Jio ಬಳಕೆದಾರರಿಗೆ ಮೆಗಾ ಆಫರ್, Google ಜೊತೆಗೆ ಒಪ್ಪಂದ, 35 ಸಾವಿರ ಮೌಲ್ಯದ Gemini Pro AI ಉಚಿತ!
ರಿಲಯನ್ಸ್ ಜಿಯೋ ಹಾಗೂ ಗೂಗಲ್ ನಡುವೆ ಹೊಸ ಒಪ್ಪಂದದಡಿ, 18ರಿಂದ 25 ವರ್ಷದ ಜಿಯೋ ಬಳಕೆದಾರರಿಗೆ 35,000 ರೂ ಮೌಲ್ಯದ Google Gemini Pro AI ಸೇವೆ 18 ತಿಂಗಳುಗಳ ಕಾಲ ಉಚಿತವಾಗಿ ನೀಡಲಾಗಲಿದೆ.

Google Gemini Pro AI : ಭಾರತದ ಡಿಜಿಟಲ್ ಜಗತ್ತಿನಲ್ಲಿ ಕ್ರಾಂತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿರುವ ರಿಲಯನ್ಸ್ ಜಿಯೋ, (Reliance Jio) ಈಗ ಗೂಗಲ್ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಹೊಸ ಸಹಕಾರದಡಿ, 18ರಿಂದ 25 ವರ್ಷದೊಳಗಿನ ಜಿಯೋ ಬಳಕೆದಾರರಿಗೆ Google Gemini Pro AI ಸೇವೆಯನ್ನು 18 ತಿಂಗಳವರೆಗೆ ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶ ನೀಡಲಾಗುತ್ತಿದೆ.
ಈ ಯೋಜನೆ ಅಕ್ಟೋಬರ್ 30ರಿಂದ ಪ್ರಾರಂಭವಾಗಲಿದ್ದು, 35,000 ರೂ ಮೌಲ್ಯದ ಈ ಸೇವೆ ಅನ್ಲಿಮಿಟೆಡ್ 5G ಪ್ಲ್ಯಾನ್ಗಳಲ್ಲಿ ಲಭ್ಯವಿರುತ್ತದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಈ ಸೌಲಭ್ಯವನ್ನು ಯುವ ಬಳಕೆದಾರರು ಪಡೆಯಬಹುದು.
ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು, “ಭಾರತದ 1.45 ಬಿಲಿಯನ್ ಜನತೆಗೆ ಬೌದ್ಧಿಕ ಸೇವೆಗಳನ್ನು ಸುಲಭವಾಗಿ ತಲುಪಿಸುವುದು ನಮ್ಮ ಗುರಿಯಾಗಿದೆ. ಗೂಗಲ್ಸಹಯೋಗದೊಂದಿಗೆ, ಭಾರತವನ್ನು AI ಸಬಲೀಕೃತ ರಾಷ್ಟ್ರವಾಗಿ ರೂಪಿಸುವ ಕನಸು ನಮ್ಮದು,” ಎಂದು ತಿಳಿಸಿದ್ದಾರೆ.
Gemini Pro ಸೇವೆಯಲ್ಲಿದೆ ಅಪರಿಮಿತ ಚಾಟ್ಗಳು, 2TB ಕ್ಲೌಡ್ ಸ್ಟೋರೇಜ್, Veo 3.1 ಮೂಲಕ ವಿಡಿಯೋ ರಚನೆ, ನ್ಯಾನೋ ಬನಾನಾ ಮೂಲಕ ಚಿತ್ರ ರಚನೆ ಹಾಗೂ ಇತರೆ ಉನ್ನತ AI ಸಾಧನಗಳ ಬಳಕೆ. ಈ ಸಹಕಾರದಿಂದ ಭಾರತೀಯ ಯುವಕರಿಗೆ ತಂತ್ರಜ್ಞಾನದಲ್ಲಿ ಹೊಸ ಹಾದಿ ತೆರೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಭಾಗಸ್ಪಂದನದಿಂದ ಭಾರತದಲ್ಲಿ AI ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವ ಉದ್ದೇಶವಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಇದರಿಂದ ಯುವ ಪೀಳಿಗೆಗೆ ಆಧುನಿಕ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಉಪಯೋಗಿಸಲು ಮಹತ್ವದ ಸಹಕಾರ ದೊರೆಯಲಿದೆ.
Jio Users Get Free Google Gemini Pro AI







