ಈ Jio ಪ್ಲಾನ್ನಲ್ಲಿ 84 ದಿನಗಳ ವ್ಯಾಲಿಡಿಟಿ ಹಾಗೂ ಉಚಿತ Amazon Prime + Unlimited 5G
ರಿಲಯನ್ಸ್ ಜಿಯೊ ₹1,029 ಪ್ಲಾನ್ನಲ್ಲಿ 84 ದಿನಗಳValidity ಜೊತೆಗೆ Amazon Prime Lite ಉಚಿತ, ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳು ಮತ್ತು Unlimited 5G ಸೌಲಭ್ಯ ಸಿಗಲಿದೆ.

Jio Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವ ಬೀರಿರುವ ರಿಲಯನ್ಸ್ ಜಿಯೊ, ಗ್ರಾಹಕರಿಗೆ ಮನಸೆಳೆಯುವ ಆಫರ್ಗಳನ್ನು ನಿರಂತರವಾಗಿ ಪರಿಚಯಿಸುತ್ತಿದೆ. ವಿಶೇಷವಾಗಿ OTT ಲಾಭಗಳ ಜೊತೆಗೆ ಬರುವ ಪ್ಲಾನ್ಗಳಿಗಾಗಿ ಜಿಯೊ ಹೆಚ್ಚು ಗಮನ ಸೆಳೆದಿದೆ. ಈ ಸಾಲಿನಲ್ಲಿ ₹1,029 ರೀಚಾರ್ಜ್ ಪ್ಲಾನ್ ಈಗ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
ಈ ಪ್ಲಾನ್ನ ಪ್ರಮುಖ ಆಕರ್ಷಣೆಯೇ Amazon Prime Lite. 84 ದಿನಗಳವರೆಗೆ ಸಂಪೂರ್ಣ ಉಚಿತ ಸಬ್ಸ್ಕ್ರಿಪ್ಶನ್ ದೊರಕುವುದು ಗ್ರಾಹಕರಿಗೆ ದೊಡ್ಡ ಪ್ಲಸ್.
ಜೊತೆಗೆ 18 ತಿಂಗಳುಗಳ ಕಾಲ ₹35,100 ಮೌಲ್ಯದ ಜಿಯೊ Pro Plan ಪ್ರಯೋಜನಗಳನ್ನು ಬಳಸಿಕೊಳ್ಳಬಹುದಾಗಿದೆ. ಇದು ಮನರಂಜನೆ ಜೊತೆಗೆ ಪ್ರೀಮಿಯಂ ಸೌಲಭ್ಯಗಳನ್ನು ಬಯಸುವವರಿಗೆ ಹೆಚ್ಚುವರಿ ಬೋನಸ್.
ಇದನ್ನೂ ಓದಿ: ಮುದ್ರಾ ಸಾಲ ಯೋಜನೆ! ಮಹಿಳೆಯರಿಗೆ ಮನೆಯಲ್ಲೇ 50 ಸಾವಿರ ಆದಾಯ ಗಳಿಸುವ ಬಿಸಿನೆಸ್ ಅವಕಾಶ
ರೀಚಾರ್ಜ್ ಮಾಡಿದ ನಂತರ ಗ್ರಾಹಕರು ಪ್ರತಿದಿನ 2GB ಡೇಟಾ ಬಳಸಬಹುದಾಗಿದೆ. ಜೊತೆಗೆ ಅನಿಯಮಿತ ವಾಯ್ಸ್ ಕಾಲ್ಗಳು ಮತ್ತು ದಿನಕ್ಕೆ 100 SMSಗಳನ್ನೂ ಕಳುಹಿಸುವ ಅವಕಾಶ ಇದೆ. ಹೆಚ್ಚು ಡೇಟಾ ಬೇಕೆಂದರೆ Unlimited 5G ಡೇಟಾ ಕೂಡ ಪ್ಲಾನ್ನಲ್ಲಿ ಸೇರಿದೆ.
ಜಿಯೊ ತನ್ನ Netflix, Prime, Hotstar ಮುಂತಾದ ಆಫರ್ಗಳಿಂದ ದೊಡ್ಡ ಮಟ್ಟದ OTT ವೀಕ್ಷಕರನ್ನು ಸೆಳೆದಿದ್ದರೂ, ಈ ಪ್ಲಾನ್ನಲ್ಲಿ ಮಾತ್ರ Amazon Prime Lite ಲಭ್ಯ.₹1,000 ದರದ ಈ ಪ್ಯಾಕ್ ಮನರಂಜನೆ ಜೊತೆಗೆ ಇಂಟರ್ನೆಟ್ ವೇಗಕ್ಕೂ ಮಹತ್ವ ನೀಡುವ ಗ್ರಾಹಕರಿಗೆ ಸೂಕ್ತ.
ಒಟ್ಟಾರೆ, 84 ದಿನಗಳ ವ್ಯಾಲಿಡಿಟಿ, ಉಚಿತ Prime Lite, 2GB ಪ್ರತಿದಿನ ಮತ್ತು Unlimited 5G all in one ಪ್ಲಾನ್ ಎಂದರೆ ಇದೇ ಜಿಯೊ ₹1,029 ಪ್ಯಾಕ್.
Jio 1,029 Plan with Free Prime Lite and Unlimited 5G



