Electric Bike: ಪ್ರತಿ ಕಿ.ಮೀ ಗೆ ಕೇವಲ 25 ಪೈಸೆ ವೆಚ್ಚ, 125 ಕಿ.ಮೀ ಮೈಲೇಜ್.. ನಾಲ್ಕು ಗೇರ್‌ಗಳೊಂದಿಗೆ ಸ್ಪೋರ್ಟಿ ಲುಕ್ ಎಲೆಕ್ಟ್ರಿಕ್ ಬೈಕ್, ಬುಕಿಂಗ್ ಪ್ರಾರಂಭ
Matter Aera Electric Bike: ನೀವು ಸ್ಪೋರ್ಟ್ಸ್ ಲುಕ್ ಮತ್ತು ಗೇರ್ ಬಾಕ್ಸ್ ಸಿಸ್ಟಂ ಹೊಂದಿರುವ ಎಲೆಕ್ಟ್ರಿಕ್ ಬೈಕ್‌ಗಾಗಿ ಹುಡುಕುತ್ತಿದ್ದರೆ... ಈ ಲೇಖನ ನಿಮಗಾಗಿ. ಅಹಮದಾಬಾದ್ ಮೂಲದ ಸ್ಟಾರ್ಟಪ್ ಕಂಪನಿ ಮ್ಯಾಟರ್ ಸೋಮವಾರ ದೇಶದ ಮೊದಲ ಗೇರ್ಡ್ ಎಲೆಕ್ಟ್ರಿಕ್ ಬೈಕ್ ಅನ್ನು ಘೋಷಿಸಿದೆ.
Matter Aera Electric Bike: ನೀವು ಸ್ಪೋರ್ಟ್ಸ್ ಲುಕ್ (Sports Look) ಮತ್ತು ಗೇರ್ ಬಾಕ್ಸ್ ಸಿಸ್ಟಂ (Gear Box System) ಹೊಂದಿರುವ ಎಲೆಕ್ಟ್ರಿಕ್ ಬೈಕ್‌ಗಾಗಿ (Electric Bike) ಹುಡುಕುತ್ತಿದ್ದರೆ, ಅಹಮದಾಬಾದ್ ಮೂಲದ ಸ್ಟಾರ್ಟಪ್ ಕಂಪನಿ ಮ್ಯಾಟರ್ ಸೋಮವಾರ ದೇಶದ ಮೊದಲ ಗೇರ್ಡ್ ಎಲೆಕ್ಟ್ರಿಕ್ ಬೈಕ್ (Geared Electric Bike) ಅನ್ನು ಘೋಷಿಸಿದೆ, ಅದುವೇ ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ (Matter Aera Electric Bike).
ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳು ಪ್ರಸ್ತುತ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
ಇದರ ಜೊತೆಗೆ ಉತ್ತಮ ವೈಶಿಷ್ಟ್ಯತೆಗಳು ಮತ್ತು ಶ್ರೇಣಿಯ ಬೈಕ್‌ಗಳಿಗೆ ಬೇಡಿಕೆ ಉತ್ತಮವಾಗಿದೆ. ನೀವು ಸ್ಪೋರ್ಟ್ಸ್ ಲುಕ್ ಮತ್ತು ಗೇರ್ ಬಾಕ್ಸ್ ಸಿಸ್ಟಮ್ ಹೊಂದಿರುವ ಎಲೆಕ್ಟ್ರಿಕ್ ಬೈಕ್‌ಗಾಗಿ ಹುಡುಕುತ್ತಿದ್ದರೆ, ಅಹಮದಾಬಾದ್ ಮೂಲದ ಸ್ಟಾರ್ಟಪ್ ಕಂಪನಿ ಮ್ಯಾಟರ್ ಸೋಮವಾರ ದೇಶದ ಮೊದಲ ಗೇರ್ಡ್ ಎಲೆಕ್ಟ್ರಿಕ್ ಬೈಕ್ ಅನ್ನು ಘೋಷಿಸಿದೆ. ಅದರ ಹೆಸರು ಮ್ಯಾಟರ್ ಮ್ಯಾಟರ್ ಏರಾ. ಇದರ ವಿಶೇಷತೆ ಏನೆಂದರೆ ಈ ಗಾಡಿಯಲ್ಲಿ ಗೇರುಗಳಿವೆ. ಎಲೆಕ್ಟ್ರಿಕ್ ಬೈಕ್‌ಗಳು ಸಾಮಾನ್ಯವಾಗಿ ಗೇರ್‌ಗಳನ್ನು ಹೊಂದಿರುವುದಿಲ್ಲ.
ಈ ಎಲೆಕ್ಟ್ರಿಕ್ ಬೈಕ್‌ನ ಬುಕಿಂಗ್ ಮೇ 17 ರಿಂದ ಪ್ರಾರಂಭವಾಗಲಿದೆ. ಈ ಎಲೆಕ್ಟ್ರಿಕ್ ಬೈಕ್ ಖರೀದಿಸುವ ಮೊದಲ 9999 ಗ್ರಾಹಕರಿಗೆ ರೂ. 5 ಸಾವಿರ ರಿಯಾಯಿತಿ ಲಭ್ಯವಿದೆ. ಮೇಲಾಗಿ ಕೇವಲ ರೂ. 1,999ಕ್ಕೆ ಅವರು ಬೈಕ್ ಅನ್ನು ಬುಕ್ ಮಾಡಬಹುದು. ಅಲ್ಲದೆ, 10 ಸಾವಿರದ ನಂತರದ ಗ್ರಾಹಕರು 29,999 ವರೆಗಿನ ಬುಕಿಂಗ್‌ಗೆ ರೂ. 2500 ವರೆಗೆ ಲಾಭ ಪಡೆಯಬಹದು. ಮುಂಗಡ ಬುಕಿಂಗ್ ಅನ್ನು ರದ್ದುಗೊಳಿಸಿದರೆ, ಗ್ರಾಹಕರಿಗೆ ಪಾವತಿಸಿದ ಸಂಪೂರ್ಣ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಮ್ಯಾಟರ್ ಇಬೈಕ್ ಪ್ರಿಬುಕಿಂಗ್‌ಗಳು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ಇರುತ್ತವೆ.
ಬುಕಿಂಗ್ ಮಾಡುವುದು ಹೇಗೆ? – How To Book Matter Aera Electric Bike
ಈ ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್‌ಗಳು ದೇಶದ 25 ನಗರಗಳಲ್ಲಿ ಲಭ್ಯವಿರುತ್ತವೆ. ಕಂಪನಿಯು ಆರಂಭಿಕ ಪೂರ್ವ ಬುಕಿಂಗ್ ಕೊಡುಗೆಗಳನ್ನು ಸಹ ನೀಡುತ್ತಿದೆ. ವಿಶೇಷ ಪರಿಚಯಾತ್ಮಕ ಬೆಲೆ ಲಭ್ಯವಿದೆ. ಹಾಗಾಗಿ ಹೊಸ ಬೈಕ್ ಖರೀದಿಸುವವರು ಈ ಮಾದರಿಯನ್ನು ಪರಿಶೀಲಿಸಬಹುದು.
ಕಂಪನಿಯ ವೆಬ್‌ಸೈಟ್‌ಗೆ ಹೋಗುವ ಮೂಲಕ ನೀವು ಈ ಬೈಕ್ ಅನ್ನು ಪ್ರಿ-ಬುಕ್ ಮಾಡಬಹುದು. ಅಥವಾ ನೀವು ಈ ಎಲೆಕ್ಟ್ರಿಕ್ ಬೈಕ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಬುಕ್ ಮಾಡಬಹುದು. ಇದನ್ನು ಆಕ್ಟೋ ಕ್ಯಾಪಿಟಲ್ ವೆಬ್‌ಸೈಟ್ ಮೂಲಕವೂ ಬುಕ್ ಮಾಡಬಹುದು.
ಬೈಕ್‌ನ ಸಂಪೂರ್ಣ ವಿವರಗಳು
ಈ ಎಲೆಕ್ಟ್ರಿಕ್ ಬೈಕ್ 4 ಸ್ಪೀಡ್ ಹೈಪರ್ ಶಿಫ್ಟ್ ಗೇರ್ ಬಾಕ್ಸ್ ಹೊಂದಿದೆ. ಇದು ಕೇವಲ 6 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಪಡೆಯುತ್ತದೆ. ಒಮ್ಮೆ ಬ್ಯಾಟರಿ ತುಂಬಿದರೆ ಈ ಎಲೆಕ್ಟ್ರಿಕ್ ಬೈಕ್ 125 ಕಿಲೋಮೀಟರ್‌ಗಳವರೆಗೆ ಹೋಗಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಅಲ್ಲದೆ ಈ ಬೈಕಿನ ನಿರ್ವಹಣಾ ವೆಚ್ಚವೂ ಕಡಿಮೆ. ಪ್ರತಿ ಕಿಲೋಮೀಟರಿಗೆ 25 ಪೈಸೆ ವೆಚ್ಚವಾಗುತ್ತದೆ. ಅಲ್ಲದೆ ಈ ಬೈಕ್ 7 ಇಂಚಿನ ಟಚ್ ಸ್ಕ್ರೀನ್ ವ್ಯವಸ್ಥೆಯನ್ನು ಹೊಂದಿದೆ. ಈ ಮ್ಯಾಟರ್ ಎಲೆಕ್ಟ್ರಿಕ್ ಬೈಕ್ ಬೆಲೆ ರೂ. 1,43,999 ರಿಂದ ಪ್ರಾರಂಭವಾಗುತ್ತದೆ.
Matter Aera Electric Bike with Gear Pre bookings open, Know the Price, Features, Offers
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Matter Aera Electric Bike with Gear Pre bookings open, Know the Price, Features, Offers