Business News

ಈ ತಪ್ಪುಗಳನ್ನು ಮಾಡಿದ್ರೆ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಹತ್ತಿಕೊಳ್ಳುವುದು ಖಚಿತ, ಕಂಪನಿ ಜವಾಬ್ದಾರಿಯಲ್ಲ

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಬೇಡಿಕೆ ಹಾಗೂ ಮಾರಾಟ ಕೂಡ ಬಹಳ ಜಾಸ್ತಿಯಾಗಿದೆ ಎನ್ನುವುದು ಎಲೆಕ್ಟ್ರಿಕ್ ವಾಹನಗಳು ಕೂಡ ಕೆಲವು ಸ್ಟಾರ್ಟಪ್ ಕಂಪನಿಗಳು(Startup)  ತಯಾರಿಸಿ ಮಾರಾಟ ಮಾಡುತ್ತಿವೆ. ಕೆಲವೊಮ್ಮೆ ಕೆಲವೊಂದು ಘಟನೆಗಳನ್ನು ನೋಡಿದಾಗ ನಿಜಕ್ಕೂ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಗಳು ಎಷ್ಟು ಸೇಫ್ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿಗೆ ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳು ಸ್ಪೋಟಗೊಂಡಿರುವುದು.

ಎಲೆಕ್ಟ್ರಿಕ್ ಸ್ಕೂಟರ್ ಗಳು ಎಷ್ಟು ಸುರಕ್ಷಿತ!

ಇತ್ತೀಚೆಗೆ ಇವಿ ಸರಣಿಯ ಸ್ಕೂಟರ್ ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಹೆಚ್ಚು ದಾಖಲಾಗುತ್ತಿವೆ. ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಇಂಥ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಕಾರಣದಿಂದಾಗಿ ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಬಗ್ಗೆ ಜನ ಪ್ರಶ್ನೆ ಮಾಡುವಂತಾಗಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್(OLA Scooter )  ಹತ್ತಿಕೊಂಡಿರುವುದು ಇದೇ ಮೊದಲಲ್ಲ ಕಳೆದ ಎರಡು ವರ್ಷಗಳ ದಾಖಲೆ ನೋಡಿದ್ರೆ ಓಲಾ ಸೇರಿದಂತೆ ಇತರ ಎಲೆಕ್ಟ್ರಿಕಲ್ ಸ್ಕೂಟರ್ ಗಳಿಗೂ ಕೂಡ ಬೆಂಕಿ ಹತ್ತಿಕೊಂಡಿರುವ ಘಟನೆಗಳು ನಡೆದಿವೆ. ಸ್ಕೂಟರ್ ನಿಂತುಕೊಂಡಿರುವ ಹಾಗೂ ಚಲಿಸುವ ಸ್ಥಿತಿಯಲ್ಲಿ ಬೆಂಕಿ ಅವಘಡಗಳು ಸಂಭವಿಸಿದೆ ಹಾಗಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾತ್ರ ಅಲ್ಲದೆ ಒಟ್ಟಾರೆಯಾಗಿ ಎಲೆಕ್ಟ್ರಿಕ ಸ್ಕೂಟರ್ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುತ್ತದೆ.

ಓಲಾ ಸಿಇಒ ನೀಡಿರುವ ಪ್ರತಿಕ್ರಿಯೆ

ಬೆಂಕಿ ಅವಘಡ ಸಂಭವಿಸಿದ ನಂತರ ಒಲಾ ಸಿಇಓ ಭವಿಷ್ ಅಗರ್ವಾಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೊಲದ ನಿಜವಾದ ಬಿಡಿಭಾಗಗಳನ್ನು ಮಾತ್ರ ಬಳಸಬೇಕು ಬೇರೆ ಬಿಡಿ ಭಾಗಗಳನ್ನು ಬಳಸಿದರೆ ಇಂತಹ ಅನಾಹುತ ಆಗುವ ಸಾಧ್ಯತೆ ಇರುತ್ತದೆ. ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ ಎಂದಿದ್ದಾರೆ. ಇನ್ನು ಸಾಮಾನ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗೆ ಆಹುತಿ ಆಗುತ್ತಿರುವುದಕ್ಕೆ ಪ್ರಮುಖ ಕಾರಣಗಳು ಯಾವುವು ಎಂಬುದನ್ನು ಭವಿಷ್ ಈ ರೀತಿ ಹೇಳುತ್ತಾರೆ.

ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಪ್ರಮುಖ 4 ಕಾರಣಗಳು!
*ಓಲಾ ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಏನು?
ಓಲಾ ಕಂಪನಿಯ (OLA Company) ಸಿಇಒ ಹೇಳುವ ಪ್ರಕಾರ ಈ ರೀತಿ ಬೆಂಕಿ ಅವಗಢಗಳು ನಡೆಯುವುದಕ್ಕೆ ಮುಖ್ಯವಾದ ಕಾರಣ ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳನ್ನು ಬಳಸುವುದು ಎಂದಿದ್ದಾರೆ.

*ಓಲಾ ಇವಿ ಗಳಲ್ಲಿ ಇದು ಮತ್ತೆ ಮತ್ತೆ ಆಗುತ್ತಿರುವುದಕ್ಕೆ ಕಾರಣ ಏನು?
ಕಳೆದ ಎರಡು ವರ್ಷಗಳಲ್ಲಿ ಈ ಘಟನೆಗಳು ಮತ್ತೆ ಮತ್ತೆ ಪುನರಾವರ್ತಿತವಾಗಿರುವುದರಿಂದ ಜನರಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿ ಮಾಡುವ ವಿಷಯದಲ್ಲಿ ಗೊಂದಲ ಮೂಡಿದೆ. OLA ಕಂಪನಿ ಈ ಬಗ್ಗೆ ಕೆಲವು ಕಾರಣಗಳನ್ನ ನೀಡಿದರು ಈ ಕಂಪನಿಯ ಎಲೆಕ್ಟ್ರಿಕ ಸ್ಕೂಟರ್ ಗಳು ಎಷ್ಟು ಸೇಫ್ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ.

*ಬೆಂಕಿ ಅವಘಡಗಳು ನಡೆದ ಮೇಲೆ ಓಲಾ ಕಂಪನಿಯ ಪ್ರತಿಕ್ರಿಯೆ ಏನು?
ಇತ್ತೀಚಿಗೆ ಬೆಂಕಿ ಅನಾಹುತಗಳು ನಡೆದಿದ್ದು ಅವು ಹೆಚ್ಚಾಗಿ ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿಯೇ ನಡೆದಿರುವುದರಿಂದ ಈ ಕಂಪನಿಯ ಬಗ್ಗೆ ಜನರಿಗೆ ಸುರಕ್ಷತೆಯ ವಿಚಾರದಲ್ಲಿ ಪ್ರಶ್ನೆ ಮೂಡುವುದು ಸಹಜ ಆದರೆ OLA  ಕಂಪನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಇಂತಹ ಅವಘಡಗಳಿಗೆ ಬಿಡಿ ಭಾಗಗಳನ್ನು ಬೇರೆ ಬಳಸಿದ್ದು ಕಾರಣ ಕಂಪನಿಯ ಬಿಡಿ ಭಾಗಗಳನ್ನು ಬಳಸಬೇಕು ಎಂದು ಶಿಫಾರಸು ಮಾಡುತ್ತದೆ.

*ಘಟನೆಯ ಬಗ್ಗೆ ಗ್ರಾಹಕರು ಹೇಳುವುದೇನು?
ಎಲೆಕ್ಟ್ರಿಕ್ ವಾಹನಗಳಿಗೆ ಈ ರೀತಿಯಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ ಎಂಬುದು ಗ್ರಾಹಕರು ಊಹಿಸಿರಲಿಲ್ಲ. ಆದರೆ ಇನ್ನು ಮುಂದೆ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸುವಾಗ ಜನರು ಹೆಚ್ಚು ಜಾಗರೂಕತೆಯಿಂದ ಇರುತ್ತಾರೆ ಎನ್ನಬಹುದು. ಯಾವುದೇ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದಾಗ ಅದರಲ್ಲಿ ಬಳಸಲಾಗುವ ಎಲ್ಲಾ ಬಿಡಿ ಭಾಗಗಳು ಕೂಡ ಒರಿಜಿನಲ್ ಆಗಿ ಅದೇ ಕಂಪನಿಯದ್ದೇ ಆಗಿರಬೇಕು.

If these mistakes are made, the electric scooter is sure to catch fire, the company clarified!
Image Credit: Original Source

ಯಾವಾಗ ಬೇರೆ ಬೇರೆ ಭಾಗಗಳನ್ನು ಸಾಧಾರಣ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಇವಿ ಸ್ಕೂಟರ್ ಅಥವಾ ಇತರ ವಾಹನಗಳಿಗೆ ಅಳವಡಿಸಿರುತ್ತಾರೋ ಅಂತಹ ಸಮಯದಲ್ಲಿ ಈ ರೀತಿ ಬೆಂಕಿ ಅನಾಹುತಗಳು ಸಂಭವಿಸಬಹುದು ಎನ್ನುವುದು ಓಲಾ ಕಂಪನಿಯ ವಾದವಾಗಿದೆ .

If these mistakes are made, the electric scooter is sure to catch fire, the company clarified!

Our Whatsapp Channel is Live Now 👇

Whatsapp Channel

Related Stories