕೆ ಮಾಡಿದರೆ EMI ಜಾಸ್ತಿಯಾಗುತ್ತದೆ, ಆದರೆ ಬಡ್ಡಿ ಬಹಳಷ್ಟು ಉಳಿಯುತ್ತದೆ. ಅದೇ ಹೆಚ್ಚು ಅವಧಿ ತಗೊಂಡರೆ EMI ಕಡಿಮೆಯಾಗುತ್ತದೆ ಆದರೂ, ಒಟ್ಟಾರೆ ಪಾವತಿಸೋ ಬಡ್ಡಿ ಗಗನಕ್ಕೇರುತ್ತದೆ ಅನ್ನೋದು ಹಣಕಾಸು ಯೋಜಕರ ಮಾತು.

ಸಣ್ಣ ಅವಧಿಯ ಲೋನ್‌ ತೆಗೆದುಕೊಂಡರೆ ಪ್ರತಿ ತಿಂಗಳು ಹೆಚ್ಚು EMI ಪಾವತಿಸಬೇಕಾಗುತ್ತದೆ, ಆದರೆ ಒಟ್ಟು ಬಡ್ಡಿಯಲ್ಲಿ ಭಾರಿ ಸೇವಿಂಗ್ ಮಾಡಬಹುದು. ವಿಶೇಷವಾಗಿ ಮಾಸಿಕ ಖರ್ಚು ಕಡಿಮೆ ಇರುವವರು, ಸ್ಟೇಡಿ ಇನ್‌ಕಮ್ ಇದ್ದವರು 10–15 ವರ್ಷದ ಸಾಲ ಆಯ್ಕೆ ಮಾಡಿದ್ರೆ 40ರ ಒಳಗೆ ಸಾಲ ಮುಗಿಸೋದು ಸಾಧ್ಯ.

ಇನ್ನೊಬ್ಬರಿಗೆ 30 ವರ್ಷದ ಲೋನ್‌ ‘ಸೇಫ್’ ಅಂತ ಅನ್ನಿಸಬಹುದು. EMI ಕಡಿಮೆ ಇರುವ ಕಾರಣ ಮೊದಲಿನ ದಿನಗಳಲ್ಲಿ ಒತ್ತಡ ಕಡಿಮೆ ಇರುತ್ತದೆ. ಆದ್ರೆ ಇಂಥಾ ಅವಧಿಯಲ್ಲಿ ಬಡ್ಡಿ ಮಾತ್ರ ದ್ವಿಗುಣವಾಗುವ ಸಾಧ್ಯತೆ ಇದೆ. ಆರಂಭಿಕ ವೇತನ ಕಡಿಮೆ ಇರುವ ಜನರಿಗೆ ಮಾತ್ರ ಇದು ತಾತ್ಕಾಲಿಕ ಪರಿಹಾರ.

ಬಹುತೇಕ ಕುಟುಂಬಗಳಿಗೆ 20 ವರ್ಷದ ಟೇನ್ಯುರ್‌ ಅನುಕೂಲಕರ ಅಂತ ತಜ್ಞರು ಹೇಳುತ್ತಾರೆ. EMI ನಿರ್ವಹಿಸೋದಲ್ಲೂ ಸುಲಭ, ನಿವೃತ್ತಿಗಿಂತ ಮೊದಲೇ ಸಾಲ ಮುಗಿಯುತ್ತದೆ. 30ರ ವಯಸ್ಸಿನವರು ಈ ಅವಧಿ ಆಯ್ಕೆ ಮಾಡಿದ್ರೆ ಕಾಸ್ಟ್ ಮತ್ತು ಕಂಫರ್ಟ್ ನಡುವೆ ಸಮತೋಲನ ಸಿಗುತ್ತದೆ.

ಬ್ಯಾಂಕ್‌ಗಳು ಲೋನ್‌ (Bank Loan) ಸ್ಯಾಂಕ್ಷನ್ ಮಾಡುವಾಗ ಅರ್ಜಿದಾರರ ವಯಸ್ಸನ್ನೂ ಪರಿಗಣಿಸುತ್ತವೆ. 35ರ ಒಳಗಿನವರಿಗೆ 25–30 ವರ್ಷದ ಟೇನ್ಯುರ್‌ ಆಫರ್ ಮಾಡೋದು ಸಾಮಾನ್ಯ.

ಸಾಲಕ್ಕೆ ಸರಿಯಾದ ಟೇನ್ಯುರ್‌ ಆಯ್ಕೆ ಮಾಡಲು ಮೊದಲು ಟೇಕ್‌-ಹೋಮ್‌ ಆದಾಯದ 35–40% ಮಾತ್ರ EMI ಆಗಿ ಹೋಗುವಂತೆ ನೋಡಿಕೊಳ್ಳಬೇಕು. ಆದಾಯ ಹೆಚ್ಚಾಗುವ ಸಾಧ್ಯತೆ ಇದ್ದರೆ ಹೆಚ್ಚಿನ ಅವಧಿ ತೆಗೆದುಕೊಂಡು ನಂತರ ಪ್ರೀಪೇಮೆಂಟ್ ಮಾಡಬಹುದು. ಬಡ್ಡಿದರ ಕಡಿಮೆಯಾದಾಗ ಶಾರ್ಟ್ ಟೇನ್ಯುರ್ ಉತ್ತಮ. ಫ್ಲೋಟಿಂಗ್‌ ರೇಟ್‌ ಆಯ್ಕೆ ಮಾಡಿದ್ರೆ ಮಾರುಕಟ್ಟೆಯ ಲಾಭಗಳು ಸ್ವಯಂಚಾಲಿತವಾಗಿ ಸಿಗುತ್ತವೆ.

Home Loan Tenure, How to Choose the Right EMI Period

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories