ಕೇಂದ್ರದಿಂದ ದಿಟ್ಟ ನಿರ್ಧಾರ; ರಾತ್ರೋ ರಾತ್ರಿ ಕ್ಲೋಸ್ ಆಯ್ತು ಇಂತವರ ಪ್ಯಾನ್ ಕಾರ್ಡ್
ಸದ್ಯ ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (Pan Card), ಮತದಾರರ ಗುರುತಿನ ಚೀಟಿ (Voter ID) ಪ್ರಮುಖ ದಾಖಲೆಗಳಾಗಿವೆ. ಸದ್ಯ ದೇಶದಲ್ಲಿ ಆಧಾರ್ ಕಾರ್ಡ್ನಷ್ಟೇ ಪ್ಯಾನ್ ಕಾರ್ಡ್ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ
ದೇಶದಲ್ಲಿ ಪ್ರತಿಯೊಬ್ಬ ನಾಗರೀಕನು ತನ್ನ ಗುರುತಿಗಾಗಿ ಕೆಲವೊಂದು ದಾಖಲೆಗಳನ್ನು (Documents) ಹೊಂದಿರಬೇಕಾಗುತ್ತದೆ. ಅದನ್ನು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಳಸಬಹುದು.
ಸದ್ಯ ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (Pan Card), ಮತದಾರರ ಗುರುತಿನ ಚೀಟಿ (Voter ID) ಪ್ರಮುಖ ದಾಖಲೆಗಳಾಗಿವೆ. ಸದ್ಯ ದೇಶದಲ್ಲಿ ಆಧಾರ್ ಕಾರ್ಡ್ನಷ್ಟೇ ಪ್ಯಾನ್ ಕಾರ್ಡ್ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಯಾರ ಬಳಿಯಲ್ಲಾದರೂ ಆಧಾರ್ ಕಾರ್ಡ್ ಒಮ್ಮೆ ಇಲ್ಲ ಅಂತಾದ ಸಂದರ್ಭದಲ್ಲಿ ಅಂತಹ ವ್ಯಕ್ತಿ ಪ್ಯಾನ್ ಕಾರ್ಡ್ ಬಳಕೆ ಮಾಡಬಹುದಾಗಿದೆ. ಅಲ್ಲದೇ ಕೇಂದ್ರ ಸರ್ಕಾರವು ಈಗಾಗಲೇ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ (Aadhaar Card Link With Pan Card) ಮಾಡಿಸಲು ಸೂಚನೆ ನೀಡಿದೆ.
ಈ ಸೂಚನೆ ಅನ್ವಯ ಬಹುತೇಕರು ತಮ್ಮ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿದ್ದಾರೆ. ಇಲ್ಲದಿದ್ದರೆ ಮತ್ಯಾವ ತಲೆನೋವು ಬಂದಿತೋ ಎಂದು ಕೆಲವು ಲಿಂಕ್ ಮಾಡಿಸಿದ್ದಾರೆ.
ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದರೆ ವೈಯಕ್ತಿಕ ದಾಖಲೆಗಳು ಬೇಕೆ ಬೇಕು. ಅಲ್ಲದೆ ಸರ್ಕಾರಗಳು ಕೂಡ ಜನ ಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಲವಾರು ಸೌಲಭ್ಯ ನೀಡುತ್ತಿವೆ.
ಆಸ್ತಿ, ಮನೆ ಖರೀದಿಗೆ ಸರ್ಕಾರದಿಂದ ಹೊಸ ನಿಯಮ; ಇಷ್ಟು ಹಣದ ವಹಿವಾಟು ಮಾಡುವಂತಿಲ್ಲ
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿ:
ಈಗಾಗಲೇ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸೂಚನೆ ನೀಡಿತ್ತು. ಆದಾಯ ತೆರಿಗೆ ಪಾವತಿದಾರರಿಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿರುವುದರಿಂದ ಅವರು ಲಿಂಕ್ ಮಾಡಿಸಿಕೊಂಡಿದ್ದಾರೆ.
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಲ್ಲಿ ಅಂತಹವರು ಪ್ಯಾನ್ ಕಾರ್ಡ್ ಉಪಯೋಗ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಬಹುದು.
ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜೂನ್ 31 ರ ವರೆಗೆ ಗಡುವು ನೀಡಿತ್ತು. ಸರ್ಕಾರ ನಿಗದಿ ಪಡಿಸಿರುವ ಸಮಯಕ್ಕಿಂತ ನಂತರ ಲಿಂಕ್ ಮಾಡಿಸುವವರಿಗೆ 1೦೦೦ ರೂ. ದಂಡ ಪಾವತಿಸಿ ಲಿಂಕ್ ಮಾಡಿಸಲು ಅವಕಾಶ ನೀಡಲಾಗಿತ್ತು.
ಹೀಗೆ ಹಲವಾರು ಅವಕಾಶ ನೀಡಿದರೂ ದೇಶದಲ್ಲಿ ಲಕ್ಷಾಂತರ ಮಂದಿ ಇದುವರೆಗೂ ತಮ್ಮ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಎನ್ನುವ ವಿಚಾರ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.
ಯಾವುದೇ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವವರಿಗೆ ಮಹತ್ವದ ಮಾಹಿತಿ
ದೇಶದಲ್ಲಿ ಕ್ಲೋಸ್ ಆಯ್ತು 11.5 ಕೋಟಿ ಜನರ ಪ್ಯಾನ್ ಕಾರ್ಡ್:
ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ಅನ್ನು ಕೇಂದ್ರ ಸರ್ಕಾರವು ನಿಷ್ಕ್ರಿಯಗೊಳಿಸಿದೆ. ಈ ಕುರಿತು ಆರ್ಟಿಐ ಮಾಹಿತಿ ನೀಡಿದ್ದು, ದೇಶದಲ್ಲಿ ಸುಮಾರು 11.5 ಕೋಟಿ ಜನರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.
ದೇಶದಲ್ಲಿ 7೦.24 ಕೋಟಿ ಜನರು ಪ್ಯಾನ್ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ 57.27 ಕೋಟಿ ಜನರು ತಮ್ಮ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿದ್ದಾರೆ. ಉಳಿದ 12 ಕೋಟಿಗೂ ಅಧಿಕ ಜನರು ಲಿಂಕ್ ಮಾಡಿಸಿಲ್ಲ ಎಂದು ಆರ್ಟಿಐ ವಿವರ ನೀಡಿದೆ.
Key decision from the Centre, PAN card has been closed Such People