ಒಮ್ಮೆ ಹೂಡಿಕೆ, ಪ್ರತಿ ತಿಂಗಳು ಆದಾಯ! ಪೋಸ್ಟ್ ಆಫೀಸ್ನ ಬಂಪರ್ ಯೋಜನೆ
ಭಾರತ ಸರ್ಕಾರದ ಭದ್ರತೆ ಹೊಂದಿರುವ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಮೂಲಕ, ಕೇವಲ ಒಮ್ಮೆ ಹೂಡಿಕೆ ಮಾಡಿದರೆ ಸಾಕು, ಪ್ರತೀ ತಿಂಗಳು ನಿಶ್ಚಿತವಾದ ಬಡ್ಡಿದರದ ಆದಾಯ ಪಡೆಯಬಹುದು.

ಒಮ್ಮೆ ಮಾತ್ರ ಹೂಡಿಕೆ ಮಾಡಿ ಪ್ರತೀ ತಿಂಗಳು ನಿಶ್ಚಿತವಾದ ಆದಾಯ ಪಡೆಯಲು ಅವಕಾಶ ನೀಡುವ ಯೋಜನೆ ಇದಾಗಿದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme – POMIS). ಈ ಯೋಜನೆ ಭಾರತ ಸರ್ಕಾರದಿಂದ ಭದ್ರತೆ ಹೊಂದಿರುವುದರಿಂದ ಹೂಡಿಕೆದಾರರು ಯಾವುದೇ ಮಾರುಕಟ್ಟೆ ಅಪಾಯದ ಭಯವಿಲ್ಲದೆ ನಂಬಿಕೆಯಿಂದ ಹೂಡಿಕೆ ಮಾಡಬಹುದು.
ಹೂಡಿಕೆ ಕೇವಲ ₹1,000 ರಿಂದ ಪ್ರಾರಂಭಿಸಬಹುದು. ಮಧ್ಯಮ ವರ್ಗದ ಕುಟುಂಬಗಳು, ನಿವೃತ್ತರು ಹಾಗೂ ಗೃಹಿಣಿಗಳಿಗೆ ಇದು ಅತ್ಯಂತ ಸೂಕ್ತವಾದ ಯೋಜನೆ.
ಹೂಡಿಕೆ ಮಾಡಿದ ಮೊತ್ತಕ್ಕೆ ಪ್ರತಿ ತಿಂಗಳು ನಿಗದಿತ ಬಡ್ಡಿದರದ ಆದಾಯ ದೊರೆಯುತ್ತದೆ. ಪ್ರಸ್ತುತ ಬಡ್ಡಿದರ ವರ್ಷಕ್ಕೆ 7.4 ಶೇಕಡಾ.
ಒಬ್ಬರು ವೈಯಕ್ತಿಕ (Single Account) ಅಥವಾ ಜಂಟಿ (Joint Account) ಖಾತೆ ತೆರೆಯಬಹುದು. ವೈಯಕ್ತಿಕ ಖಾತೆಗೆ ಗರಿಷ್ಠ ₹9 ಲಕ್ಷ ಹೂಡಿಕೆ ಮಾಡಲು ಅವಕಾಶವಿದ್ದು, ಜಂಟಿ ಖಾತೆಯಲ್ಲಿ ಇದು ₹15 ಲಕ್ಷವರೆಗೆ ವಿಸ್ತರಿಸುತ್ತದೆ. ಜಂಟಿ ಖಾತೆಯಿಂದ ಕುಟುಂಬಕ್ಕೆ ಹೆಚ್ಚುವರಿ ಮಾಸಿಕ ಆದಾಯ ದೊರೆಯುತ್ತದೆ.
ಉದಾಹರಣೆಗೆ, ನೀವು ₹5 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹3,083 ಆದಾಯ ಲಭ್ಯವಾಗುತ್ತದೆ. ₹9 ಲಕ್ಷ ಹೂಡಿಕೆ ಮಾಡಿದರೆ ₹5,550 ವರೆಗೆ ಪಡೆಯಬಹುದು. ಕಡಿಮೆ ಅಪಾಯದೊಂದಿಗೆ ನಿಶ್ಚಿತವಾದ ಆದಾಯ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ.
ಭಾರತೀಯ ಅಂಚೆ ಇಲಾಖೆ ನಡೆಸುವ ಈ ಯೋಜನೆ, ಹೂಡಿಕೆದಾರರಿಗೆ ಸ್ಥಿರ ಆದಾಯದ ಭರವಸೆ ನೀಡುವ ವಿಶ್ವಾಸಾರ್ಹ ಮಾರ್ಗವಾಗಿದ್ದು, ಹಿರಿಯ ನಾಗರಿಕರಿಗೆ ಮತ್ತು ನಿವೃತ್ತರಿಗೆ ನಿಜಕ್ಕೂ ಸಹಾಯಕವಾಗಿದೆ.
Invest Once, Earn Monthly with Post Office MIS Scheme



