ಮಾರತಿ ಕಾರುಗಳ ಮೇಲೆ year-end offer ಘೋಷಣೆ! ಡಿಸೆಂಬರ್ ತಿಂಗಳ ಸೇಲ್ನಲ್ಲಿ 58,000 ಡಿಸ್ಕೌಂಟ್
ಡಿಸೆಂಬರ್ ತಿಂಗಳ ವಿಶೇಷ ಸೇಲ್ನಲ್ಲಿ ಮಾರತಿ ಸುಜುಕಿ ತನ್ನ ಅರೇನಾ ಮಾದರಿಗಳ ಮೇಲೆ ₹58,000ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಹ್ಯಾಚ್ಬ್ಯಾಕ್, ಸೆಡಾನ್, SUV ಮಾದರಿಗಳಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭ.
Maruti Cars year-end offer: ಹೊಸ ಕಾರು ಖರೀದಿಸಬೇಕೆಂದು ಯೋಚಿಸುತ್ತಿದ್ದರೆ, ಡಿಸೆಂಬರ್ ತಿಂಗಳು ನಿಮಗೆ ತುಂಬಾ ಲಾಭದಾಯಕ. ಮಾರತಿ ಸುಜುಕಿ ಈ ಬಾರಿ ತನ್ನ ಅರೇನಾ ಶೋರೂಮ್ನಲ್ಲಿ ಮಾರಾಟವಾಗುವ ಹಲವು ಕಾರುಗಳ ಮೇಲೆ ಗರಿಷ್ಠ ₹58,000ವರೆಗೆ ವಿಶೇಷ ಕಡಿತ ಘೋಷಿಸಿದೆ.
ವರ್ಷಾಂತ್ಯದ ಸೇಲ್ ಸೀಸನ್ ಅನ್ನು ಗಮನದಲ್ಲಿ ಇಟ್ಟುಕೊಂಡು ಕಂಪನಿ ನೀಡಿರುವ ಈ ಆಫರ್ ಗ್ರಾಹಕರಲ್ಲಿ ಈಗಾಗಲೇ ಬೇಡಿಕೆ ಹೆಚ್ಚಿಸಿದೆ.
ಮಾರತಿ ಕಾರುಗಳು ದೇಶದ ಅತ್ಯಂತ ಹೆಚ್ಚು ಮಾರಾಟವಾಗುವ ಮಾದರಿಗಳಾಗಿರುವುದರಿಂದ, ಇಂತಹ ಆಫರ್ಗಳು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಅನುಕೂಲ. ವಿಶೇಷವಾಗಿ WagonR, Swift ಮತ್ತು Brezza ಮಾದರಿಗಳು ಎಲೆಕ್ಟ್ರಾನಿಕ್ ತಂತ್ರಜ್ಞಾನ, ಮೈಲೇಜ್ ಮತ್ತು ಬಜೆಟ್ ಸ್ನೇಹಿ ಬೆಲೆಯಿಂದ ಹೆಚ್ಚು ಜನಪ್ರಿಯ.
ಬ್ರೆಜ್ಜಾ, ಈಕೋ ಮಾದರಿಗಳ ಮೇಲೂ ಆಕರ್ಷಕ ಸ್ಕೀಮ್ಗಳು
ಮಾರತಿ ಬ್ರೆಜ್ಜಾ SUV ಮೇಲೆ ₹40,000ವರೆಗೆ ಲಾಭ ಸಿಗುತ್ತದೆ. ಇದರಲ್ಲಿ ₹10,000 ನಗದು ಕಡಿತ, ₹15,000 ಎಕ್ಸ್ಚೇಂಜ್ ಬೋನಸ್ ಅಥವಾ ₹25,000 ಸ್ಕ್ರಾಪೇಜ್ ಬೋನಸ್ ಮತ್ತು ₹5,000 ಹೆಚ್ಚುವರಿ ಕಡಿತ ನೀಡಲಾಗಿದೆ.
ಈಕೋ ಪೆಟ್ರೋಲ್ ಮತ್ತು CNG ಮಾದರಿಗಳಿಗೂ ₹52,500ವರೆಗೆ ಲಾಭ ಲಭ್ಯ. ನಗದು ಕಡಿತ, ಎಕ್ಸ್ಚೇಂಜ್/ಸ್ಕ್ರಾಪೇಜ್ ಬೋನಸ್ ಜೊತೆಗೆ ಹೆಚ್ಚುವರಿ ಪ್ರಯೋಜನಗಳು ಪ್ಯಾಕ್ ಆಗಿ ಲಭ್ಯ.
ಜನಪ್ರಿಯ ಹ್ಯಾಚ್ಬ್ಯಾಕ್ ಮಾದರಿಗಳಲ್ಲಿ ಗರಿಷ್ಠ ಲಾಭ
WagonR ಮೇಲೆ ಈ ಬಾರಿ ₹58,100ವರೆಗೆ ಸೌಲಭ್ಯ ಸಿಗುತ್ತದೆ. ₹30,000 ನಗದು ಕಡಿತ, ₹15,000 ಎಕ್ಸ್ಚೇಂಜ್ ಅಥವಾ ₹25,000 ಸ್ಕ್ರಾಪೇಜ್ ಬೋನಸ್ ಮತ್ತು ಹೆಚ್ಚುವರಿ ₹3,100 ಲಾಭ ಸೇರಿವೆ. Swift ಮೇಲೂ ₹55,000ವರೆಗೆ ಲಾಭ ಲಭ್ಯ – ನಗದು ಕಡಿತ, ಎಕ್ಸ್ಚೇಂಜ್ ಬೋನಸ್ ಹಾಗು ಹೆಚ್ಚುವರಿ ಡಿಸ್ಕೌಂಟ್ ಸೇರಿದೆ.
Dzire ಸೆಡಾನ್ ಮೇಲೆ ₹12,500ವರೆಗೆ ಹಾಗೂ Celerio ಮಾದರಿಯ ಮೇಲೆ ₹52,500ವರೆಗೆ ನೀಡಲಾಗುತ್ತಿದೆ. Alto K10 ಮತ್ತು S-Presso ಕಾರುಗಳಿಗೂ ಇದೇ ರೀತಿಯ ಹೈ ವ್ಯಾಲ್ಯೂ ಆಫರ್ಗಳು ನೀಡಲಾಗಿದೆ.
ಇಯರ್ ಎಂಡ್ ಖರೀದಿಗೆ ಅತ್ಯುತ್ತಮ ಸಮಯ, ಯಾಕೆ?
ಡಿಸೆಂಬರ್ ತಿಂಗಳಲ್ಲಿ ಕಂಪನಿಗಳು ಸಾಮಾನ್ಯವಾಗಿ ಸ್ಟಾಕ್ ಕ್ಲಿಯರೆನ್ಸ್ ಗುರಿಯಿಡುತ್ತವೆ. ಮಾರತಿ ಸಹ ಅದರ ಭಾಗವಾಗಿದ್ದು ಈ ಬಾರಿ ನೀಡಿರುವ ಕಡಿತಗಳು ಗ್ರಾಹಕರಿಗೆ ‘ಬೆಸ್ಟ್ ಡೀಲ್’ ಆಗಿವೆ. ಹೊಸ ವರ್ಷದ ಮೊದಲು ಕಾರು ಖರೀದಿಸುವವರಿಗೆ ಬೆಲೆ ಲಾಭ, EMI ಕಡಿತ ಮತ್ತು ಎಕ್ಸ್ಚೇಂಜ್ ಬೋನಸ್ಗಳು ಹೆಚ್ಚುವರಿ ಉಳಿತಾಯವಾಗಿವೆ.




