ನಿಮ್ಮ ಆಸ್ತಿ, ಜಮೀನು ನಿಮ್ಮ ಕೈ ತಪ್ಪಿ ಹೋಗ್ತಿದ್ಯ? ಕಂಡವರ ಪಾಲಾಗಿದ್ಯಾ? ಈ ರೀತಿ ಸರಿ ಮಾಡಿಕೊಳ್ಳಿ

ನಿಮ್ಮ ಜಮೀನು ಅಥವಾ ಮನೆ ಯಾರಾದ್ರೂ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರೆ ಅಥವಾ ಖಾಲಿ ಜಾಗವನ್ನು ಅತಿಕ್ರಮಣ ಮಾಡಿದ್ದರೆ ಕಂಪ್ಲೇಂಟ್ ಕೊಡುವುದರ ಮೂಲಕ ಪುನ: ನಿಮ್ಮ ವಶಕ್ಕೆ ಪಡೆದುಕೊಳ್ಳಬಹುದು.

- - - - - - - - - - - - - Story - - - - - - - - - - - - -
  • ನಿಮ್ಮ ಆಸ್ತಿ, ಜಮೀನು ಕಂಡವರ ಪಾಲಾಗಿದ್ಯಾ? ಈ ರೀತಿ ಸರಿ ಮಾಡಿಕೊಳ್ಳಿ
  • ಒಂದು ಕಂಪ್ಲೇಂಟ್ ನೀಡಿದರೆ ಸಾಕು ನಿಮ್ಮ ಆಸ್ತಿ ನಿಮ್ಮ ಕೈ ಸೇರುತ್ತದೆ.
  • ಅತಿಕ್ರಮಣ ಆಸ್ತಿ ಹಿಂಪಡೆಯಲು ಸರ್ಕಾರದ ನೆರವು

property rights : ಯಾರ ಆಸ್ತಿ, ಮನೆ, ಜಮೀನನ್ನು ಇನ್ನೊಬ್ಬರು ಸುಲಭವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಇತ್ತೀಚಿಗೆ ಈ ಕಷ್ಟದ ಕೆಲಸವು ಸುಲಭವಾಗಿ ಬಿಟ್ಟಿದೆ.. ನಾವು ನಮ್ಮ ಜಮೀನು ನಮ್ಮ ಹೆಸರಿನಲ್ಲಿಯೇ ರಿಜಿಸ್ಟರ್ ಆಗಿದೆ ಅಂತ ಸುಮ್ಮನೆ ಕುಳಿತುಕೊಂಡರೆ ಇನ್ಯಾರೋ ಅದೇ ಜಮೀನು ಅಥವಾ ಇತರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ಬಿಡುತ್ತಾರೆ.

ಇಂತಹ ಸಾಕಷ್ಟು ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿದ್ದು ಇದರ ಬಗ್ಗೆ ಜಾಗರೂಕರಾಗಿ ಇರಬೇಕು ಅಂತ ಸರ್ಕಾರವು ಎಚ್ಚರಿಕೆ ನೀಡಿದೆ.

ಖಾಲಿ ಭೂಮಿ ಅಥವಾ ಬಾಡಿಗೆ ಆಸ್ತಿಯನ್ನ ಆಕ್ರಮಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ ಪೊಲೀಸ್ ಠಾಣೆಗಳಲ್ಲಿ ನ್ಯಾಯಾಲಯದಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ ಅತಿಕ್ರಮಣ ಆಸ್ತಿ ಅಥವಾ ಅಕ್ರಮ ಆಸ್ತಿಯನ್ನು ಮಾಡುವವರನ್ನು ಗುರುತಿಸಿ, ಅವರಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಮುಂದಾಗಿದೆ.

ನಿಮ್ಮ ಆಸ್ತಿ, ಜಮೀನು ನಿಮ್ಮ ಕೈ ತಪ್ಪಿ ಹೋಗ್ತಿದ್ಯ? ಕಂಡವರ ಪಾಲಾಗಿದ್ಯಾ? ಈ ರೀತಿ ಸರಿ ಮಾಡಿಕೊಳ್ಳಿ

ಭೂ ಕಬಳಿಕೆ ಮಾಡಿದರೆ ಅಪರಾಧ!

ಭೂ ಕಬಳಿಕೆ ಮಾಡುವುದು ಅಪರಾಧ. ಭಾರತೀಯ ದಂಡ ಸಂಹಿತೆ ಸೆಕ್ಷನ್ 441, ಭೂಮಿ ಆಸ್ತಿ ಕಬಳಿಕೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಹೇಳಲಾಗಿದೆ. ಒಂದು ವೇಳೆ ನಿಮ್ಮ ಜಮೀನು ಅಥವಾ ಮನೆ ಯಾರಾದ್ರೂ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರೆ ಅಥವಾ ಖಾಲಿ ಜಾಗವನ್ನು ಅತಿಕ್ರಮಣ ಮಾಡಿದ್ದರೆ ಕಂಪ್ಲೇಂಟ್ ಕೊಡುವುದರ ಮೂಲಕ ಪುನ: ನಿಮ್ಮ ವಶಕ್ಕೆ ಪಡೆದುಕೊಳ್ಳಬಹುದು.

Property Rights

ಎಲ್ಲಿ ದೂರು ಸಲ್ಲಿಸಬೇಕು?

ಅಕ್ರಮವಾಗಿ ಜಮೀನು ಆಸ್ತಿ ಒತ್ತುವರಿ ಮಾಡಿಕೊಂಡಿದ್ದರೆ ಮೊದಲಿಗೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಬೇಕು. ಬಳಿಕ ಭೂ ಕಂದಾಯ ಇಲಾಖೆಗೂ ದೂರು ಕೊಡಬೇಕು. ನೀವು ಮಾಡಿರುವ ಆರೋಪ ನಿಜವಾಗಿದ್ದರೆ ಅಂಥವರ ಮೇಲೆ ಕಾನೂನಿನ ಪ್ರಕಾರ ಆಕ್ಷನ್ ತೆಗೆದುಕೊಳ್ಳಲಾಗುತ್ತದೆ.

ಅದು ಅಲ್ಲದೆ ಸ್ವಾದಿನಪಡಿಸಿಕೊಳ್ಳುವ ಸಮಯದಲ್ಲಿ ಆಸ್ತಿಗೆ ಯಾವುದೇ ರೀತಿಯ ಹಾನಿ ಉಂಟಾದಲ್ಲಿ ಆದೇಶ 39ರ ನಿಯಮ ಒಂದು ಎರಡು ಮತ್ತು ಮೂರರ ಪ್ರಕಾರ ಆಸ್ತಿಗೆ ಉಂಟಾಗಿರುವ ಹಾನಿಗೆ ಪರಿಹಾರವನ್ನು ಕೂಡ ಪಡೆಯಬಹುದು.

Property Rules

ಒಂದು ವೇಳೆ ಸರ್ಕಾರ ಆಸ್ತಿಯನ್ನು ವಶಪಡಿಸಿಕೊಂಡಿದ್ದರೆ ಹಣ ಲ್ಯಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ ಸೆಕ್ಷನ್ 8(3) ಅಡಿಯಲ್ಲಿ ಒಂದು ವರ್ಷದ ಒಳಗೆ ತನಿಖೆ ನಡೆಸಿ ವಶಪಡಿಸಿಕೊಂಡ ಆಸ್ತಿಯನ್ನು ಯಾರಿಗೆ ಹಿಂತಿರುಗಿಸಬೇಕೋ ಅವರಿಗೆ ಹಿಂತಿರುಗಿಸಬೇಕಾಗುತ್ತದೆ. ಇನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿ ಸರಿಯಾಗಿ ಒಪ್ಪಂದವನ್ನು ಮಾಡಿಕೊಳ್ಳಬೇಕು ಇಲ್ಲವಾದರೆ ವಂಚನೆ ಆಗುವ ಸಾಧ್ಯತೆ ಇರುತ್ತದೆ.

Lost Your Property or Land to Encroachers, Here’s How to Get It Back

English Summary
Related Stories