ಕೇವಲ 26 ರೂಪಾಯಿಗೆ ಹೊಸ ಜಿಯೋ ಡೇಟಾ ಪ್ಲಾನ್! ಗ್ರಾಹಕರಿಗೆ ಭರ್ಜರಿ ಆಫರ್
ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಕೇವಲ ₹26ರಿಂದ ಪ್ರಾರಂಭವಾಗುವ ಐದು ಹೊಸ ಡೇಟಾ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಕಡಿಮೆ ದರದಲ್ಲಿ ಹೆಚ್ಚು ಡೇಟಾ ಬಳಕೆ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶ.

Jio Data Recharge Plans: ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಮತ್ತು ಕಡಿಮೆ ದರದ ಡೇಟಾ ಪ್ಯಾಕ್‌ಗಳನ್ನು ಘೋಷಿಸಿದೆ. ಕೇವಲ ₹26ರಿಂದ ಪ್ರಾರಂಭವಾಗುವ ಈ ಪ್ಯಾಕ್‌ಗಳು ಹೆಚ್ಚು ಇಂಟರ್ನೆಟ್ ಬಳಸುವವರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಎಲ್ಲಾ ಪ್ಲಾನ್‌ಗಳಿಗೂ 28 ದಿನಗಳ ವ್ಯಾಲಿಡಿಟಿ ಅನ್ವಯವಾಗುತ್ತದೆ.
₹26 ರೂಪಾಯಿ ಪ್ಯಾಕ್‌ನಲ್ಲಿ ಬಳಕೆದಾರರು 2GB ಡೇಟಾ ಪಡೆಯುತ್ತಾರೆ. ಇದು ಜಿಯೋ ಫೋನ್ ಗ್ರಾಹಕರಿಗಾಗಿ ತಯಾರಿಸಲಾದ ಡೇಟಾ ಆಡ್-ಆನ್ ಪ್ಯಾಕ್ ಆಗಿದೆ. ಈ ಪ್ಲಾನ್‌ನಲ್ಲಿ ಕರೆ ಅಥವಾ ಎಸ್‌ಎಂಎಸ್ ಸೌಲಭ್ಯ ಲಭ್ಯವಿಲ್ಲ.
ಅಷ್ಟೇ ಅಲ್ಲದೆ ₹62 ರೂಪಾಯಿ ಪ್ಯಾಕ್‌ನಲ್ಲಿ ಒಟ್ಟು 6GB ಡೇಟಾ ದೊರೆಯುತ್ತದೆ. ₹86 ರೂಪಾಯಿ ಪ್ಲಾನ್‌ನಡಿ ಪ್ರತಿ ದಿನ 0.5GB ಪ್ರಮಾಣದಲ್ಲಿ 14GB ಡೇಟಾ ಸಿಗುತ್ತದೆ. ಕಡಿಮೆ ಬಳಕೆದಾರರಿಗೆ ಈ ಪ್ಯಾಕ್ ಸೂಕ್ತವಾಗಿದೆ.
₹122 ರೂ. ಪ್ಯಾಕ್‌ನಲ್ಲಿ 28 ದಿನಗಳವರೆಗೆ ಪ್ರತಿ ದಿನ 1GB ಡೇಟಾ ಒಟ್ಟು 28GB ಸಿಗುತ್ತದೆ. ಹೆಚ್ಚು ಡೇಟಾ ಬಳಕೆ ಮಾಡುವವರಿಗೆ ₹182 ಪ್ಯಾಕ್ ಉತ್ತಮ ಆಯ್ಕೆ. ಈ ಪ್ಲಾನ್‌ನಡಿ ಪ್ರತಿ ದಿನ 2GB ಡೇಟಾ ಸಿಗುತ್ತದೆ, ಅಂದರೆ 28 ದಿನಗಳಲ್ಲಿ 56GB ಒಟ್ಟು ಲಭ್ಯ.
ಈ ಎಲ್ಲಾ ಪ್ಲಾನ್‌ಗಳು Add-on Data Packs ಆಗಿದ್ದು, ಯಾವುದೇ ಉಚಿತ ಕರೆ ಅಥವಾ ಎಸ್‌ಎಂಎಸ್ ಸೌಲಭ್ಯ ನೀಡುವುದಿಲ್ಲ. ಗ್ರಾಹಕರು ತಮ್ಮ ಪ್ರಸ್ತುತ ಪ್ಲಾನ್‌ಗಳೊಂದಿಗೆ ಇವುಗಳನ್ನು ಸೇರಿಸಿ ಬಳಸಬಹುದು.
ಡೇಟಾ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಯೋ ಈ ರೀತಿಯ ಅಗ್ಗದ ಪ್ಯಾಕ್‌ಗಳನ್ನು ಪರಿಚಯಿಸಿರುವುದು ಗ್ರಾಹಕರ ಖರ್ಚು ಕಡಿಮೆ ಮಾಡಲಿದೆ. ಇಂಟರ್ನೆಟ್‌ನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಕಾಲದಲ್ಲಿ, ₹26ರಿಂದಲೇ ಪ್ರಾರಂಭವಾಗುವ ಈ ಪ್ಲಾನ್‌ಗಳು ಸಾಮಾನ್ಯ ಜನರಿಗೆ ಸಹಾಯಕವಾಗಿವೆ.
Jio Data Plans



