2025 ರ ಹೊಸ ವರ್ಷಕ್ಕೆ ಜಿಯೋದಿಂದ 2 ವಿಶೇಷ ವಾರ್ಷಿಕ ರೀಚಾರ್ಜ್ ಯೋಜನೆ ಬಿಡುಗಡೆ

ಜಿಯೋ ಈ ಎರಡು ವಾರ್ಷಿಕ ಯೋಜನೆಯಲ್ಲಿ ದಿನಕ್ಕೆ ಅತ್ತ್ಯುತ್ತಮ ಡೇಟಾ ಜೊತೆಗೆ ಅನಿಯಮಿತ ಕರೆಗಳು ಮತ್ತು SMS ಅನ್ನು ಒಳಗೊಂಡಿದೆ.

  • 2025 ರ ಹೊಸ ವರ್ಷಕ್ಕೆ Jio ವಾರ್ಷಿಕ ರೀಚಾರ್ಜ್ ಯೋಜನೆಗಳು.
  • 5G ವೇಗದ ಇಂಟರ್ನೆಟ್ ನೊಂದಿಗೆ ವಿಶೇಷ ವಾರ್ಷಿಕ ರೀಚಾರ್ಜ್ ಯೋಜನೆ.
  • 365 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 2.5GB ಡೇಟಾ ಲಭ್ಯ.

Jio Annual recharge plans : ಏರ್‌ಟೆಲ್ ಮತ್ತು ಜಿಯೋ ಸೇರಿದಂತೆ ಟೆಲಿಕಾಂ ಕಂಪನಿಗಳು ಉತ್ತಮ ರೀಚಾರ್ಜ್ ಯೋಜನೆಗಳನ್ನು (recharge plans) ಪರಿಚಯಿಸುತ್ತಿವೆ. ಕೆಲವರಿಗೆ ಮಾಸಿಕ ರೀಚಾರ್ಜ್‌ಗಳು ಸ್ವಲ್ಪ ಕಷ್ಟವೆನಿಸುತ್ತದೆ. ಈ ವೇಳೆ ವರ್ಷಕ್ಕೆ ಅಂತ ರೀಚಾರ್ಜ್ ಮಾಡುವ ವಾರ್ಷಿಕ ಯೋಜನೆಗಳನ್ನು ಆಯ್ಕೆಮಾಡಿದರೆ ಸ್ವಲ್ಪ ಬೆನಿಫಿಟ್ ಸಿಗಬಹುದು.

ಈ ಹಂತದಲ್ಲಿ ಜಿಯೋ ನೀಡುವ ಎರಡು ವಿಶೇಷ ವಾರ್ಷಿಕ ರೀಚಾರ್ಜ್ ಯೋಜನೆಗಳ ಬಗ್ಗೆ ತಿಳಿಯೋಣ.

ಜಿಯೋ ವಾರ್ಷಿಕ ರೀಚಾರ್ಜ್ ಯೋಜನೆಗಳು

ರಿಲಯನ್ಸ್ ಜಿಯೋ ರೂ. 3,999, ಮತ್ತು ರೂ. 3,599 ರ ಎರಡು ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡು ಯೋಜನೆಗಳ ವಿಶೇಷತೆಗಳೇನು ಎಂಬುದನ್ನು ನೋಡೋಣ.

2025 ರ ಹೊಸ ವರ್ಷಕ್ಕೆ ಜಿಯೋದಿಂದ 2 ವಿಶೇಷ ವಾರ್ಷಿಕ ರೀಚಾರ್ಜ್ ಯೋಜನೆ ಬಿಡುಗಡೆ

ರೂ.3,999 ರೀಚಾರ್ಜ್ ಯೋಜನೆ:

ಜಿಯೋ ರೂ. 3,999 ಪ್ಲಾನ್ ಒಟ್ಟು 365 ದಿನಗಳ ಮಾನ್ಯತೆಯೊಂದಿಗೆ ಬೆನಿಫಿಟ್ ನೀಡುತ್ತದೆ. ಅಂದರೆ, ನೀವು ಈ ಒಂದೇ ರೀಚಾರ್ಜ್ ಯೋಜನೆಯನ್ನು ವರ್ಷವಿಡೀ ಬಳಸಬಹುದು. ಈ ಯೋಜನೆಯು ದಿನಕ್ಕೆ 100 ಉಚಿತ SMS ಮತ್ತು ದಿನಕ್ಕೆ 2.5 GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಅನಿಯಮಿತ 5G ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ನೀವು ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಇತ್ಯಾದಿಗಳನ್ನು ಉಚಿತವಾಗಿ ಬಳಸಬಹುದು.

ರೂ.3,5990 ರೀಚಾರ್ಜ್ ಯೋಜನೆ:

ಜಿಯೋದ ರೂ 3,599 ರೀಚಾರ್ಜ್ ಯೋಜನೆಯು ಒಟ್ಟು 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಂದರೆ, ನೀವು ಈ ಒಂದೇ ರೀಚಾರ್ಜ್ ಯೋಜನೆಯನ್ನು ವರ್ಷವಿಡೀ ಬಳಸಬಹುದು. ಈ ಯೋಜನೆಗೆ 5G ವೇಗದ ಇಂಟರ್ನೆಟ್ ಲಭ್ಯವಿದೆ.

ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 ಉಚಿತ SMS ಅನ್ನು ನೀಡುತ್ತದೆ. ಈ ಯೋಜನೆಯು ದಿನಕ್ಕೆ 2.5GB ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಜಿಯೋ ಸಿನಿಮಾ, ಜಿಯೋ ಟಿವಿ ಸೇರಿದಂತೆ OTT ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಸಹ ಅನುಮತಿಸಲಾಗಿದೆ.

Jio Annual recharge plans ahead of new year 2025

English Summary
Related Stories