ಹೀಗೆ ಮಾಡದಿದ್ದರೆ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಬಂದ್ ಆಗಲಿದೆ! ಹೊಸ ರೂಲ್ಸ್

ಸರ್ಕಾರ ಎಲ್‌ಪಿಜಿ ಸಬ್ಸಿಡಿ ಪಾವತಿಯನ್ನು ಪಾರದರ್ಶಕಗೊಳಿಸಲು ಹೊಸ ಡಿಜಿಟಲ್ ಕ್ರಮ ಜಾರಿಗೆ ತಂದಿದೆ. ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ನಿಲ್ಲುತ್ತದೆ ಎಂದು ಎಚ್ಚರಿಕೆ ನೀಡಿದೆ.

LPG subsidy : ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಸರ್ಕಾರದಿಂದ ಮಹತ್ವದ ಎಚ್ಚರಿಕೆ ನೀಡಲಾಗಿದೆ. ತಮ್ಮ ಆಧಾರ್ ಪ್ರಾಮಾಣೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಸಬ್ಸಿಡಿ ಪಾವತಿ ತಾತ್ಕಾಲಿಕವಾಗಿ ನಿಲ್ಲಬಹುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯ ತಿಳಿಸಿದೆ.

ಈ ಹೊಸ ವ್ಯವಸ್ಥೆಯ ಉದ್ದೇಶ ಎಲ್‌ಪಿಜಿ ಸಬ್ಸಿಡಿ ವಿತರಣೆ ಹೆಚ್ಚು ಪಾರದರ್ಶಕವಾಗಿಸಲು ಹಾಗೂ ನಿಜವಾದ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ತಲುಪುವಂತೆ ಖಚಿತಪಡಿಸಿಕೊಳ್ಳುವುದಾಗಿದೆ. ಇದರಿಂದ ಸಮಯ ಉಳಿಯುವುದಲ್ಲದೆ ಗ್ರಾಹಕರು ತಮ್ಮ ಮನೆಯಲ್ಲಿಯೇ ಈ ಪ್ರಕ್ರಿಯೆ ಮುಗಿಸಬಹುದಾಗಿದೆ.

ಹಿಂದಿನಂತೆ ಡಿಸ್ಟ್ರಿಬ್ಯೂಟರ್ ಕಚೇರಿಗೆ ಹೋಗಬೇಕಾಗಿಲ್ಲ. ಗ್ರಾಹಕರು ಈಗ ತಮ್ಮ ಸ್ಮಾರ್ಟ್‌ಫೋನ್‌ನಿಂದಲೇ ಉಚಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದಕ್ಕಾಗಿ ಸರಳ ಹಂತಗಳನ್ನು ಅನುಸರಿಸಬೇಕು, ನೀಡಿರುವ QR ಕೋಡ್‌ನ್ನು ಸ್ಕ್ಯಾನ್ ಮಾಡುವುದು ಅಥವಾ www.pmuy.gov.in/e-kyc.html ವೆಬ್‌ಸೈಟ್‌ಗೆ ಭೇಟಿ ನೀಡುವುದು.

ಅದಾದ ಬಳಿಕ ತಮ್ಮ ತೈಲ ಕಂಪನಿಯ ಆಪ್‌ಗಳು (ಉದಾ: IndianOil One, HP Pay ಅಥವಾ BharatGas) ಇನ್‌ಸ್ಟಾಲ್ ಮಾಡಿ, ‘Aadhaar FaceRD’ ಆಪ್ ಮೂಲಕ ಮುಖ ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ಪೂರ್ಣಗೊಂಡ ನಂತರ ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣವಾಗುತ್ತದೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ ₹300 ಸಬ್ಸಿಡಿ ಪಡೆಯಲು ಈ ಪ್ರಕ್ರಿಯೆ ಕಡ್ಡಾಯವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಾಮಾಣೀಕರಣ ಮಾಡದ ಗ್ರಾಹಕರು ಸಬ್ಸಿಡಿ ಪಡೆಯುವ ಅವಕಾಶ ಕಳೆದುಕೊಳ್ಳಬಹುದು. ಆದ್ದರಿಂದ ಇನ್ನೂ ಪ್ರಕ್ರಿಯೆ ಪೂರ್ಣಗೊಳಿಸದವರು ಶೀಘ್ರದಲ್ಲೇ ಮುಗಿಸಲು ವಿನಂತಿಸಲಾಗಿದೆ.

ಪ್ರಾಮಾಣೀಕರಣದ ವೇಳೆ ತೊಂದರೆ ಎದುರಾದರೆ ಗ್ರಾಹಕರು ತಮ್ಮ ಎಲ್‌ಪಿಜಿ ವಿತರಕರನ್ನು ಸಂಪರ್ಕಿಸಬಹುದು ಅಥವಾ ಟೋಲ್‌ಫ್ರೀ ನಂಬರ್ 1800-2333-555 ಗೆ ಕರೆಮಾಡಿ ಸಹಾಯ ಪಡೆಯಬಹುದು.

LPG subsidy alert, Aadhaar e-KYC mandatory to continue subsidy

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories