ಇನ್ನು ಹಲವರನ್ನು ಕಾಡುವ ಸಮಸ್ಯೆಗಳಲ್ಲಿ ವಿದ್ಯುತ್ ಬಿಲ್ (Electric bill) ಕೂಡ ಒಂದು, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯೂನಿಟ್ ದರ (Unit rate) ಕೂಡ ಜಾಸ್ತಿ ಆಗಿದ್ದು ವಿದ್ಯುತ್ ಬಿಲ್ ಪ್ರತಿ ತಿಂಗಳು ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಹಾಕುತ್ತದೆ
ಪ್ರತಿ ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ನೋಡಿದರೆ ಅದೆಷ್ಟೋ ಜನ ಟೆನ್ಶನ್ (Tension) ಆಗುತ್ತಾರೆ. 2000ರೂ.ಗಳಿಗಿಂತ ಹೆಚ್ಚಿನ ವಿದ್ಯುತ್ ಬಂದಿರುತ್ತದೆ.
ರಾಜ್ಯ ಸರ್ಕಾರ (State Government) 200 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ ಉಚಿತ ವಿದ್ಯುತ್ (Free Electricity) ಅನ್ನು ನೀಡುವ ಗೃಹಜ್ಯೋತಿ ಯೋಜನೆ (Gruha Jyoti scheme) ಯನ್ನು ಕೂಡ ಜಾರಿಗೆ ತಂದಿದೆ.
ಆದರೆ ಸಾಕಷ್ಟು ಮನೆಗಳಲ್ಲಿ ಕಡಿಮೆ ವಿದ್ಯುತ್ ಬಳಸುವುದು ಗೊತ್ತೇ ಇಲ್ಲ, ಅತಿಯಾಗಿ ವಿದ್ಯುತ್ ಬಳಸುವುದು ರೂಢಿಯಾಗಿ ಬಿಟ್ಟಿದೆ. ಅದರಲ್ಲೂ ನಗರ ಪ್ರದೇಶಗಳನ್ನು ತೆಗೆದುಕೊಂಡರೆ ಫ್ಯಾನ್ ಬದಲು ಎಸಿ (AC), ಎಲೆಕ್ಟ್ರಿಕ್ ಗೀಸರ್ ಹೀಗೆ ಇನ್ನೂ ಹಲವು ವಿದ್ಯುತ್ ಬಿಲ್ ಹೆಚ್ಚು ಮಾಡುವಂತಹ ಉಪಕರಣಗಳನ್ನು ಬಳಸುತ್ತಾರೆ. ಇದರಿಂದ ಅತಿ ಹೆಚ್ಚು ಬಿಲ್ (Electricity Bill) ಪಾವತಿ ಮಾಡುವುದು ಅನಿವಾರ್ಯವಾಗಿದೆ.
ಇನ್ನು ನೀವೇನಾದರೂ ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಲು ಬಯಸಿದರೆ ನಾವು ಈಗ ಹೇಳುವ ಟ್ರಿಕ್ಸ್ ಪ್ರಯತ್ನಿಸಿ ನೋಡಿ ಇದರಿಂದ 200 ಯುನಿಟ್ ಅಲ್ಲ 100 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬರುವ ಹಾಗೆ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಎಲೆಕ್ಟ್ರಿಕ್ ಗೀಸರ್ (Electric Geyser) ಬಳಸುತ್ತಾರೆ. ನೀರು ಬಿಸಿ ಮಾಡಿಕೊಳ್ಳುವ ಈ ಉಪಕರಣದಿಂದ ವಿದ್ಯುತ್ ಯೂನಿಟ್ ಅತಿ ಹೆಚ್ಚು ಬಳಕೆಯಾಗುತ್ತದೆ, ಹಾಗಾಗಿ ವಿದ್ಯುತ್ ಬಿಲ್ ಕೂಡ ಜಾಸ್ತಿ ಬರುತ್ತದೆ.
ಆದ್ದರಿಂದ ಅತಿ ಹೆಚ್ಚು ಬಿಲ್ ಬರುವಂತಹ ಎಲೆಕ್ಟ್ರಿಕ್ ಗೀಸರ್ ಬಳಸುವ ಬದಲು ಗ್ಯಾಸ್ ಗೀಸರ್ (Gas Geyser) ಬಳಸಬಹುದು. ಇದರಿಂದ ಅತಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ
ಎಲೆಕ್ಟ್ರಿಕ್ ಗೀಸರ್ ಅನ್ನು ಅದೆಷ್ಟು ಸಮಯ ಸ್ವೀಚ್ ಆನ್ ಮಾಡಿ ಹಾಗೆಯೇ ಬಿಡುತ್ತೇವೆ. ಇದರಿಂದಲೂ ಕೂಡ ಯೂನಿಟ್ ಹೆಚ್ಚು ಬಳಕೆ ಆಗುತ್ತದೆ ಇದರ ಬದಲು ಸ್ನಾನ ಮಾಡುವಾಗ ಮಾತ್ರ ಬಳಸಿಕೊಳ್ಳುವಂತಹ ಗ್ಯಾಸ್ ಗೀಸರ್ ಅಥವಾ ಇತರ ನೀರು ಬಿಸಿ ಮಾಡುವ ಉಪಕರಣಗಳನ್ನು ಬಳಸಿದರೆ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಬಹುದು.
ಸಾಮಾನ್ಯವಾಗಿ ನಗರ ಭಾಗಗಳಲ್ಲಿ ಬಿಸಿ ಅಥವಾ ಉಷ್ಣತೆ ಹೆಚ್ಚಾಗಿರುವ ಕಾರಣಕ್ಕೆ ಫ್ಯಾನ್ ಗಿಂತಲೂ ಹೆಚ್ಚಾಗಿ AC ಬಳಸಲು ಜನ ಅಭ್ಯಾಸ ಮಾಡಿಕೊಂಡಿದ್ದಾರೆ, ಇದಕ್ಕಾಗಿ ಎಲೆಕ್ಟ್ರಿಕ್ ಎಸಿ ಬದಲು ಇನ್ವರ್ಟರ್ ಎ ಸಿ ಗಳು ಕೂಡ ಮಾರುಕಟ್ಟೆಗೆ ಬಂದಿದೆ, ಇದನ್ನು ಬಳಸಿದರೆ ಶೇಕಡ 40 ರಿಂದ 50 ವಿದ್ಯುತ್ ಕಡಿಮೆ ಮಾಡಿಕೊಳ್ಳಬಹುದೇಂದು ಕಂಪನಿಗಳು ಕೂಡ ತಿಳಿಸುತ್ತವೆ.
ಇನ್ನು ಹೀಗೆ ಎಸಿ ಬಳಸುವವರು ಎಸಿಯ ಡಕ್ಟ್ ಮತ್ತು ಏರ್ ಬ್ಯಾಂಡ್ ಗಳಲ್ಲಿ ಧೂಳು ತುಂಬಿಕೊಳ್ಳದಂತೆ ನೋಡಬೇಕು ಅದನ್ನು ಆಗಾಗ ಸ್ವಚ್ಛಗೊಳಿಸಬೇಕು. ಕ್ಲೀನ್ ಫಿಲ್ಟರ್ ಬಳಸಿದರೆ ಐದರಿಂದ 15% ನಷ್ಟು ವಿದ್ಯುತ್ ಉಳಿಸಬಹುದು.
ಅಡುಗೆ ಮನೆಯಲ್ಲಿ ಬಳಸುವ ಚಿಮಣಿ ಅತಿ ಹೆಚ್ಚು ವಿದ್ಯುತ್ ತೆಗೆದುಕೊಳ್ಳುತ್ತದೆ, ಹಾಗಾಗಿ ಅಗತ್ಯವಿದ್ದರೆ ಮಾತ್ರ ಚಿಮಣಿ ಬಳಕೆ ಮಾಡಬೇಕು ಇಲ್ಲವಾದರೆ ಮನೆಯ ಕಿಟಕಿ ಅಥವಾ ಬಾಗಿಲು ತೆರೆಯುವುದರ ಮೂಲಕ ಅಡುಗೆ ವಾಸನೆ ಅಥವಾ ಹೋಗೆ ಆಚೆ ಹೋಗುವಂತೆ ಮಾಡಬಹುದು. ಹೀಗೆ ಮಾಡುವುದರಿಂದ ಚಿಮಣಿ ಬಳಸುವ ಅಗತ್ಯ ಇರುವುದಿಲ್ಲ.
ಎಲ್ಲಾ ಬದಲಾವಣೆಗಳ ಜೊತೆಗೆ ಅನಗತ್ಯವಾಗಿ ಮನೆಯಲ್ಲಿ ಲೈಟ್ ಹಾಕಿ ಇಡುವುದು ಅಥವಾ ಯಾವುದಾದರೂ ಎಲೆಕ್ಟ್ರಿಕ್ ವಸ್ತುಗಳನ್ನು ಅನಗತ್ಯವಾಗಿ ಬಳಸುವುದು ಇವೆಲ್ಲವನ್ನು ತಪ್ಪಿಸಿ.
ಈ ರೀತಿಯ ಸಣ್ಣ ಸಣ್ಣ ಬದಲಾವಣೆಗಳು ಕೂಡ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಬರಲು ಸಹಾಯ ಮಾಡುತ್ತವೆ. ಈ ತಿಂಗಳಿಂದಲೇ ಈ ಎಲ್ಲಾ ಟ್ರಿಕ್ಸ್ ಟ್ರೈ ಮಾಡಿ ನೋಡಿ ಮುಂದಿನ ತಿಂಗಳು ನೂರು ಯೂನಿಟ್ ಅಷ್ಟು ಕಡಿಮೆ ವಿದ್ಯುತ್ ಬರುವುದು ಪಕ್ಕಾ!
Just do this and your electricity bill will not exceed 200 units
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Just do this and your electricity bill will not exceed 200 units