ಭಾರತದ ಅತ್ಯಂತ ಜನಪ್ರಿಯ ಸ್ಕೂಟರ್ ಇದು! ಭಾರೀ ಡಿಮ್ಯಾಂಡ್, ಭರ್ಜರಿ ಮೈಲೇಜ್
ಹೋಂಡಾ ಆಕ್ಟಿವಾ ಭಾರತದ ಅತ್ಯಂತ ಜನಪ್ರಿಯ ಸ್ಕೂಟರ್ ಆಗಿದ್ದು, ಈಗ 3.5 ಕೋಟಿ ಮಾರಾಟದ ಮೈಲಿಗಲ್ಲು ದಾಟಿದೆ. ಸರಳ ವಿನ್ಯಾಸ, ಉತ್ತಮ ಮೈಲೇಜ್ ಹಾಗೂ ನಂಬಿಕೆ ಇದರ ಯಶಸ್ಸಿನ ಗುಟ್ಟು.

Honda Activa Scooter: ಹೋಂಡಾ ಆಕ್ಟಿವಾ ಈಗ ಭಾರತದ ದ್ವಿ-ಚಕ್ರಗಳ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದೆ. 2001ರಲ್ಲಿ ಬಿಡುಗಡೆಗೊಂಡ ಈ ಸ್ಕೂಟರ್ ಇದೀಗ 3.5 ಕೋಟಿ ಯೂನಿಟ್ ಮಾರಾಟದ ಮೈಲಿಗಲ್ಲು ತಲುಪಿದೆ.
ಈ ಸಂಖ್ಯೆಯು ಭಾರತದಲ್ಲಿ ಯಾವುದೇ ಸ್ಕೂಟರ್ ಸಾಧಿಸದ ದಾಖಲೆ. ಆಕ್ಟಿವಾ 110, ಆಕ್ಟಿವಾ 125 ಮತ್ತು ಆಕ್ಟಿವಾ-ಐ ಮಾದರಿಗಳು ಈ ಯಶಸ್ಸಿಗೆ ಕಾರಣವಾಗಿವೆ.
ಆಕ್ಟಿವಾ ಬಿಡುಗಡೆಗೊಂಡಾಗ ಸ್ಕೂಟರ್ ವಿಭಾಗದಲ್ಲಿ ಹೊಸ ಯುಗವನ್ನು ಆರಂಭಿಸಿತು. ಎಲ್ಲಾ ವಯಸ್ಸಿನವರು, ಯುವಕರು, ಮಹಿಳೆಯರು ಹಾಗೂ ಹಿರಿಯರು ಬಳಸುವಂತಹ ಸುಲಭ ಮತ್ತು ವಿಶ್ವಾಸಾರ್ಹ ವಿನ್ಯಾಸ ಈ ಸ್ಕೂಟರ್ಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಮಹಿಳೆಯರಿಗೆ ಸಹ ಈ ಸ್ಕೂಟರ್ ಅತ್ಯಂತ ಅನುಕೂಲಕರವಾಗಿದೆ ಎಂಬುದು ಇದರ ವಿಶೇಷತೆ.
ಹೋಂಡಾ ಕಂಪನಿ ಕಳೆದ ಎರಡು ದಶಕಗಳಲ್ಲಿ ಗ್ರಾಹಕರ ಅಗತ್ಯಗಳ ಪ್ರಕಾರ ಆಕ್ಟಿವಾ ಮಾದರಿಗಳನ್ನು ಅಪ್ಡೇಟ್ ಮಾಡುತ್ತ ಬಂದಿದೆ. ಕ್ಯಾಂಬಿ ಬ್ರೇಕ್ ಸಿಸ್ಟಮ್, H-ಸ್ಮಾರ್ಟ್ ತಂತ್ರಜ್ಞಾನ, ಸ್ಮಾರ್ಟ್ ಕೀ, LED ಹೆಡ್ಲೈಟ್, ಡಿಜಿಟಲ್ ಮೀಟರ್ ಮತ್ತು ಬ್ಲೂಟೂತ್ ಸಂಪರ್ಕದಂತಹ ವೈಶಿಷ್ಟ್ಯಗಳು ಇದರಲ್ಲಿ ಲಭ್ಯ. ಇತ್ತೀಚೆಗೆ ಕಂಪನಿ ಆಕ್ಟಿವಾ ಎಲೆಕ್ಟ್ರಿಕ್ ಮಾದರಿಯನ್ನೂ ಪರಿಚಯಿಸಿದೆ.
ಜನಪ್ರಿಯತೆ ಹೆಚ್ಚಿಸುತ್ತಾ ಬಂದಿರುವ ಆಕ್ಟಿವಾ, 2015ರ ವೇಳೆಗೆ 1 ಕೋಟಿಯ ಮಾರಾಟ ತಲುಪಿತ್ತು. ನಂತರ ಕೇವಲ ಮೂರು ವರ್ಷಗಳಲ್ಲಿ ಅದು 2 ಕೋಟಿಗೆ ಏರಿತು. ಈಗ 2025ರಲ್ಲಿ 3.5 ಕೋಟಿ ಯೂನಿಟ್ ಮಾರಾಟದ ಸಾಧನೆಯಿಂದ ಹೋಂಡಾ ಕಂಪನಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ.
ಆಕ್ಟಿವಾದ ಯಶಸ್ಸಿನ ಮತ್ತೊಂದು ಪ್ರಮುಖ ಕಾರಣ ಅದರ ಕಡಿಮೆ ನಿರ್ವಹಣಾ ವೆಚ್ಚ. ಹೋಂಡಾ ಡೀಲರ್ಶಿಪ್ ನೆಟ್ವರ್ಕ್ ಭಾರತಾದ್ಯಂತ ವ್ಯಾಪಕವಾಗಿದ್ದು, ಯಾವುದೇ ಪಟ್ಟಣದಲ್ಲಿಯೂ ಸರ್ವೀಸ್ ಸುಲಭವಾಗಿ ದೊರೆಯುತ್ತದೆ. ಕಡಿಮೆ ಮೆಂಟಿನೆನ್ಸ್ ಮತ್ತು ಹೆಚ್ಚು ಮೈಲೇಜ್ನಿಂದಾಗಿ ಇದು ಗ್ರಾಹಕರ ಮನಸೆಳೆಯುತ್ತಿದೆ.
ಆಕ್ಟಿವಾ ಇಂದಿಗೂ ಹೋಂಡಾ ಕಂಪನಿಯ ಒಟ್ಟು ಮಾರಾಟದ 50 ಶೇಕಡಕ್ಕಿಂತ ಹೆಚ್ಚು ಹಂಚಿಕೆಯನ್ನು ಹೊಂದಿದೆ. ಭಾರತದ ರಸ್ತೆಗಳಲ್ಲಿ ಪ್ರತಿಯೊಂದು ಮೂಲೆಮೂಲೆಯಲ್ಲೂ ಕಾಣಸಿಗುವ ಈ ಸ್ಕೂಟರ್, ನಂಬಿಕೆಯ ಪರ್ಯಾಯವಾಗಿ ಬೆಳೆದಿದೆ.
Honda Activa crosses 3.5 crore sales milestone in India







