ನೀವೇ ವಿದ್ಯುತ್ ತಯಾರಿಸಿ, ಬೆಸ್ಕಾಂಗೆ ಮಾರಿ ಹಣವನ್ನೂ ಗಳಿಸಿ! ಜೊತೆಗೆ ಸರ್ಕಾರದಿಂದ ಫುಲ್ ಸಬ್ಸಿಡಿ

ನೀವು ವಿದ್ಯುತ್ ನ (Electricity) ತಯಾರಿಸಿ ಅದನ್ನು ಬೆಸ್ಕಾಂ (BESCOM) ಗೆ ಮಾರಾಟ ಕೂಡ ಮಾಡಬಹುದು. ಅಂದಮೇಲೆ ಸರ್ಕಾರ ಕೊಡುವ ಉಚಿತ ವಿದ್ಯುತ್ (Free Electricity) ಯಾಕೆ ಬೇಕು ಅಲ್ವಾ?

ಕರ್ನಾಟಕ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ (Gruha jyothi Scheme) ಯನ್ನು ಜಾರಿಗೆ ತಂದು ಲಕ್ಷಾಂತರ ಜನ ಈ ಯೋಜನೆಯ ಮೂಲಕ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳುತ್ತಿದ್ದಾರೆ.

ಆದರೆ ಈ ಯೋಜನೆಯ ಪ್ರಯೋಜನ ಪ್ರತಿಯೊಬ್ಬರಿಗೂ ಸಿಕ್ಕಿಲ್ಲ, ಹೆಚ್ಚಿಗೆ ವಿದ್ಯುತ್ ಖರ್ಚು ಮಾಡಿದರೆ ಖಂಡಿತವಾಗಿಯೂ ಝಿರೋ ಕರೆಂಟ್ ಬಿಲ್ ಬರಲು ಸಾಧ್ಯವಿಲ್ಲ. ಹಾಗೇನೆ ಈ ಯೋಜನೆ ಎಷ್ಟು ವರ್ಷ ನಡೆಯುತ್ತೆ ಎಂಬುದು ಕೂಡ ಗೊತ್ತಿಲ್ಲ.

ಚಿಂತೆ ಬೇಡ, ನೀವು ವಿದ್ಯುತ್ ನ (Electricity) ತಯಾರಿಸಿ ಅದನ್ನು ಬೆಸ್ಕಾಂ (BESCOM) ಗೆ ಮಾರಾಟ ಕೂಡ ಮಾಡಬಹುದು. ಅಂದಮೇಲೆ ಸರ್ಕಾರ ಕೊಡುವ ಉಚಿತ ವಿದ್ಯುತ್ (Free Electricity) ಯಾಕೆ ಬೇಕು ಅಲ್ವಾ? ಹಾಗಾದ್ರೆ ನಾವೇ ವಿದ್ಯುತ್ ತಯಾರಿಸುವುದು ಹೇಗೆ ಅದರಿಂದ ಏನೆಲ್ಲಾ ಪ್ರಯೋಜನ ಇದೆ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ನೀವೇ ವಿದ್ಯುತ್ ತಯಾರಿಸಿ, ಬೆಸ್ಕಾಂಗೆ ಮಾರಿ ಹಣವನ್ನೂ ಗಳಿಸಿ! ಜೊತೆಗೆ ಸರ್ಕಾರದಿಂದ ಫುಲ್ ಸಬ್ಸಿಡಿ - Kannada News

465 ಕಿಮೀ ಮೈಲೇಜ್! ಟಾಟಾ ಮೋಟಾರ್ಸ್ Nexon EV ಮತ್ತು Nexon ರೂಪಾಂತರಗಳು ಮಾರುಕಟ್ಟೆಗೆ ಎಂಟ್ರಿ

ಸೌರ ಗೃಹ ಯೋಜನೆ: (Soura Gruha Yojana)

ಸೌರ ಗೃಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು ನಿಮ್ಮ ಮನೆಗಳ ಮೇಲ್ಚಾವಣಿಯಲ್ಲಿ ಅಥವಾ ಅಪಾರ್ಟ್ಮೆಂಟ್ (Apartment) ಗಳ ಮೇಲೆ ಸೌರ ಪ್ಯಾನಲ್ (Solar Panel) ಅಳವಡಿಸಿದರೆ ಸಬ್ಸಿಡಿ ಕೂಡ ಸಿಗುತ್ತದೆ, ಜೊತೆಗೆ ಬೆಸ್ಕಾಂಗೆ ಮಾರಾಟ ಮಾಡಿ ಕೈ ತುಂಬಾ ಹಣ ಗಳಿಸಬಹುದು.

ಸರ್ಕಾರದಿಂದ ಸಬ್ಸಿಡಿ

solar panelsನೀವು ಎಷ್ಟು ದೊಡ್ಡ ಮಟ್ಟದಲ್ಲಿ ಸೌರ ವಿದ್ಯುತ್ ಘಟಕವನ್ನು (Solar Panel) ನಿಮ್ಮ ಮನೆಯ ಮೇಲೆ ಸ್ಥಾಪಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಅದರ ಖರ್ಚು ವೆಚ್ಚಗಳು ನಿರ್ಧಾರಿತವಾಗುತ್ತದೆ.

ಮನೆಯ ಮೇಲ್ಚಾವಣಿಯ ಮೇಲೆ ಅಥವಾ ಟೆರೆಸ್ ಮೇಲೆ ಒಂದು ಕಿಲೋ ವ್ಯಾಟ್ ನಿಂದ 10 ಕಿಲೋಮೀಟ್ ವರೆಗೆ ಸೌರ ಯೂನಿಟ್ ಅಳವಡಿಸಬಹುದು. ಐದು ವರ್ಷಗಳ ವರೆಗೆ ನೀವು ಸೌರ ಯೂನಿಟ್ ಯಾರ ಬಳಿ ಖರೀದಿ ಮಾಡುತ್ತಿರೋ ಅವರೇ ನಿರ್ವಹಣೆ ಕೂಡ ಮಾಡುತ್ತಾರೆ.

ಇಲ್ಲಿ ಒಂದೇ ಒಂದು ಐಡಿಯಾ ಕೊಟ್ರೆ ಸಿಗುತ್ತೆ 10 ಲಕ್ಷ ರೂಪಾಯಿ, ನೀವೂ ಒಮ್ಮೆ ಟ್ರೈ ಮಾಡಿ!

ಎರಡನೇ ಹಂತದ ಯೋಜನೆ ಜಾರಿಗೆ

2022 ರಲ್ಲಿ 1200 ಮೆಗ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಗುರಿ ಇತ್ತು. ಆದ್ರೆ ಈ ಟಾರ್ಗೆಟ್ ರೀಚ್ ಆಗಲು ಸಾಧ್ಯವಾಗಿಲ್ಲ, ಹಾಗಾಗಿ ಈಗ ಬೆಸ್ಕಾಂ ಹೇಳಿರುವ ಪ್ರಕಾರ ವಸತಿ ಗ್ರಾಹಕರು 60 ಮೆಗಾ ವ್ಯಾಟ್ ಹಾಗೂ ಅಪಾರ್ಟ್ಮೆಂಟ್ ಗ್ರಾಹಕರು ಕನಿಷ್ಠ 30 ಮೆಗಾ ವ್ಯಾಟ್ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆ ಮಾಡಬೇಕು.

ಇನ್ನ ಈ ಯೋಜನೆಗೆ ಅರ್ಜಿ ಹಾಕುವವರಿಗೆ 20 ರಿಂದ 40% ವರೆಗೆ ಸಬ್ಸಿಡಿ (Subsidy) ಸಿಗುತ್ತದೆ, ನೀವು ನಿಮ್ಮ ಕೈಯಿಂದ 60 ಪರ್ಸೆಂಟ್ ನಷ್ಟು ಹಣ ಭರಿಸಿದರೆ ಸಾಕು. ನೀವು ತಯಾರಿಸಿದ ವಿದ್ಯುತ್ ನೀವು ಬಳಸಿಕೊಳ್ಳುವುದು ಮಾತ್ರವಲ್ಲದೆ ಇದನ್ನು ವಿದ್ಯುತ್ ನಿಗಮಕ್ಕೆ ಮಾರಾಟ ಮಾಡಬಹುದು.

ಪ್ರತಿ ಯುನಿಟಿಗೆ 2.90ರೂಪಾಯಿಗಳಿಗೆ ಬೆಸ್ಕಾಂ ವಿದ್ಯುತ್ ಖರೀದಿ ಮಾಡುತ್ತದೆ, ಅಷ್ಟೇ ಅಲ್ಲದೆ ಸಂಪೂರ್ಣ 25 ವರ್ಷಗಳ ವರೆಗೆ ನೀವು ಉಚಿತ ವಿದ್ಯುತ್ ಬಳಸುವುದು ಮಾತ್ರವಲ್ಲದೆ ನೀವು ತಯಾರಿಸಿದ ವಿದ್ಯುತ್ ಮಾರಾಟ ಮಾಡಿ ಕೈ ತುಂಬಾ ಹಣ ಕೂಡ ಸಂಪಾದನೆ ಮಾಡಬಹುದು.

ಬೆಸ್ಕಾಂ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ

ನೀವು ಬೆಸ್ಕಾಂನ ಅಧಿಕೃತ ವೆಬ್ಸೈಟ್ (Website) ಗೆ ಹೋಗಿ ನಿಮಗೆ ಯಾವ ರೀತಿಯ ಸೌರ ವಿದ್ಯುತ್ ಸ್ಥಾಪಿಸಲು ಇಷ್ಟವಿದೆಯೋ ಅದಕ್ಕೆ ಅರ್ಜಿ ಸಲ್ಲಿಸಿ. ನೀವು ಮುಂಗಡ ಹಣವನ್ನು ಪಾವತಿಸಿದರೆ ತಕ್ಷಣವೇ ಸೋಲಾರ್ ಯೂನಿಟ್ ಅನ್ನು ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ಸ್ಥಾಪಿಸಲಾಗುತ್ತದೆ.

ಉಚಿತವಾಗಿ ನೀವು ಸ್ಥಾಪಿಸಿರುವ ಘಟಕಗಳನ್ನು ನಿರ್ವಹಣೆ ಮಾಡುತ್ತಾರೆ. ಒಂದರಿಂದ ಮೂರು ಕಿಲೋ ವ್ಯಾಟ್ ವರೆಗೆ ವಸತಿ ಗ್ರಾಹಕರು ಮೇಲ್ಚಾವಣಿಯಲ್ಲಿ ಸೌರ ಶಕ್ತಿ ಘಟಕ ಸ್ಥಾಪಿಸಿದ್ರೆ 40% ನಷ್ಟು ಸಹಾಯಧನ ಸಿಗುತ್ತದೆ.

ಅದೇ ರೀತಿ ಮೂರರಿಂದ ಹತ್ತು ಕಿಲೋವ್ಯಾಟ್ ಗೆ 20% ಸಹಾಯಧನ ಕೊಡಲಾಗುತ್ತದೆ. ಹೀಗಾಗಿ ನೀವು ಕೂಡ ನಿಮ್ಮ ಮನೆಯಲ್ಲಿ ಜಾಗವಿದ್ದರೆ ಹಾಗೂ ಆಸಕ್ತಿ ಇದ್ದರೆ ಕೂಡಲೇ ಸೌರ ಶಕ್ತಿ ಉತ್ಪಾದಿಸುವ ಬಗ್ಗೆ ಯೋಚನೆ ಮಾಡಿ. ಸರ್ಕಾರ ಯಾವ ಉಚಿತ ವಿದ್ಯುತ್ ಕೂಡ ನಿಮಗೆ ಬೇಡ ಅದರ ಬದಲು ನೀವೇ ಸರ್ಕಾರಕ್ಕೆ ವಿದ್ಯುತ್ ತಯಾರಿಸಿ ಮಾರಾಟ ಮಾಡಿ.

Make your own electricity with solar panel, sell it to BESCOM and earn money too

Follow us On

FaceBook Google News

Make your own electricity with solar panel, sell it to BESCOM and earn money too