LPG Cylinder: 200 ರೂಪಾಯಿಗಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಪಡೆಯಿರಿ, ಈ ಪಡಿತರ ಚೀಟಿ ಇದ್ದರೆ ಮಾತ್ರ ರಿಯಾಯಿತಿ!

Story Highlights

LPG Cylinder: LPG ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಹಾಗೂ ಪಡಿತರ ಚೀಟಿದಾರರಿಗೆ ರೂ. 200 ರಿಯಾಯಿತಿ ಲಭ್ಯವಿದೆ. ಇದರಿಂದ ಹಲವರಿಗೆ ಲಾಭವಾಗಲಿದೆ. ಈ ರಿಯಾಯಿತಿ ಪಡೆಯುವುದು ಹೇಗೆ ಎಂದು ಈಗ ತಿಳಿಯೋಣ

LPG Cylinder: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಒಳ್ಳೆಯ ಸುದ್ದಿ. ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಬಹುದು. ಎಲ್.ಪಿ.ಜಿ (LPG) ಸಿಲಿಂಡರ್ ಮೇಲೆ 2,400 ಸಬ್ಸಿಡಿ ಲಭ್ಯವಿದೆ. ಈಗ ಆ ರಿಯಯಾಯಿತಿ ಪಡೆಯುವುದು ಹೇಗೆ ಎಂದು ಪೂರ್ಣವಾಗಿ ತಿಳಿಯೋಣ.

ಕೇಂದ್ರ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಉಜ್ವಲ ಯೋಜನೆಯೂ ಒಂದು. ಈ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆದವರು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಬಹುದು. ಈ ಪ್ರಯೋಜನ ಇನ್ನೂ ಒಂದು ವರ್ಷದವರೆಗೆ ಇರುತ್ತದೆ. ಕೇಂದ್ರವು ಇತ್ತೀಚೆಗೆ ಈ ಪ್ರಯೋಜನವನ್ನು ವಿಸ್ತರಿಸಿದೆ.

ಚಿನ್ನದ ಬೆಲೆ ಇಂದು ಸ್ಥಿರ, ದೇಶದ ಪ್ರಮುಖ ನಗರಗಳಲ್ಲಿ ಹೇಗಿದೆ ಚಿನ್ನದ ಬೆಲೆ? ಚಿನ್ನ ಮತ್ತು ಬೆಳ್ಳಿ ಬೆಲೆ ಕಂಪ್ಲೀಟ್ ಡೀಟೇಲ್ಸ್

ಉಜ್ವಲಾ ಯೋಜನೆಯಡಿ (Pradhan Mantri Ujjwala Yojana) ಸಂಪರ್ಕ ಹೊಂದಿದರುವ ಪ್ರತಿಯೊಬ್ಬರು ಗ್ಯಾಸ್ ಸಿಲಿಂಡರ್ (14.2 ಕೆಜಿ) ಮೇಲೆ ರೂ.200 ಸಬ್ಸಿಡಿ ಪಡೆಯಬಹುದು ಎಂದು ಭಾರತ ಸರ್ಕಾರ ಈಗಾಗಲೇ ಸೂಚಿಸಿದೆ. ಅವರಿಗೆ ವರ್ಷಕ್ಕೆ 12 ಸಿಲಿಂಡರ್‌ಗಳವರೆಗೆ ಗ್ಯಾಸ್ ಸಬ್ಸಿಡಿ ಅನ್ವಯಿಸುತ್ತದೆ.

ಅಂದರೆ, ಈ ಲೆಕ್ಕಾಚಾರವನ್ನು ನೋಡಿದರೆ.. ಪ್ರತಿ ಸಿಲಿಂಡರ್‌ಗೆ ರೂ. 200 ಎಂದರೆ.. ವರ್ಷಕ್ಕೆ 12 ಸಿಲಿಂಡರ್‌ಗಳ ದರದಲ್ಲಿ ಒಟ್ಟು ರೂ. 2,400 ಸಹಾಯಧನ ಪಡೆಯಬಹುದು. ಇದರಿಂದ ಎಷ್ಟೋ ಹೊರೆ ಕಡಿಮೆಯಾಗಲಿದೆ ಎನ್ನಬಹುದು.

ದೇಶದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (Pradhan Mantri Ujjwala Yojana) ಸುಮಾರು 10 ಕೋಟಿ ಸಂಪರ್ಕಗಳಿವೆ. ಅಂದರೆ ಅವರೆಲ್ಲರೂ ಪ್ರತಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ 2,400 ರೂ. ಸಹಾಯಧನ ಪಡೆಯುತ್ತಿದ್ದಾರೆ. ಇದರಿಂದ ಕೇಂದ್ರಕ್ಕೆ ರೂ. 7680 ಕೋಟಿ ಹೊರೆಯಾಗಲಿದೆ.

LIC Saral Pension: ಈ ಪಾಲಿಸಿಯಲ್ಲಿ ಒಮ್ಮೆ ಪಾವತಿಸಿದರೆ ಸಾಕು ಜೀವನಪರ್ಯಂತ 1 ಲಕ್ಷ ಪಿಂಚಣಿ ಪಡೆಯಬಹುದು! ವಿವರಗಳನ್ನು ಪರಿಶೀಲಿಸಿ

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಈ ಗ್ಯಾಸ್ ಸಬ್ಸಿಡಿಯನ್ನು ನೀಡುತ್ತಿವೆ.

LPG Gas Cylinder Subsidy Scheme
Image Source: Times Of India

ಆದ್ದರಿಂದ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಯಾವ ಸಿಲಿಂಡರ್ ಬಳಸಿದರೂ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಸಿಗುತ್ತದೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.

Gold Loan: ಗೋಲ್ಡ್ ಲೋನ್ ಪಡೆಯುವ ಮುನ್ನ ವಿವಿಧ ಬ್ಯಾಂಕ್‌ಗಳು ವಿಧಿಸುವ ಬಡ್ಡಿ ದರಗಳ ಪಟ್ಟಿ ಪರಿಶೀಲಿಸಿ

ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆಯಬಹುದು. ಈ ಯೋಜನೆಯಡಿ ಬಡ ಮಹಿಳೆಯರಿಗೆ ಮಾತ್ರ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಠೇವಣಿ ಅಗತ್ಯವಿಲ್ಲ. ಗ್ಯಾಸ್ ಸಂಪರ್ಕ ಉಚಿತ. ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಖಾತೆ (Bank Account), ಪಡಿತರ ಚೀಟಿ (Ration Card) ಮುಂತಾದ ದಾಖಲೆಗಳು ಬೇಕಾಗುತ್ತವೆ.

ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಉಚಿತ. ಅಲ್ಲದೆ, ಗ್ಯಾಸ್ ಸ್ಟೌವ್ ಮತ್ತು ಮೊದಲ ಗ್ಯಾಸ್ ಸಿಲಿಂಡರ್ ಗೆ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಬಹುದು.

Credit Card: ಕ್ರೆಡಿಟ್ ಕಾರ್ಡ್ ಅತಿಯಾಗಿ ಬಳಸಿದರೆ ಎದುರಾಗುವ ಪರಿಣಾಮಗಳೇನು ಗೊತ್ತಾ? ಹಾಗಾದ್ರೆ ಹೇಗೆ ಬಳಸೋದು ಅನ್ನೋದಕ್ಕೆ ಇಲ್ಲಿವೆ ಟಿಪ್ಸ್

ಈ ಯೋಜನೆಯ ಅಡಿಯಲ್ಲಿ ನೀವು 14.2 ಕೆಜಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಅಥವಾ ನೀವು 5 ಕೆಜಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಬಹುದು. ಅಥವಾ ಎರಡು 5 ಕೆಜಿ ಗ್ಯಾಸ್ ಸಿಲಿಂಡರ್ ಪಡೆಯಬಹುದು.

ಅಂದರೆ 5 ಕೆಜಿ ಡಬಲ್ ಸಿಲಿಂಡರ್ ಸಂಪರ್ಕವನ್ನು ಆಯ್ಕೆ ಮಾಡಬಹುದು. ನೀವು PMYU ಪೋರ್ಟಲ್ ಮೂಲಕ ಹೊಸ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು. ಅಥವಾ ನೀವು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಉಜ್ವಲ ಯೋಜನೆಗೆ ಸೇರಿಕೊಳ್ಳಬಹುದು. ಅಥವಾ ನೀವು ಹತ್ತಿರದ ಗ್ಯಾಸ್ ವಿತರಕರ ಬಳಿ ಹೋಗಿ ಯೋಜನೆಗೆ ಸೇರಲು ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಬಹುದು.

Car Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಸಮಯದಲ್ಲಿ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ! ಸುಲಭವಾಗಿ ಹಣ ಉಳಿಸಿ

LPG Gas Cylinder Subsidy Scheme Through BPL Ration Card, Know the Details

Related Stories