ಹೋಟೆಲ್ ತಿಂಡಿ ಪ್ರಿಯರಿಗೆ ಬಿಗ್ ಶಾಕ್! ಹಾಲಿನ ದರ ಏರಿಕೆ ಜೊತೆಗೆ ಹೋಟೆಲ್ ತಿಂಡಿ ದರದಲ್ಲೂ ಬದಲಾವಣೆ!

ನಮ್ಮ ರಾಜ್ಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಜನರಿಗೆ ಜೀವನ ನಡೆಸಲು ಕಷ್ಟವಾದ ಪರಿಸ್ಥಿತಿ ಎದುರಾಗಿದೆ.. ರಾಜ್ಯ ಸರ್ಕಾರ (Government of Karanataka) 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಿರುವುದರಿಂದ ವಿದ್ಯುತ್ ಬೆಲೆಯನ್ನು ಏರಿಸಿತು. ವಿದ್ಯುತ್ ಬೆಲೆ ಏರಿಕೆಯ ಪರಿಣಾಮ ಈಗ ಬೇರೆ ಎಲ್ಲದರ ಮೇಲು ಬೀರಿದೆ.

ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. ವಿದ್ಯುತ್ ಬೆಲೆ ಏರಿಕೆ ಆಗುತ್ತಿದ್ದ ಹಾಗೆ ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿದೆ. ಕೆಎಂಎಫ್ (KMF) ಹಾಲಿನ ಬೆಲೆಯನ್ನು ಪರಿಷ್ಕರಿಸಬೇಕು ಎಂದು ಹೇಳಿ, ಹಾಲಿನ ಬೆಲೆ (Milk rate) ಹೆಚ್ಚಿಸುವ ಬಗ್ಗೆ ಸರ್ಕಾರದ ಜೊತೆಗೆ ಮಾತುಕತೆ ನಡೆಸಿತು. ಆ ಮಾತಿನಂತೆ ಈಗ, ಆಗಸ್ಟ್ 1ರಿಂದ ಹಾಲಿನ ಬೆಲೆ ಹೆಚ್ಚು ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ.

ಹಾಲಿನ ಬೆಲೆ ಹೆಚ್ಚಾಗುವುದರ ಪರಿಣಾಮ ಹೋಟೆಲ್ ಗಳ ಮೇಲೆ ಬೀರಲಿದ್ದು, ಇದರಿಂದ ಹೋಟೆಲ್ ನಲ್ಲಿ ತಿಂಡಿಗಳ ಬೆಲೆ ಕೂಡ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿಯೇ ಮಾಹಿತಿ ಸಿಕ್ಕಿದೆ..ಬೆಂಗಳೂರು (Bangalore) ಹೋಟೆಲ್ ಮಾಲೀಕರ ಸಂಘಗಳ ಅಧ್ಯಕ್ಷರಾದ ಪಿಸಿ ರಾವ್ (PC Rao) ಅವರು ಈ ಬಗ್ಗೆ ಮಾಹಿತಿ ನೀಡಿದೆ.

ಹೋಟೆಲ್ ಆಹಾರದ ಬೆಲೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಹೋಟೆಲ್ ನಲ್ಲಿ ಸಿಗುವ ಎಲ್ಲಾ ತಿಂಡಿಗಳ ಬೆಲೆ ಮಾತ್ರವಲ್ಲದೆ ಕಾಫಿ ಟೀ ಬೆಲೆಗಳನ್ನು ಕೂಡ ಏರಿಸಬೇಕು ಎಂದು ತಿಳಿಸಿದ್ದು, ಅವುಗಳ ಬೆಲೆಯಲ್ಲಿ 10% ಅಷ್ಟು ಹೆಚ್ಚು ಮಾಡಬೇಕು ಎಂದು ನಿರ್ಧಾರ ಮಾಡಲಾಗಿದ್ದು, ಕೆಲವು ಹೋಟೆಲ್ ಮಾಲೀಕರು 20% ಹೆಚ್ಚಿಸಬೇಕು ಎಂದು ರಿಕ್ವೆಸ್ಟ್ ಮಾಡಿದ್ದಾರಂತೆ.

ದಿಢೀರ್ ಎಂದು ಎಲ್ಲಾ ತಿಂಡಿ ತಿನಿಸು, ಕಾಫಿ ಟೀ ಬೆಲೆ ಜಾಸ್ತಿ ಮಾಡಿದರೆ ಗ್ರಾಹಕರಿಗು ಕಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ ಜುಲೈ 25ರಂದು ಹೋಟೆಲ್ ಮಾಲೀಕರ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಜುಲೈ 25ರಂದು ಸಭೆ ನಡೆದ ನಂತರ ಹೋಟೆಲ್ ತಿಂಡಿಗಳ ಬೆಲೆ ಹೆಚ್ಚಾಗುವ ಬೆಲೆ ಹೆಚ್ಚಾಗುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ 10% ಆದರೂ ಬೆಲೆ ಏರಿಕೆ ಮಾಡಲೇಬೇಕಾಗಿರುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್. ಆಗಸ್ಟ್ 1 ರಿಂದ ಜಾರಿಗೆ ಬರುವ ದರಗಳ ಪಟ್ಟಿ ಹೀಗಿದೆ, ಕಾಫಿ ಟೀ ದರ 3 ರೂಪಾಯಿ ಹೆಚ್ಚಾಗಲಿದ್ದು, ತಿಂಡಿ ದರ 5 ರೂಪಾಯಿ ಹೆಚ್ಚಾಗಲಿದ್ದು, ಊಟದ ದರ 8 ರೂಪಾಯಿ ಹೆಚ್ಚಾಗಲಿದೆ.

Hotel food price increase after increase in milk price

ಹಾಲಿನ ದರ ಜಾಸ್ತಿ ಆಗಿರುವುದು ಹೋಟೆಲ್ ತಿಂಡಿ, ಕಾಫಿ, ಟೀ, ಎಲ್ಲದರ ಮೇಲು ಪರಿಣಾಮ ಬೀರಿದೆ. ಒಟ್ಟಿನಲ್ಲಿ ಸರ್ಕಾರ ಮತ್ತು ಹೋಟೆಲ್ ಮಾಲೀಕರು ಮತ್ತು ಹಾಲಿನ ಉತ್ಪಾದನೆ ಸಂಘಗಳು ತೆಗೆದುಕೊಳ್ಳುವ ನಿರ್ಧಾರಗಳು ಸಾಮಾನ್ಯ ಜನರ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಇನ್ನು ಹೆಚ್ಚು ಪರಿಣಾಮ ಬೀರಬಹುದು.

Hotel food price increase after increase in milk price

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories