30 ದಿನಗಳಲ್ಲಿ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಿ ಹೀಗೆ! ಈ ಸೂಪರ್ ಟಿಪ್ಸ್ ಫಾಲೋ ಮಾಡಿ
ಕಡಿಮೆ ಕ್ರೆಡಿಟ್ ಸ್ಕೋರ್ನಿಂದ ಸಾಲ ಪಡೆಯಲು ಕಷ್ಟವಾಗುತ್ತಿದೆಯೇ? ಸರಿಯಾದ ಪ್ಲಾನ್ ಮತ್ತು ಕ್ರಮದೊಂದಿಗೆ ಕೇವಲ 30 ದಿನಗಳಲ್ಲಿ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳಲು ಈ 4 ಸಲಹೆಗಳು ನೆರವಾಗುತ್ತವೆ.

Credit Score : ಕ್ರೆಡಿಟ್ ಸ್ಕೋರ್ ಎನ್ನುವುದು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವಾಗ ಅತ್ಯಂತ ಮುಖ್ಯವಾದ ಅಂಶ. ಉತ್ತಮ ಸ್ಕೋರ್ನಿಂದ ಕಡಿಮೆ ಬಡ್ಡಿದರದ ಸಾಲಗಳು, ಪ್ರೀಮಿಯಂ ಕ್ರೆಡಿಟ್ ಕಾರ್ಡ್ಗಳು ಹಾಗೂ ಗೃಹ ಸಾಲಗಳಂತಹ (Home Loan) ಅವಕಾಶಗಳು ದೊರೆಯುತ್ತವೆ. ಕಡಿಮೆ ಸ್ಕೋರ್ ಇದ್ದರೆ ಅದು ನಿಮ್ಮ ಸಾಲ ಅನುಮೋದನೆಗೆ ಅಡ್ಡಿಯಾಗಬಹುದು.
ಕೇವಲ ಒಂದು EMI ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ವಿಳಂಬವಾದರೂ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಪಾವತಿಗಳನ್ನು ಸ್ವಯಂಚಾಲಿತಗೊಳಿಸುವುದು (Auto Payment) ಸೂಕ್ತ.
ನಿಮ್ಮ ಕ್ರೆಡಿಟ್ ಲಿಮಿಟ್ನ 30% ಕ್ಕಿಂತ ಹೆಚ್ಚು ಉಪಯೋಗಿಸಬಾರದು. ಉದಾಹರಣೆಗೆ ₹2 ಲಕ್ಷ ಲಿಮಿಟ್ ಇದ್ದರೆ ₹60 ಸಾವಿರಕ್ಕಿಂತ ಹೆಚ್ಚು ಬಳಕೆ ಮಾಡದಿರುವುದು ಒಳಿತು. ತಿಂಗಳ ಬಿಲ್ ಸೈಕಲ್ ಮುಂಚೆ ಬಾಕಿ ಮೊತ್ತ ಪಾವತಿಸಿದರೆ ಸ್ಕೋರ್ ಬೇಗ ಸುಧಾರಿಸುತ್ತದೆ.
ನಿಮ್ಮ ಕ್ರೆಡಿಟ್ ವರದಿ (Credit Report) ಅನ್ನು ನಿಯಮಿತವಾಗಿ ಪರಿಶೀಲಿಸಿ. ಮುಚ್ಚಿದ ಖಾತೆಗಳು “ಓಪನ್” ಎಂದು ತೋರಿಸಬಹುದಾದ ತಪ್ಪು ಮಾಹಿತಿಗಳನ್ನು ತಕ್ಷಣ ತಿದ್ದುಪಡಿ ಮಾಡಿಸಿ. ಈ ದೋಷಗಳನ್ನು ಸರಿಪಡಿಸಿದ ತಕ್ಷಣವೇ ಕ್ರೆಡಿಟ್ ಸ್ಕೋರ್ನಲ್ಲಿ ಉತ್ತಮ ಬದಲಾವಣೆ ಕಾಣಬಹುದು.
ಹೊಸ ಸಾಲ ಅಥವಾ ಕ್ರೆಡಿಟ್ ಕಾರ್ಡ್ಗಳಿಗೆ ಕಡಿಮೆ ಅವಧಿಯಲ್ಲಿ ಅನೇಕ ಅರ್ಜಿಗಳು ಸಲ್ಲಿಸುವುದು ‘ಹಾರ್ಡ್ ಇಂಕ್ವೈರಿ’ಗಳನ್ನು ಉಂಟುಮಾಡುತ್ತದೆ. ಇದು ಸ್ಕೋರ್ ಕಡಿಮೆಯಾಗುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸಾಲ ಅರ್ಜಿಗಳ ನಡುವೆ ಕೆಲವು ತಿಂಗಳ ಅಂತರ ಇಡುವುದು ವಿವೇಕಪೂರ್ಣ ಕ್ರಮ.
ದೀರ್ಘಾವಧಿಯ ಕ್ರೆಡಿಟ್ ಸಂಬಂಧಗಳು ಸ್ಕೋರ್ ಸ್ಥಿರತೆಗೆ ನೆರವಾಗುತ್ತವೆ. ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಅನ್ನು ಸಂಪೂರ್ಣ ಮುಚ್ಚದೆ, ಕೆಲವು ಬಾರಿ ಬಳಸುವುದು ಒಳಿತು.
ಸಿಕ್ಯೂರ್ಡ್ (ಉದಾ: Housing ಅಥವಾ Gold Loan) ಹಾಗೂ ಅನ್ಸಿಕ್ಯೂರ್ಡ್ (ಉದಾ: Personal Loan ಅಥವಾ Credit Card) ಎರಡರ ಸಮತೋಲನ ಕಾಪಾಡಿದರೆ ಕ್ರೆಡಿಟ್ ಪ್ರೊಫೈಲ್ ಬಲವಾಗುತ್ತದೆ.
ಈ ನಾಲ್ಕು ಸರಳ ಕ್ರಮಗಳನ್ನು ಅನುಸರಿಸಿದರೆ ಕೇವಲ 30 ದಿನಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ನಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು, ಅದೇ ಉತ್ತಮ ಹಣಕಾಸು ಭವಿಷ್ಯದ ಮೊದಲ ಹೆಜ್ಜೆ.
How to Improve Your Credit Score in 30 Days







