ಈ ಜಿಯೋ ಫೋನ್ ಬೆಲೆ ಕೇವಲ ₹799! ಒಮ್ಮೆ ಚಾರ್ಜ್‌ ಮಾಡಿದ್ರೆ 7 ದಿನ ಬ್ಯಾಕಪ್ ಬರುತ್ತೆ

ರಿಲಯನ್ಸ್ ಜಿಯೋ ಕಂಪನಿ “ಜಿಯೋ ಭಾರತ್ ಸೆಫ್ಟಿ ಫಸ್ಟ್” ಹೆಸರಿನ ಹೊಸ ಮೊಬೈಲ್ ಬಿಡುಗಡೆ ಮಾಡಿದ್ದು, ಒಂದು ಚಾರ್ಜ್‌ನಲ್ಲಿ 7 ದಿನಗಳು ಕೆಲಸಮಾಡುವ ಸಾಮರ್ಥ್ಯ ಹಾಗೂ ಕುಟುಂಬ ಭದ್ರತೆಗೆ ಸೂಕ್ತವಾದ ವೈಶಿಷ್ಟ್ಯಗಳೊಂದಿಗೆ ಬಂದಿದೆ.

Jio Safety First: ರಿಲಯನ್ಸ್ ಜಿಯೋ ಕಂಪನಿ ಮತ್ತೆ ಸಂಚಲನ ಸೃಷ್ಟಿಸಿದೆ. ಇಂಡಿಯನ್ ಮೊಬೈಲ್ ಕಾಂಗ್ರೆಸ್ 2025 ಸಂದರ್ಭದಲ್ಲಿ “ಜಿಯೋ ಭಾರತ್ ಸೆಫ್ಟಿ ಫಸ್ಟ್” ಎಂಬ ಹೊಸ ಫೋನ್‌ನ್ನು ಅನಾವರಣಗೊಳಿಸಿದೆ. ಈ ಮೊಬೈಲ್ ಕೇವಲ ಕರೆ ಅಥವಾ ಮೆಸೇಜ್ ಮಾಡಲು ಮಾತ್ರವಲ್ಲ, ಕುಟುಂಬ ಸದಸ್ಯರ ಭದ್ರತೆಯನ್ನೂ ಖಾತ್ರಿ ಪಡಿಸಲು ವಿನ್ಯಾಸಗೊಳಿಸಲಾಗಿದೆ.

ಈ ಫೋನ್‌ನ ಪ್ರಮುಖ ಗುರಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಸುರಕ್ಷಿತ ಸಂಪರ್ಕ ಒದಗಿಸುವುದಾಗಿದೆ. ಇತ್ತೀಚಿನ ಸಾಮಾಜಿಕ ಪರಿಸರದಲ್ಲಿ ಭದ್ರತೆ ದೊಡ್ಡ ಪ್ರಶ್ನೆಯಾಗಿರುವಾಗ, ಜಿಯೋ ಭಾರತ್ ಫೋನ್ ತನ್ನ ವಿಶಿಷ್ಟ ವೈಶಿಷ್ಟ್ಯಗಳಿಂದ ಆತಂಕಗಳನ್ನು ಕಡಿಮೆಗೊಳಿಸುತ್ತದೆ.

ಇದರಲ್ಲಿರುವ ಲೊಕೇಶನ್ ಮಾನಿಟರಿಂಗ್ (Location Monitoring) ಫೀಚರ್ ಮೂಲಕ ಕುಟುಂಬ ಸದಸ್ಯರು ಎಲ್ಲಿದ್ದಾರೆ ಎಂಬ ಮಾಹಿತಿ ಸುಲಭವಾಗಿ ತಿಳಿಯಬಹುದು. ಜೊತೆಗೆ ಯೂಸೇಜ್ ಮ್ಯಾನೇಜರ್ (Usage Manager) ಆಯ್ಕೆಯ ಮೂಲಕ ಕರೆ ಅಥವಾ ಸಂದೇಶ ಮಾಡಲು ಯಾರಿಗೆ ಅವಕಾಶ ನೀಡಬೇಕು ಎಂಬ ನಿಯಂತ್ರಣ ಬಳಕೆದಾರರ ಕೈಯಲ್ಲೇ ಇರುತ್ತದೆ. ಅನಪರಿಚಿತ ನಂಬರ್‌ಗಳಿಂದ ಬರುವ ಕರೆಗಳನ್ನು ಬ್ಲಾಕ್ ಮಾಡಬಹುದಾಗಿದೆ.

ಬಳಕೆ ದೃಷ್ಟಿಯಿಂದ ಈ ಫೋನ್ ತುಂಬಾ ಸರಳವಾಗಿದೆ. ಹಿರಿಯರು ಸಹ ಈ ಫೋನ್‌ನ್ನು ತೊಂದರೆಯಿಲ್ಲದೆ ಬಳಸಬಹುದು. ಜಿಯೋ ಕಂಪನಿ ಈ ಮೊಬೈಲ್‌ನ ಮೂಲಕ ಮಹಿಳೆಯರು, ಮಕ್ಕಳು ಹಾಗೂ ಹಿರಿಯರ ಭದ್ರತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ.

ಬ್ಯಾಟರಿ ವಿಷಯದಲ್ಲಿಯೂ ಈ ಫೋನ್ ಅಪಾರ ಮೆಚ್ಚುಗೆ ಪಡೆದಿದೆ. ಒಂದೇ ಬಾರಿ ಚಾರ್ಜ್ ಮಾಡಿದರೆ ಏಳು ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ. ಈ ರೀತಿಯ ಬ್ಯಾಟರಿ ಲೈಫ್ ಕಡಿಮೆ ಬೆಲೆಯ ಫೋನ್‌ನಲ್ಲಿ ಅಪರೂಪ.

ಬೆಲೆಯ ವಿಷಯಕ್ಕೆ ಬಂದ್ರೆ — ಈ “ಜಿಯೋ ಭಾರತ್ ಸೆಫ್ಟಿ ಫಸ್ಟ್” ಮೊಬೈಲ್ ಕೇವಲ ₹799 ಕ್ಕೆ ಲಭ್ಯವಿದೆ. ಜಿಯೋ ಸ್ಟೋರ್, ಜಿಯೋಮಾರ್ಟ್, ಅಮೆಜಾನ್ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಈ ಫೋನ್ ಖರೀದಿಸಬಹುದು. ಭಾರತೀಯ ಕುಟುಂಬಗಳ ಭದ್ರತೆ ಬಲವಾಗಲು ಈ ಹೊಸ ಪ್ರಯತ್ನ ಸಹಾಯ ಮಾಡಲಿದೆ ಎಂದು ಜಿಯೋ ವಿಶ್ವಾಸ ವ್ಯಕ್ತಪಡಿಸಿದೆ.

Jio Bharat Safety First, 7 Days Battery Backup at Just 799

Related Stories