ಗೃಹಜ್ಯೋತಿ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡೋದು ಈಗ ಸುಲಭ, ಮೊಬೈಲ್ ನಲ್ಲೇ ಸುಲಭವಾಗಿ ಚೆಕ್ ಮಾಡಿ!
ನಿಮ್ಮ ಮೊಬೈಲ್ ನಲ್ಲಿಯೇ ಗೃಹಜ್ಯೋತಿ ಅಪ್ಲಿಕೇಶನ್ ಸ್ಟೇಟಸ್ (GruhaJyoti Application Status) ಚೆಕ್ ಮಾಡಬಹುದು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruhajyoti Scheme) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ನೀಡುವ ಭರವಸೆಯನ್ನು ಸರ್ಕಾರ ಕೊಟ್ಟಿದೆ. ಈಗಾಗಲೇ ಈ ಯೋಜನೆಗೆ ಅರ್ಜಿ (Gruhajyoti Application) ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು ಸಾಕಷ್ಟು ಜನರು ಅರ್ಜಿ ಸಲ್ಲಿಸುತ್ತಿದ್ದಾರೆ.
ಸೇವಾಸಿಂಧು ಪೋರ್ಟಲ್ (Sevasindhu Portal) ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವವರು ಅರ್ಜಿಯ ಸ್ಟೇಟಸ್ ಏನಿದೆ ಎನ್ನುವುದನ್ನು ತಿಳಿಯುವುದು ಮುಖ್ಯ. ಇದಕ್ಕಾಗಿ ನೀವು ಹೆಚ್ಚು ತಲೆಕೆಡಿಸಿಕೊಳ್ಳದೆ, ನಿಮ್ಮ ಮೊಬೈಲ್ ನಲ್ಲಿಯೇ ಗೃಹಜ್ಯೋತಿ ಅಪ್ಲಿಕೇಶನ್ ಸ್ಟೇಟಸ್ (GruhaJyoti Application Status) ಚೆಕ್ ಮಾಡಬಹುದು.
200 ಉಚಿತ ಎಲೆಕ್ಟ್ರಿಸಿಟಿ ಸಿಗುವ ಗೃಹಜ್ಯೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಲು, ಸೇವಾಸಿಂಧು ಪೋರ್ಟಲ್ ನ ಈ ಲಿಂಕ್ ಓಪನ್ ಮಾಡಿ.. https://sevasindhu.karnataka.gov.in/StatucTrack/Track_Status ಈ ಲಿಂಕ್ ಓಪನ್ ಮಾಡಿದರೆ, Track Your Application Status ಎನ್ನುವುದನ್ನು ನೋಡುತ್ತೀರಿ.
ಅಲ್ಲಿ Escom ಆಯ್ಕೆಯಲ್ಲಿ ನೀವು ಯಾವ ವಿಭಾಗಕ್ಕೆ ಬರುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ. ಕಲಬುರಗಿ ಕಡೆಯವರು Gescom, ಮೈಸೂರು ಕಡೆಯವರು Mescome, ಹುಬ್ಬಳ್ಳಿ ಕಡೆಯವರು Hescome ಆಯ್ಕೆ ಮಾಡಿ. ನಂತರ ನಿಮ್ಮ ಮನೆಯ ಕರೆಂಟ್ ಬಿಲ್ ನಲ್ಲಿರುವ ಅಕೌಂಟ್ ನಂಬರ್ ಅನ್ನು ಹಾಕಿ, ನಂತರ Check Status ಸೆಲೆಕ್ಟ್ ಮಾಡಿ.
ಈಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆಯೇ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಒಂದು ವೇಳೆ ನಿಮ್ಮ ಅರ್ಜಿಯನ್ನು ಸ್ವೀಕರಿಸಿದ್ದರೆ, Your application to Gruhajyoti Process is Received and sent to escome for processing ಎಂದು ಬರೆದಿರುವುದು ಕಾಣಿಸುತ್ತದೆ.
ಒಂದು ವೇಳೆ ನೀವು ಇನ್ನು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ ಜುಲೈ 25ರ ಒಳಗೆ ಅರ್ಜಿ ಸಲ್ಲಿಸುವುದು ಒಳ್ಳೆಯದು. ಈ ದಿನಾಂಕದ ಒಳಗೆ ಅರ್ಜಿ ಹಾಕಿದರೆ ಆಗಸ್ಟ್ ತಿಂಗಳಿನಿಂದಲೇ ನೀವು ಉಚಿತ ವಿದ್ಯುತ್ ಪಡೆಯಬಹುದು.. ಇಲ್ಲಿದೆ ಹೋದರೆ, ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಅನ್ನು ನೀವೇ ಕಟ್ಟಬೇಕಾಗುತ್ತದೆ. ಸರ್ಕಾರದ ಸೌಲಭ್ಯವನ್ನು ಬಹಳ ಬೇಗ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಎಂದರೆ ಮನೆ ಯಜಮಾನಿಯ ಆಧಾರ್ ಕಾರ್ಡ್ ನಂಬರ್, ಕರೆಂಟ್ ಬಿಲ್ ನಲ್ಲಿರುವ ಐಡಿ ನಂಬರ್ ಮತ್ತು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕಾಗುತ್ತದೆ. ಈ ದಾಖಲೆಗಳು ಇದ್ದರೆ ನೀವು ಸುಲಭವಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸರ್ಕಾರ ನೀಡುತ್ತಿರುವ ಈ ಗೃಹಜ್ಯೋತಿ ಯೋಜನೆಗೆ ಕೆಲವು ಷರತ್ತುಗಳು ಕೂಡ ಅನ್ವಯವಾಗುತ್ತದೆ. ಅದೆಲ್ಲವನ್ನು ಅರಿತು, ಮನದಟ್ಟು ಮಾಡಿಕೊಂಡು, ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಸರ್ಕಾರದ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಿ.
How to check gruhajyoti application status in mobile