ಬಂಪರ್ ಜಿಯೋ ಎಂಟರ್ಟೈನ್ಮೆಂಟ್ ಪ್ಲಾನ್! ಎಲ್ಲಾ OTT ಆಪ್ಗಳು ಒಂದೇ ಕಡೆ
ಜಿಯೋ ಹೊಸ ಪ್ರೀಪೇಯ್ಡ್ ಪ್ಲಾನ್ ಮೂಲಕ 12ಕ್ಕೂ ಹೆಚ್ಚು OTT ಆ್ಯಪ್ಗಳ ಉಚಿತ ಸಬ್ಸ್ಕ್ರಿಪ್ಶನ್ ಸಿಗಲಿದೆ. ಜೊತೆಗೆ ಅನ್ಲಿಮಿಟೆಡ್ ಕಾಲಿಂಗ್, ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯಗಳೂ ಲಭ್ಯ.

Jio prepaid Recharge Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ನಿರಂತರವಾಗಿ ಹೊಸ ಹೊಸ ಆಫರ್ಗಳನ್ನು ತರಲು ಹೆಸರುವಾಸಿಯಾಗಿದೆ. ಈ ಬಾರಿ 445 ರೂ. ಮಾಸಿಕ ಪ್ಲಾನ್ ಮೂಲಕ ಸಂಪೂರ್ಣ ಪ್ಯಾಕ್ ಅನ್ನು ಪರಿಚಯಿಸಿದೆ. ಇದರಡಿ ಮನರಂಜನೆ, ಇಂಟರ್ನೆಟ್, ಕಾಲಿಂಗ್ ಮತ್ತು ಎಸ್ಎಂಎಸ್ ಎಲ್ಲವೂ ಒಂದೇ ಪ್ಲಾನ್ನಲ್ಲಿ ಸಿಗುತ್ತವೆ.
ಈ ಪ್ಲಾನ್ಗೆ 28 ದಿನಗಳ ವ್ಯಾಲಿಡಿಟಿ ಇದೆ. ಪ್ರತಿದಿನ 2GB ಹೈ-ಸ್ಪೀಡ್ 5G ಅಥವಾ 4G ಡೇಟಾ ಲಭ್ಯವಿದ್ದು, ಡೇಟಾ ಮಿತಿ ಮುಗಿದರೂ ಕಡಿಮೆ ವೇಗದಲ್ಲಿ ಅನ್ಲಿಮಿಟೆಡ್ ಡೇಟಾ ಸಿಗುತ್ತದೆ. ಜೊತೆಗೆ ಪ್ರತಿದಿನ 100 SMS ಗಳ ಸೌಲಭ್ಯವೂ ಇದೆ.
ಈ ಪ್ಲಾನ್ನ ಮುಖ್ಯ ಆಕರ್ಷಣೆ ಎಂದರೆ 12 OTT ಆ್ಯಪ್ಗಳ ಉಚಿತ ಸಬ್ಸ್ಕ್ರಿಪ್ಶನ್. ಇದರಲ್ಲಿ ಸೋನಿ ಲೈವ್, ಜೀ5, ಡಿಸ್ಕವರಿ ಪ್ಲಸ್, ಸನ್ ನೆಕ್ಸ್ಟ್, ಹೋಯ್ ಚೋಯ್, ಫ್ಯಾನ್ ಕೋಡ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಪ್ರೀಮಿಯಂ ಕೂಪನ್ ಕೂಡ ಸೇರಿದೆ.
ಇದೇ ವೇಳೆ, ಜಿಯೋ 899 ರೂ. ಪ್ಲಾನ್ನ್ನೂ ಪರಿಚಯಿಸಿದೆ. ಇದರಲ್ಲಿ 90 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2GB ಡೇಟಾ ಜೊತೆಗೆ 20GB ಹೆಚ್ಚುವರಿ ಡೇಟಾ ಒಟ್ಟು 200GB ಲಭ್ಯ. ಈ ಪ್ಲಾನ್ನಲ್ಲಿಯೂ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಪ್ರತಿದಿನ 100 SMS ಗಳ ಸೌಲಭ್ಯ ಇದೆ.
Jio prepaid entertainment plan with OTT apps



