Business News

ಈ ಯೋಜನೆಯಲ್ಲಿ ₹10,000 ಹೂಡಿಕೆ ಮಾಡಿ ಗಳಿಸಿ ಬರೋಬ್ಬರಿ ₹7ಲಕ್ಷ! ಇಂದೇ ಖಾತೆ ಶುರು ಮಾಡಿ

ನೀವೇನಾದರೂ ಹೂಡಿಕೆ (Money Investment) ಮಾಡುವ ಪ್ಲಾನ್ ಹೊಂದಿದ್ದರೆ, ನಿಮ್ಮ ಹಣ ಸುರಕ್ಷಿತವಾಗಿ (Money Safety) ಇರಬೇಕು ಎಂದು ಸಹ ಬಯಸುವುದಾದರೆ, ಹಣ ಹೂಡಿಕೆ ಮಾಡಲು ಅತ್ಯುತ್ಯಮವಾದ ಆಯ್ಕೆ ಪೋಸ್ಟ್ ಆಫೀಸ್ ಯೋಜನೆಗಳಾಗಿದೆ (Post Office Scheme) ಪೋಸ್ಟ್ ಆಫೀಸ್ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವುದರಿಂದ ನಿಮ್ಮ ಹಣಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

ಯಾವುದೇ ಭಯ ಆತಂಕ ಇಲ್ಲದೆ ಹಣವನ್ನು ಹೂಡಿಕೆ ಮಾಡಬಹುದು. ನಿಮ್ಮ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುವಂಥ ಅನೇಕ ಒಳ್ಳೆಯ ಯೋಜನೆಗಳು ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿದೆ. ಅದರಲ್ಲೂ ಈ ತ್ರೈಮಾಸಿಕದಲ್ಲಿ ಬಡ್ಡಿ ಹಣವನ್ನು ಜಾಸ್ತಿ ಮಾಡಿರುವುದರಿಂದ ಎಲ್ಲರೂ ಕೂಡ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ.

Invest rs 10000 every month and get rs 7lakh in this scheme

ಪ್ರಸ್ತುತ ಪೋಸ್ಟ್ ಆಫೀಸ್ ನ ಆರ್.ಡಿ (RD) ಅಂದರೆ ರಿಕರಿಂಗ್ ಡೆಪಾಸಿಟ್ ಯೋಜನೆಗೆ ಉತ್ಯಮವಾಗಿ ಬಡ್ಡಿ ಸಿಗುತ್ತಿದೆ. RD ಯೋಜನೆಗೆ ಈಗ 6.50% ಬಡ್ಡಿ ಸಿಗಲಿದೆ. ಆರ್.ಡಿ ಯೋಜನೆಯಲ್ಲಿ (RD Scheme) ತಿಂಗಳಿಗೆ ₹10,000 ರೂಪಾಯಿ ಹೂಡಿಕೆ ಮಾಡಿ, 5 ವರ್ಷಗಳ ನಂತರ ಬರೋಬ್ಬರಿ ₹7 ಲಕ್ಷ ಆದಾಯ ಪಡೆಯಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಆರ್.ಡಿ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳಾಗಿರುತ್ತದೆ. ಈ ಯೋಜವೆಯಲ್ಲಿ ನೀವು ಮಿನಿಮಂ ₹100 ರೂಪಾಯಿ ಹೂಡಿಕೆ ಮಾಡಬಹುದು, ಮ್ಯಾಕ್ಸಿಮಮ್ ಹೂಡಿಕೆ ಮಾಡುವುದಕ್ಕೆ ಹಣದ ಮಿತಿ ಇಲ್ಲ, ಹಾಗಾಗಿ ನೀವು ಆರ್.ಡಿ ಯೋಜನೆಯಲ್ಲಿ ಎಷ್ಟು ಬೇಕಾದರೂ ಹೂಡಿಕೆ ಮಾಡುತ್ತಾ ಬರಬಹುದು.

ಈ ತ್ರೈಮಾಸಿಕ ಅವಧಿಯಲ್ಲಿ ಆರ್.ಡಿ ಅಕೌಂಟ್ ಗೆ 6.5% ಬಡ್ಡಿ ನೀಡಲಾಗುತ್ತದೆ. ಆರ್.ಡಿ ಯೋಜನೆಯಲ್ಲಿ ಖಾತೆ ತೆರೆಯಲು ನೀವು ಭಾರತದ ನಾಗರೀಕರಾಗಿರಬೇಕು, ಹಾಗೆಯೇ ಇದರಲ್ಲಿ ನೀವು ಒಬ್ಬಂಟಿಯಾಗಿ ಖಾತೆ ತೆರೆಯಬಹುದು ಅಥವಾ ಜಂಟಿ ಖಾತೆ ಕೂಡ ತೆರೆಯಬಹುದು. ಸಣ್ಣ ಮಕ್ಕಳಿರುವ ತಂದೆ ತಾಯಿಯರು ತಮ್ಮ ಮಕ್ಕಳ ಹೆಸರಿನಲ್ಲಿ ಆರ್.ಡಿ ಖಾತೆ ತೆರೆದು ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು.

ನಿಮ್ಮ ಮಗುವಿಗೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅವರ ಹೆಸರಿನಲ್ಲೇ ಆರ್.ಡಿ ಖಾತೆ ಶುರು ಮಾಡಬಹುದು. ಈ ಯೋಜನೆಯಲ್ಲಿ 7 ಲಕ್ಷ ಆದಾಯ ಪಡೆಯುವುದು ಹೇಗೆ ಎಂದರೆ.. ಆರ್.ಡಿ ಖಾತೆ ಓಪನ್ ಮಾಡಿ, ತಿಂಗಳಿಗೆ ₹10,000 ಸಾವಿರ ರೂಪಾಯಿ ಹೂಡಿಕೆ ಮಾಡುತ್ತಾ ಬರಬೇಕು, 5 ವರ್ಷಗಳ ಕಾಲ ಈ ಯೋಜನೆಯಲ್ಲಿ ₹10,000 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, 5 ವರ್ಷಗಳಲ್ಲಿ ನೀವು ₹6,00,000 ಹೂಡಿಕೆ ಮಾಡಿರುತ್ತೀರಿ.

Invest rs 10000 every month and get rs 7lakh in this scheme

ಐದು ವರ್ಷಗಳ ಬಳಿಕ ನಿಮಗೆ ₹7,10,000 ರೂಪಾಯಿ ಆದಾಯ ಬಡ್ಡಿ ಜೊತೆಗೆ ಬರುತ್ತದೆ.. ಈ ವರ್ಷದಲ್ಲಿ ನಿಮಗೆ ₹1,10,000 ರೂಪಾಯಿ ಬಡ್ಡಿ ಪಡೆಯುತ್ತೀರಿ. ಯಾವ ದಿನ ನೀವು ಹಣ ಕಟ್ಟಬೇಕು ಎನ್ನುವುದಕ್ಕೂ ನಿಯಮವಿದೆ, 1 ರಿಂದ 15ನೇ ತಾರೀಕಿನ ಒಳಗೆ ಹೂಡಿಕೆ ಮಾಡಿದರೆ, 15ನೇ ತಾರೀಕಿನಂದು ಖಾತೆ ತೆರೆದಿದ್ದರೆ, ತಿಂಗಳ ಕೊನೆಯಲ್ಲಿ ಹೂಡಿಕೆ ಮಾಡಬೇಕು.

ಆರ್.ಡಿ ಯೋಜನೆಯಲ್ಲಿ ನೀವು ಇನ್ವೆಸ್ಟ್ (Monthly Investment) ಮಾಡುವುದಕ್ಕೆ ಶುರು ಮಾಡಿದರೆ, ಪ್ರತಿ ತಿಂಗಳು ಕೂಡ ಅಷ್ಟೇ ಹಣವನ್ನು ಪಾವತಿ ಮಾಡುತ್ತಾ ಬರಬೇಕು. ಒಂದು ವೇಳೆ ಒಂದು ತಿಂಗಳು ನೀವು ಹಣ ಪಾವತಿ ಮಾಡುವುದನ್ನು ನಿಲ್ಲಿಸಿದರೆ, ಮುಂದಿನ ತಿಂಗಳು ನೀವು ಪಾವತಿ ಮಾಡುವ ಹಣದಲ್ಲಿ 1% ಹೆಚ್ಚು ಹಣವನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ.

ಅಕಸ್ಮಾತ್ ನೀವು ಒಟ್ಟಿಗೆ 4 ತಿಂಗಳು ಆರ್.ಡಿ ಹಣ ಕಟ್ಟದೆ ಹೋದರೆ, ನಿಮ್ಮ ಆರ್.ಡಿ ಖಾತೆಯನ್ನು ಕ್ಲೋಸ್ ಮಾಡಲಾಗುತ್ತದೆ. ಈ ಅಕೌಂಟ್ ಅನ್ನು ಮತ್ತೆ ಆಕ್ಟಿವ್ ಆಗುವ ಹಾಗೆ ಮಾಡಲು 2 ತಿಂಗಳ ಸಮಯವನ್ನು ನೀಡಲಾಗುತ್ತದೆ. ಆ ಗಡುವು ಮುಗಿದ ಮೇಲು ಆರ್.ಡಿ ಅಕೌಂಟ್ ಅನ್ನು ರಿಟ್ರಿವ್ ಮಾಡದೆ ಹೋದರೆ ಪರ್ಮನೆಂಟ್ ಆಗಿ ನಿಮ್ಮ ಆರ್.ಡಿ ಅಕೌಂಟ್ ಅನ್ನು ಕ್ಲೋಸ್ ಮಾಡಲಾಗುತ್ತದೆ.

ಈ ಯೋಜನೆಯಲ್ಲಿ ನಿಮಗೆ ಇನ್ನೊಂದು ಸೌಲಭ್ಯ ಕೂಡ ಇದೆ, ಅದೇನು ಎಂದರ್ಸ್ ಆರ್.ಡಿ ಖಾತೆ (RD Account) ಶುರು ಮಾಡಿ, 1 ವರ್ಷಗಳ ನಂತರ ನೀವು ಹೂಡಿಕೆ ಮಾಡಿರುವ ಹಣದಲ್ಲಿ 50% ಹಣವನ್ನು ಹಿಂಪಡೆಯುವ (Money Withdraw) ಅವಕಾಶವಿದೆ.

Invest rs 10000 every month and get rs 7lakh in this scheme

Our Whatsapp Channel is Live Now 👇

Whatsapp Channel

Related Stories