ಫ್ಯಾಮಿಲಿ ಕಾರ್, 10 ಲಕ್ಷ ಬೆಲೆಯಲ್ಲಿ ಮಾರುತಿ ಸುಜುಕಿ ವಿಕ್ಟೋರಿಸ್ ಬಿಡುಗಡೆ
ಮಧ್ಯಮ ವರ್ಗದ ಕುಟುಂಬಗಳಿಗಾಗಿಯೇ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿ ಲಾಂಚ್ ಮಾಡಿದೆ. ₹10 ಲಕ್ಷ ಪ್ರೈಸ್‌ರೇಂಜ್‌ನಲ್ಲೇ ಪ್ರೀಮಿಯಂ ಲುಕ್, 5 ಸ್ಟಾರ್ ಸೇಫ್ಟಿ, ಆಕರ್ಷಕ ಫೀಚರ್ಸ್ ಹಾಗೂ ಹಲವು ವೇರಿಯಂಟ್ಸ್‌ಗಳಲ್ಲಿ ಲಭ್ಯ.

Maruti suzuki victoris: ಮಾರುತಿ ಸುಜುಕಿ ತನ್ನ ಹೊಸ ಫ್ಯಾಮಿಲಿ ಕಾರು (Family Car) ವಿಭಾಗಕ್ಕೆ ಮತ್ತೊಂದು ಶಕ್ತಿಯುತ ಸೇರ್ಪಡೆ ನೀಡಿದೆ. ವಿಕ್ಟೋರಿಸ್ ಎಸ್‌ಯುವಿ ಸೆಪ್ಟೆಂಬರ್ 22ರಿಂದ ಮಾರಾಟಕ್ಕೆ ಬರಲಿದೆ, ಆದರೆ ಪ್ರೀ-ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
ಈ ಕಾರು ಹಲವು ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್, ಹೈಬ್ರಿಡ್ ಹಾಗೂ CNG ಆಪ್ಶನ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಪೆಟ್ರೋಲ್ ವೇರಿಯಂಟ್ಸ್ ಬೆಲೆ ₹10.50 ಲಕ್ಷದಿಂದ ₹17.77 ಲಕ್ಷದವರೆಗೆ ಇದ್ದು, ಆಲ್-ವೀಲ್ ಡ್ರೈವ್ ಆಪ್ಶನ್ ₹18.64 ಲಕ್ಷದಿಂದ ಆರಂಭವಾಗುತ್ತದೆ. ಹೈಬ್ರಿಡ್ ಟಾಪ್ ಎಂಡ್ ಮಾದರಿ ₹19.99 ಲಕ್ಷವರೆಗೆ ಏರಲಿದೆ.
ವಿಕ್ಟೋರಿಸ್ ಡಿಸೈನ್ ಪ್ರೀಮಿಯಂ ಲುಕ್ ಹೊಂದಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. 6 ಏರ್‌ಬ್ಯಾಗ್‌ಗಳು, ESC, ಪೆಡೆಸ್ಟ್ರಿಯನ್ ಪ್ರೊಟೆಕ್ಷನ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಹಾಗೂ ಹೆಡ್ಸ್-ಅಪ್ ಡಿಸ್‌ಪ್ಲೇ ಮುಂತಾದ ಆಧುನಿಕ ಫೀಚರ್ಸ್ ಸೇರಿಸಲಾಗಿದೆ.
ಎಂಜಿನ್ ವಿಷಯಕ್ಕೆ ಬರುವುದಾದರೆ, ಗ್ರ್ಯಾಂಡ್ ವಿಟಾರಾದಲ್ಲಿರುವಂತೆಯೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಇದರಲ್ಲಿ ಅಳವಡಿಸಲಾಗಿದೆ. ಇದು 5-ಸ್ಪೀಡ್ ಮ್ಯಾನುಯಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್‌ಗಳೊಂದಿಗೆ ಲಭ್ಯವಿದೆ.
ಪೆಟ್ರೋಲ್ ಟ್ಯಾಂಕ್ ಜೊತೆಗೆ ಅಂಡರ್‌ಬಾಡಿ CNG ಟ್ಯಾಂಕ್ ಕೂಡ ಇದೆ. ಮೈಲೇಜ್ 20 ಕಿಮೀ ರಿಂದ 28 ಕಿಮೀ ಪ್ರತಿ ಲೀಟರ್ ವರೆಗೆ ದೊರೆಯುತ್ತದೆ.
ಇಂಟೀರಿಯರ್ ಅಂಶಗಳೂ ವಿಶೇಷವಾಗಿವೆ. 64 ಆಂಬಿಯಂಟ್ ಲೈಟ್ ಕಲರ್ ಆಪ್ಶನ್‌ಗಳು, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 35 ಪ್ರೀ-ಲೋಡೆಡ್ ಆ್ಯಪ್‌ಗಳಿರುವ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್ ಮೂಲಕ 60 ಹೆಚ್ಚುವರಿ ಫೀಚರ್ಸ್ ದೊರೆಯುತ್ತವೆ.
ಜೊತೆಗೆ ಡ್ಯುಯಲ್-ಪೇನ್ ಸನ್‌ರೂಫ್, PM 2.5 ಏರ್ ಫಿಲ್ಟರ್, ಡಾಲ್ಬಿ ಅಟ್ಮೋಸ್ ಸಪೋರ್ಟ್‌ನ 8 ಸ್ಪೀಕರ್ ಸೌಂಡ್ ಸಿಸ್ಟಮ್, ಪವರ್‌ಡ್ ಹಾಗೂ ವೆಂಟಿಲೇಟೆಡ್ ಸೀಟ್‌ಗಳೂ ನೀಡಲಾಗಿದೆ.
Maruti Suzuki launches Victoris SUV in India



