2026ರಲ್ಲಿ ಸ್ವಂತ ಮನೆ ಮಾಡಿಕೊಳ್ಳುವ ಕನಸಾ? ಹಾಗಾದ್ರೆ, ಹೋಮ್ ಲೋನ್ ಬೆಸ್ಟ್ ಆಪ್ಷನ್ ಇದು
Home Loan: ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ 2026ರಲ್ಲಿ ಹೋಮ್ ಲೋನ್ ಬಡ್ಡಿಯಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯ ಸಾಧ್ಯ. LIC ಹೌಸಿಂಗ್ ಫೈನಾನ್ಸ್ 7.15%ರಿಂದ ಆರಂಭವಾಗುವ ಆಕರ್ಷಕ ದರ ನೀಡುತ್ತಿದೆ.
- ಕಡಿಮೆ ಬಡ್ಡಿ ಹೋಮ್ ಲೋನ್, 7.15%ರಿಂದ ಆರಂಭ
- ಕ್ರೆಡಿಟ್ ಸ್ಕೋರ್ ಪ್ರಭಾವ ಬಡ್ಡಿದರ ನಿರ್ಧಾರಕ್ಕೆ ಪ್ರಮುಖ
- LIC ಹೌಸಿಂಗ್ ಫೈನಾನ್ಸ್, ₹5 ಕೋಟಿ ವರೆಗೆ ಸಾಲ
2026ರಲ್ಲಿ ಮನೆ ಕನಸಿಗೆ ಸರಿಯಾದ ಸಮಯ?
Home Loan: ಹೊಸ ವರ್ಷದಲ್ಲಿ ಸ್ವಂತ ಮನೆ ಖರೀದಿ ಕನಸು ಕಾಣುತ್ತಿರುವವರಿಗೆ ಹೋಮ್ ಲೋನ್ ಬಡ್ಡಿದರವೇ ಪ್ರಮುಖ ಅಂಶ. ಗೃಹ ಸಾಲವು ದೀರ್ಘಾವಧಿಯ ಬದ್ಧತೆ ಆಗಿರುವುದರಿಂದ, ಬಡ್ಡಿದರದಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರೂ ಒಟ್ಟು ಮರುಪಾವತಿಯಲ್ಲಿ ದೊಡ್ಡ ಮೊತ್ತದ ವ್ಯತ್ಯಾಸ ಕಾಣಿಸುತ್ತದೆ.
ಹೀಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಆಯ್ಕೆ ಮಾಡುವ ಮೊದಲು ಬಡ್ಡಿದರಗಳನ್ನು ಹೋಲಿಕೆ ಮಾಡುವುದು ಅತ್ಯಗತ್ಯ.
ತಜ್ಞರ ಅಭಿಪ್ರಾಯದಂತೆ, ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಹೊಂದಿರುವವರಿಗೆ 2026ರಲ್ಲಿ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಪಡೆಯುವ ಅವಕಾಶಗಳು ಹೆಚ್ಚಿವೆ. ಇದರಿಂದ ತಿಂಗಳ EMI ಕಡಿಮೆಯಾಗುವುದರ ಜೊತೆಗೆ ಒಟ್ಟು ಬಡ್ಡಿ ವೆಚ್ಚವೂ ಕಡಿಮೆಯಾಗುತ್ತದೆ.
ಇದನ್ನೂ ಓದಿ: 75 ಸಾವಿರ ಬೆಲೆಯ ಈ ಸ್ಕೂಟರ್ ದಾಖಲೆ ಮಾರಾಟ, ಜೂಪಿಟರ್, ಆಕ್ಸೆಸ್ಗೂ ಗಟ್ಟಿ ಪೈಪೋಟಿ
LIC ಹೌಸಿಂಗ್ ಫೈನಾನ್ಸ್ನಲ್ಲಿ ಏನು ವಿಶೇಷ?
LIC ಹೌಸಿಂಗ್ ಫೈನಾನ್ಸ್ ಪ್ರಸ್ತುತ ತನ್ನ ಗ್ರಾಹಕರಿಗೆ ಅತ್ಯಂತ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ. ಆರಂಭಿಕ ಬಡ್ಡಿದರ 7.15 ಶೇಕಡಾಗಿದ್ದು, ಉತ್ತಮ ಕ್ರೆಡಿಟ್ ಸ್ಕೋರ್ ಇದ್ದಲ್ಲಿ ₹5 ಕೋಟಿ ವರೆಗೆ ಹೋಮ್ ಲೋನ್ ಪಡೆಯಲು ಅವಕಾಶ ಇದೆ.
ಆದರೆ ಗ್ರಾಹಕರ ಕ್ರೆಡಿಟ್ ಇತಿಹಾಸ ಮತ್ತು ಸ್ಕೋರ್ ಆಧಾರವಾಗಿ ಬಡ್ಡಿದರದಲ್ಲಿ ಬದಲಾವಣೆ ಆಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಬಡ್ಡಿದರ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಚಿನ್ನದ ಬೆಲೆ ರೆಕಾರ್ಡ್ ಮಟ್ಟಕ್ಕೆ ಏರಿಕೆ, ಇಂದು ಬೆಂಗಳೂರು ಗ್ರಾಹಕರಿಗೆ ಡಬಲ್ ಶಾಕ್!
ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬಡ್ಡಿದರಗಳು
- 825ಕ್ಕಿಂತ ಹೆಚ್ಚು – 7.15%
- 800 ರಿಂದ 824 – 7.25%
- 775 ರಿಂದ 799 – 7.35%
- 750 ರಿಂದ 774 – 7.45%
- 725 ರಿಂದ 749 – 7.65%
- 700 ರಿಂದ 724 – 7.95%
- 600 ರಿಂದ 699 – 8.75%
- 600ಕ್ಕಿಂತ ಕಡಿಮೆ – 9.55% ವರೆಗೆ
ಸಾಲಕ್ಕೆ ಮುನ್ನ ಗಮನಿಸಬೇಕಾದದ್ದು
ಹೋಮ್ ಲೋನ್ಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದು, EMI ಸಾಮರ್ಥ್ಯ ಲೆಕ್ಕ ಹಾಕುವುದು ಮತ್ತು ದೀರ್ಘಾವಧಿ ಹಣಕಾಸು ಯೋಜನೆ ರೂಪಿಸುವುದು ಅತ್ಯಂತ ಮುಖ್ಯ. ಇದರಿಂದ ಮುಂದಿನ ವರ್ಷಗಳಲ್ಲಿ ಆರ್ಥಿಕ ಒತ್ತಡ ತಪ್ಪಿಸಬಹುದು.



