ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ? ಈ ಸರಳ ಕೋಡ್‌ಗಳಿಂದ ತಕ್ಷಣ ಪತ್ತೆಹಚ್ಚಿ!

ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಿದೆಯೇ ಎಂದು ಈಗ ಸುಲಭವಾಗಿ ತಿಳಿಯಬಹುದು. ಕೆಲವೊಂದು ಸಿಂಪಲ್ ಕೋಡ್‌ಗಳು ಮತ್ತು ಟ್ರಿಕ್ಸ್‌ಗಳು ಹ್ಯಾಕಿಂಗ್‌ನ ಲಕ್ಷಣಗಳನ್ನು ತೋರಿಸುತ್ತವೆ. ನಿಮ್ಮ ಫೋನ್ ಸುರಕ್ಷಿತವೋ ಇಲ್ಲವೋ ಗೊತ್ತಾಗುತ್ತದೆ.

Mobile Hack: ನಿಮ್ಮ ಫೋನ್ ಹಠಾತ್‌ ಆಗಿ ಹೆಚ್ಚು ಹೀಟ್ ಆಗುತ್ತಿದ್ದರೆ ಅಥವಾ ಬ್ಯಾಟರಿ ವೇಗವಾಗಿ ಡ್ರೆನ್ ಆಗುತ್ತಿದ್ದರೆ, ಇದು ಹ್ಯಾಕ್ ಆಗಿರುವ ಒಂದು ಪ್ರಮುಖ ಲಕ್ಷಣವಾಗಬಹುದು. ಕೆಲವೊಮ್ಮೆ ಫೋನ್ ಸ್ವಯಂಚಾಲಿತವಾಗಿ ರೀಸ್ಟಾರ್ಟ್ ಆಗುವುದು ಅಥವಾ ಇಂಟರ್ನೆಟ್ ಡೇಟಾ ಅನಿರೀಕ್ಷಿತವಾಗಿ ಹೆಚ್ಚು ಬಳಕೆಯಾಗುವುದು ಕೂಡ ಅಪಾಯದ ಸೂಚನೆ.

ಅದರ ಜೊತೆಗೆ, ನಿಮ್ಮ ಫೋನ್‌ನಲ್ಲಿ ಅಪರಿಚಿತ ಆ್ಯಪ್‌ಗಳು ಕಂಡುಬಂದರೆ ಅಥವಾ ಪಾಪ್‌ಅಪ್ ಜಾಹೀರಾತುಗಳು ಹೆಚ್ಚಾದರೆ ಎಚ್ಚರಿಕೆ ಅಗತ್ಯ. ಅನಾಮಿಕ ನಂಬರಿಂದ ಕರೆಗಳು ಅಥವಾ ಸಂದೇಶಗಳು ಬಂದರೆ, ಅದು ನಿಮ್ಮ ಡೇಟಾ ಸಿಗ್ಯೂರಿಟಿ ಲೋಪವಾಗಿರುವ ಸೂಚನೆ ಆಗಿರಬಹುದು.

ಈ USSD ಕೋಡ್ಸ್‌ಗಳಿಂದ ತಕ್ಷಣ ಪರೀಕ್ಷಿಸಿ

  • IMEI ಪತ್ತೆಹಚ್ಚಲು: *#06#
  • ಕಾಲ್ ಫಾರ್ವರ್ಡಿಂಗ್ ಪರೀಕ್ಷಿಸಲು: *#21#, *#62#, *#67#, *#004#
  • ಆಂಡ್ರಾಯ್ಡ್ ಟೆಸ್ಟಿಂಗ್/ನೆಟ್‌ವರ್ಕ್ ಚೆಕ್: ##4636##
  • ಐಫೋನ್ ಫೀಲ್ಡ್ ಟೆಸ್ಟ್ ಮೋಡ್: 3001#12345#
  • ಎಲ್ಲ ಫಾರ್ವರ್ಡಿಂಗ್ ಆಫ್ ಮಾಡಲು: ##002#

ಈ ಕೋಡ್‌ಗಳು ಫೋನ್‌ನ ಒಳಗಿನ ಅಸಹಜ ಚಟುವಟಿಕೆಗಳ ಬಗ್ಗೆ ಸೂಚನೆ ನೀಡುತ್ತವೆ.

ಸುರಕ್ಷಿತ ಮೊಬೈಲ್ ಬಳಕೆಗಾಗಿ ತಜ್ಞರ ಸಲಹೆಗಳು

ಮೊಬೈಲ್ ಭದ್ರತೆಯಲ್ಲಿ ಸ್ಟ್ರಾಂಗ್ ಪಾಸ್‌ವರ್ಡ್, ಫೇಸ್ ಐಡಿ, ಫಿಂಗರ್‌ಪ್ರಿಂಟ್ ಲಾಕ್ ಅನಿವಾರ್ಯ. ಎಲ್ಲ ಆ್ಯಪ್‌ಗಳು ಹಾಗೂ ಸಿಸ್ಟಮ್‌ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ. ಅಪರಿಚಿತ ಸೈಟ್‌ಗಳಿಂದ ಅಥವಾ third-party APKs ಇನ್‌ಸ್ಟಾಲ್ ಮಾಡಬೇಡಿ.

ಎಲ್ಲಾ ಪ್ರಮುಖ ಖಾತೆಗಳಲ್ಲಿ two-factor authentication (2FA) ಸಕ್ರಿಯಗೊಳಿಸಿ. ಪಬ್ಲಿಕ್ Wi-Fi ಅಥವಾ ಚಾರ್ಜಿಂಗ್ ಸ್ಟೇಷನ್‌ಗಳನ್ನು ಬಳಸುವ ಮೊದಲು ಎಚ್ಚರಿಕೆ ವಹಿಸಿ. ಸಾಧ್ಯವಾದರೆ VPN ಬಳಸಿ. ಅಗತ್ಯವಿಲ್ಲದ permissions ಅನ್ನು ನಿರಾಕರಿಸಿ ಮತ್ತು privacy settings‌ನ್ನು ನಿಯಮಿತವಾಗಿ ಪರಿಶೀಲಿಸಿ.

ಅನಿವಾರ್ಯವಾದರೆ ಫ್ಯಾಕ್ಟರಿ ರಿಸೆಟ್ ಮಾಡಿ (ಡೇಟಾ ಬ್ಯಾಕಪ್ ನಂತರ). ನಿಯಮಿತವಾಗಿ cache, cookies, ಬ್ರೌಸರ್ ಇತಿಹಾಸವನ್ನು ಕ್ಲಿಯರ್ ಮಾಡುವುದು ಕೂಡ ಉತ್ತಮ ಸುರಕ್ಷತಾ ಕ್ರಮ.

ಹೆಚ್ಚುವರಿ ಭದ್ರತಾ ಕ್ರಮಗಳು

ಫೋನ್‌ನ ಸ್ಟೋರೇಜ್‌ನ್ನು Encrypt ಮಾಡಿ, SIM lock ಆನ್ ಮಾಡಿ. Developer options ಅಥವಾ ಅನಾವಶ್ಯಕ ಫೀಚರ್‌ಗಳನ್ನು ಆಫ್ ಮಾಡಿ. ಇಂತಹ ಸರಳ ಕ್ರಮಗಳಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಅಪಾಯವನ್ನು ಬಹುಪಾಲು ಕಡಿಮೆ ಮಾಡಬಹುದು.

How to Check if Your Mobile is Hacked

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories