ದಿನಕ್ಕೆ 45 ರೂಪಾಯಿ ಹೂಡಿಕೆ ಮಾಡಿದರೆ 25 ಲಕ್ಷ ನಿಮ್ಮದಾಗುತ್ತೆ! ಈ ಯೋಜನೆ ಬಗ್ಗೆ ಗೊತ್ತಾ
ದಿನಕ್ಕೆ ಅಷ್ಟೇನೂ ದೊಡ್ಡ ಮೊತ್ತವಲ್ಲದ ₹45 ಹೂಡಿಕೆ ಮಾಡಿದರೂ LIC ಜೀವನ ಆನಂದ್ ಯೋಜನೆ ಮೂಲಕ ಉದ್ದಕಾಲಕ್ಕೆ ಉತ್ತಮ ಲಾಭ, ಭದ್ರತೆ ಮತ್ತು ಕುಟುಂಬಕ್ಕೆ ನೆಮ್ಮದಿ ಒದಗಿಸುವುದು ಈ ಯೋಜನೆಯ ವಿಶೇಷ.
Long-Term Savings Plan: ಬೆಂಗಳೂರು ಸೇರಿದಂತೆ ದೇಶದಾದ್ಯಂತ ದೀರ್ಘಾವಧಿ ಭದ್ರತೆ ಮೊದಲ ಆದ್ಯತೆಯಾದ ಮನೆಗಳಲ್ಲಿ LIC ಯೋಜನೆಗಳ ಮೇಲಿನ ನಂಬಿಕೆ ಇನ್ನೂ ಬಲವಾಗಿಯೇ ಉಳಿದಿದೆ.
ಕಡಿಮೆ ಪ್ರೀಮಿಯಂ ನೀಡಿ ಉತ್ತಮ ಮ್ಯಾಚುರಿಟಿ ರಿಟರ್ನ್ಸ್ ಪಡೆಯಲು ಸಾಧ್ಯವಾಗುವ ಜನಪ್ರಿಯ ಯೋಜನೆಗಳಲ್ಲಿ LIC Jeevan Anand ಪ್ರಮುಖವಾಗಿಯೇ ಪರಿಗಣಿಸಲಾಗುತ್ತದೆ. ಈ ಯೋಜನೆ ಸೆೇವಿಂಗ್ಸ್ ಮತ್ತು ಇನ್ಸುರನ್ಸ್ ಎರಡರನ್ನೂ ಒಂದೇ ಪ್ಯಾಕೇಜ್ನಲ್ಲಿ ನೀಡುತ್ತದೆ.
ದಿನಕ್ಕೆ ₹45: ಹೇಗೆ ₹25 ಲಕ್ಷಕ್ಕೆ ತಲುಪುತ್ತದೆ?
ಜೀವನ ಆನಂದ್ ಯೋಜನೆಯಲ್ಲಿ ದಿನಕ್ಕೆ ಕೇವಲ ₹45 ಹೂಡಿಕೆ ಮಾಡಿದರೂ ದೀರ್ಘಾವಧಿಯಲ್ಲಿ ಸುಮಾರು ₹25 ಲಕ್ಷ ಮ್ಯಾಚುರಿಟಿ ವ್ಯಾಲ್ಯೂ ಪಡೆಯಬಹುದು ಎನ್ನುವುದು ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸುತ್ತಿದೆ.
ತಿಂಗಳಿಗೆ ₹1,358 (ವಾರ್ಷಿಕ ₹16,300) ಪಾವತಿಸಿದರೆ 35 ವರ್ಷಗಳ ಅವಧಿಯಲ್ಲಿ ನಿಮ್ಮ ಹೂಡಿಕೆ ₹5,70,500 ಆಗುತ್ತದೆ. ಈ ವೇಳೆಯಲ್ಲಿ ಬೋನಸ್ಗಳೂ ಸೇರಿ ಮ್ಯಾಚುರಿಟಿ ಮೊತ್ತ ಭಾರಿಯಾಗಿ ಏರಿಕೆಯಾಗುತ್ತದೆ.
ಕುಟುಂಬಕ್ಕೆ ಹೆಚ್ಚುವರಿ ಭದ್ರತೆ
ಈ ಯೋಜನೆ ಕೇವಲ ಮ್ಯಾಚುರಿಟಿ ಹಣ ನೀಡುವುದಲ್ಲ, ಕುಟುಂಬಕ್ಕೆ ಹೆಚ್ಚುವರಿ ಆರ್ಥಿಕ ಭದ್ರತೆ ನೀಡುವ ಹಲವು ರೈಡರ್ ಆಯ್ಕೆಗಳನ್ನೂ ಒದಗಿಸುತ್ತದೆ. ಆಕ್ಸಿಡೆಂಟಲ್ ಡೆತ್–ಡಿಸೇಬಿಲಿಟಿ ರೈಡರ್, ನ್ಯೂ ಟರ್ಮ್ ಇನ್ಸುರನ್ಸ್ ರೈಡರ್, ಕ್ರಿಟಿಕಲ್ ಇಲ್ನೆಸ್ ರೈಡರ್ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಿದ್ದು, ಪಾಲಿಸಿ ಅವಧಿಯಲ್ಲಿ ಪಾಲುದಾರರ ಅಕಾಲಿಕ ಮರಣ ಸಂಭವಿಸಿದರೆ ನಾಮಿನಿಗೆ ಮೊತ್ತದ 125% ಡೆತ್ ಬೆನಿಫಿಟ್ ದೊರೆಯುತ್ತದೆ.
ರಿವಿಶನರಿ ಬೋನಸ್ ಮತ್ತು ಫೈನಲ್ ಬೋನಸ್ ಎಂಬ ಎರಡು ಬೋನಸ್ಗಳ ಲಾಭ ಈ ಯೋಜನೆಯಲ್ಲಿ ಇದೆ. LIC ಕಾರ್ಯಕ್ಷಮತೆಗೆ ಅನುಗುಣವಾಗಿ ಈ ಬೋನಸ್ಗಳು ನಿಮ್ಮ ಪಾಲಿಸಿ ಮೌಲ್ಯಕ್ಕೆ ಸೇರ್ಪಡೆಯಾಗುತ್ತವೆ. 35 ವರ್ಷಗಳ ಅವಧಿಯಲ್ಲಿ ರಿವಿಶನರಿ ಬೋನಸ್ ಸುಮಾರು ₹8.6 ಲಕ್ಷ, ಫೈನಲ್ ಬೋನಸ್ ಸುಮಾರು ₹11.5 ಲಕ್ಷ ಇರುವ ಸಾಧ್ಯತೆಗಳನ್ನು ತಜ್ಞರು ಸೂಚಿಸುತ್ತಾರೆ.
ಮಧ್ಯಮ ವರ್ಗದ ಕುಟುಂಬಗಳಿಗೆ ಈ ಪ್ಲಾನ್ ಜನಪ್ರಿಯವಾಗಿರುವುದಕ್ಕೆ ಕಾರಣ, ಕಡಿಮೆ ಪ್ರೀಮಿಯಂ, ಸ್ಥಿರ ಲಾಭ, ಉದ್ದಕಾಲಿಕ ಭರವಸೆ, ಕುಟುಂಬಕ್ಕೆ ಭದ್ರತೆ. ಮ್ಯಾಚುರಿಟಿಯಲ್ಲಿ ಒಟ್ಟಾರೆ ಹಣ ಸಿಗುವುದರಿಂದ ಭವಿಷ್ಯ ಯೋಜನೆಗಳಿಗೆ ಇದು ಸಹಾಯಕ.
ಟ್ಯಾಕ್ಸ್ ಬಿನಿಫಿಟ್ ಇಲ್ಲ, ಯೋಜನೆಗೂ ಮುನ್ನ ಸಲಹೆ ಅಗತ್ಯ
ಈ ಯೋಜನೆ ಟ್ಯಾಕ್ಸ್ ಡಿಡಕ್ಷನ್ ನೀಡುವುದಿಲ್ಲ ಎಂಬುದು ಗಮನಿಸಬೇಕಾದ ವಿಷಯ. ಆದ್ದರಿಂದ ಯಾವುದೇ ವಿಮಾ ಯೋಜನೆಗೆ (Insurance Policy) ಹಣ ಹೂಡುವ ಮೊದಲು ಫೈನಾನ್ಷಿಯಲ್ ಸಲಹೆಗಾರರೊಂದಿಗೆ ಚರ್ಚಿಸುವುದು ಸೂಕ್ತ.



