ಈ ಕಾರ್ಡ್ ನಿಮ್ಮ ಬಳಿ ಇದ್ರೆ ಪ್ರತಿ ತಿಂಗಳು ಸಿಗುತ್ತೆ 3,000 ರೂಪಾಯಿ ಪಿಂಚಣಿ, ಜೊತೆಗೆ 2 ಲಕ್ಷ ವಿಮೆ
ನಮ್ಮ ದೇಶದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇದ್ದಾರೆ. ಉದಾಹರಣೆಗೆ ಸಂಘಟಿತ (organised sector) ವಲಯ ಅಥವಾ ಅಸಂಘಟಿತ ವಲಯಗಳಲ್ಲಿ (unorganised sector) ಕೆಲಸ ಮಾಡುವ ಸಾಕಷ್ಟು ಜನರನ್ನ ಕಾಣಬಹುದು
ಅವರಿಗೆ ತಿಂಗಳ ಸಂಬಳದ ಜೊತೆಗೆ ಇತರ ಬೆನಿಫಿಟ್ (benefit) ಕೂಡ ಸಿಗುತ್ತದೆ. ಆದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ (labour) ಸರಿಯಾದ ಯಾವ ಸೌಲಭ್ಯವು ಇರುವುದಿಲ್ಲ.
ಇದೇ ಕಾರಣಕ್ಕೆ ಸರ್ಕಾರ ಹೊಸದೊಂದು ಯೋಜನೆ ರೂಪಿಸಿದ್ದು ಈ ಯೋಜನೆಯ ಮೂಲಕ ದೇಶದಲ್ಲಿ ಇರುವ ಪ್ರತಿಯೊಬ್ಬ ಸಂಘಟಿತ ವಲಯದ ಕಾರ್ಮಿಕ ಕೂಡ ಹೆಚ್ಚುವರಿ ಪ್ರಯೋಜನ ಪಡೆದುಕೊಳ್ಳಬಹುದು.
ಪರ್ಸನಲ್ ಲೋನ್ ತೆಗೆದುಕೊಳ್ಳೋ ಮುನ್ನ ಈ ಕೆಲಸ ಮಾಡಿ! ಬಡ್ಡಿ ಕಡಿಮೆ ಆಗುತ್ತೆ, ಬೇಗ ಸಾಲ ಸಿಗುತ್ತೆ
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಇ – ಶ್ರಮ್ ಕಾರ್ಡ್! (E- Shram card for labourers)
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚಿನ ಯಾವುದೇ ಬೆನಿಫಿಟ್ ಇರುವುದಿಲ್ಲ, ಪಿ ಎಫ್ ಅಥವಾ ಇತರ ಯಾವುದೇ ಪ್ರಯೋಜನವು ಇರುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿಯೆ ಇ – ಶ್ರಮ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಇದರಿಂದ ಸಿಗುವ ಬೆನಿಫಿಟ್ ಅಷ್ಟಿಷ್ಟಲ್ಲ.
ಇ – ಶ್ರಮ್ ಕಾರ್ಡ್ ಹೊಂದಿದ್ರೆ ಸಿಗುವ ಪ್ರಯೋಜನಗಳು! (Benefits)
*3000 ಪಿಂಚಣಿಯನ್ನು (Pension) 60 ವರ್ಷಗಳ ನಂತರ ಪ್ರತಿ ತಿಂಗಳು ಪಡೆದುಕೊಳ್ಳಬಹುದು.
*ಅಸಂಘಟಿತ ವಲಯಕ್ಕೆ ಘೋಷಣೆಯಾಗಿರುವ ಯಾವುದೇ ಸರ್ಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು
* ವ್ಯಕ್ತಿ ಆಕಸ್ಮಿಕ ಮರಣ (unexpected death) ಹೊಂದಿದರೆ ಎರಡು ಲಕ್ಷ ರೂಪಾಯಿ ಹಾಗೂ ಶಾಶ್ವತ ಅಂಗವೈಕಲ್ಯ ಹೊಂದಿದರೆ ಒಂದು ಲಕ್ಷ ರೂಪಾಯಿ ವಿಮೆ (Life Insurance) ಪಡೆದುಕೊಳ್ಳಬಹುದು.
*ವ್ಯಕ್ತಿ ಅಕಾಲಿಕ ಮರಣ ಹೊಂದಿದಾಗ ವಿಮೆಯ (Insurance) ಪ್ರಯೋಜನವನ್ನು ನೇರವಾಗಿ ಆತನ ಪತ್ನಿಗೆ ನೀಡಲಾಗುವುದು.
ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ
ಇ – ಶ್ರಮ್ ಕಾರ್ಡ್ ಯಾರಿಗೆ ಸಿಗುತ್ತೆ!
ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿರಬೇಕು
ಭಾರತೀಯ ನಾಗರಿಕನಾಗಿರಬೇಕು
16 ರಿಂದ 69 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.
ಸರ್ಕಾರದಿಂದ ಸಿಗುವ ಇತರ ಯಾವುದೇ ಕಾರ್ಡ್ ಹೊಂದಿರಬಾರದು.
ಇ – ಶ್ರಮ್ ಕಾರ್ಡ್ ಅನ್ನು ಅಂಗಡಿಯಲ್ಲಿ ಕೆಲಸ ಮಾಡುವವರು, ಸಹಾಯಕರು, ಆಟೋ ಚಾಲಕರು, ಪಂಚರ್ ಹಾಕಿಸುವ ಕೆಲಸ ಮಾಡುವವರು, ಪೇಪರ್ ಹಾಕುವವರು, ಝೋಮ್ಯಾಟೋ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ ಗಳು, ಮೊದಲಾದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಕಾರ್ ಇನ್ಸೂರೆನ್ಸ್ ತೆಗೆದುಕೊಳ್ಳುವ ಮುನ್ನ ಈ ಟಿಪ್ಸ್ ಪಾಲಿಸಿದ್ರೆ ಸಾಕಷ್ಟು ಹಣ ಉಳಿಸಬಹುದು
ಇ – ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸುವುದು! (How to apply)
ಸ್ಟೇಟ್ ಬ್ಯಾಂಕ್ ಸೇರಿದಂತೆ ಈ ಮೂರು ಬ್ಯಾಂಕ್‌ಗಳ ಎಫ್‌ಡಿ ಮೇಲೆ ಸಿಗುತ್ತೆ ಭಾರೀ ಬಡ್ಡಿ!
ಇ – ಶ್ರಮ್ ಕಾರ್ಡ್ ಪಡೆದುಕೊಳ್ಳಲು ಸಿ ಎಸ್ ಸಿ ಸೆಂಟರ್ (CSC) ಗೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿ ಅಧಿಕೃತ ವೆಬ್ಸೈಟ್ https://eshram.gov.in ಈ ಶ್ರಮ ಸರ್ಕಾರಿ ವೆಬ್ಸೈಟ್ (website) ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿ ಅವರ ಆಧಾರ ನಂಬರ್, ಮೊಬೈಲ್ ಸಂಖ್ಯೆ ಮತ್ತಿತರ ಮಾಹಿತಿ ನೀಡಬೇಕಾಗುತ್ತದೆ. ಅತ್ಯುತ್ತಮ ಪ್ರಯೋಜನ ಹೊಂದಿರುವ ಇ – ಶ್ರಮ್ ಕಾರ್ಡ್ ಅನ್ನು ಪ್ರತಿಯೊಬ್ಬ ಅಸಂಘಟಿತ ವಲಯದ ಕಾರ್ಮಿಕ ಹೊಂದಿರುವುದು ಬಹಳ ಉಪಯುಕ್ತ.
ಯೋಜನೆಯ ಬಗ್ಗೆ ನಿಮ್ಮ ಹತ್ತಿರದಲ್ಲಿ ಇರುವ ಅಸಂಘಟಿತ ವಲಯ ಕಾರ್ಮಿಕರಿಗೆ ತಿಳಿಸಿ ಅದರ ಬೆನಿಫಿಟ್ ಪಡೆದುಕೊಳ್ಳುವಂತೆ ಮಾಡಿ.
If you have this card, you will get Rs 3,000 pension every month, along with Rs 2 lakh insurance