Business NewsBengaluru News

ಬೆಂಗಳೂರಿನಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ ‘ಮ್ಯಾಟರ್ ಏರಾ’ ಬಿಡುಗಡೆ

ಅಹ್ಮದಾಬಾದ್‌ನ ಸ್ಟಾರ್ಟ್‌ಅಪ್ ಕಂಪನಿಯೊಂದು ತನ್ನ ಹೊಸ ಎಲೆಕ್ಟ್ರಿಕ್ ಬೈಕ್ ‘ಮ್ಯಾಟರ್ ಏರಾ’ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಇದು ಗಿಯರ್‌ಬಾಕ್ಸ್ ಇರುವ ಏಕೈಕ ಎಲೆಕ್ಟ್ರಿಕ್ ಬೈಕ್ ಆಗಿದೆ.

Publisher: Kannada News Today (Digital Media)

  • ಗಿಯರ್‌ಬಾಕ್ಸ್ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್
  • ಪ್ರಾರಂಭಿಕ ಬೆಲೆ ₹1.79 ಲಕ್ಷ; ಲೈಫ್ಟೈಂ ಬ್ಯಾಟರಿ ವಾರಂಟಿಯೊಂದಿಗೆ
  • 125 ಕಿಮೀ ಮೈಲೇಜ್, 7 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್

Electric Bike: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್, ಸ್ಕೂಟರ್‌ಗಳೇ ಹೆಚ್ಚಾಗಿ ಲಭ್ಯವಿರುವುದು ಸಾಮಾನ್ಯ. ಆದರೆ ಗಿಯರ್‌ಬಾಕ್ಸ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಎಂಬ ವಿಶಿಷ್ಟತೆಯೊಂದಿಗೆ ‘ಮ್ಯಾಟರ್ ಏರಾ’ ಎಂಟ್ರಿ ಕೊಟ್ಟಿದೆ.

ಅಹ್ಮದಾಬಾದ್‌ನ ಸ್ಟಾರ್ಟ್‌ಅಪ್ ಕಂಪನಿ ‘ಮ್ಯಾಟರ್ ಮೋಟಾರ್ಸ್’ (Matter motor) ಬೆಂಗಳೂರಿನಲ್ಲಿ (Bengaluru) ಈ ಬೈಕ್ ಅನ್ನು ಭರ್ಜರಿಯಾಗಿ ಲಾಂಚ್ ಮಾಡಿದ್ದು, ಅದರ ವೈಶಿಷ್ಟ್ಯಗಳು ಗಮನ ಸೆಳೆಯುತ್ತಿವೆ.

ಬೆಂಗಳೂರಿನಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ ‘ಮ್ಯಾಟರ್ ಏರಾ’ ಬಿಡುಗಡೆ

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಈ ಮ್ಯಾಟರ್ ಏರಾ ಬೈಕ್‌ನ್ನು ಎರಡು ವೆರಿಯಂಟ್‌ಗಳಲ್ಲಿ — 5000 ಮತ್ತು 5000+ ರೂಪದಲ್ಲಿ ತರಲಾಗುತ್ತಿದೆ. ಬಾಹ್ಯವಾಗಿಯೂ ಆಕರ್ಷಕವಾಗಿದೆ ಮತ್ತು ಇಂಟರ್‌ನಲ್ ತಂತ್ರಜ್ಞಾನವು ಮತ್ತಷ್ಟು ವಿಶಿಷ್ಟವಾಗಿದೆ. ಇದು ಲಿಕ್ವಿಡ್ ಕೂಲ್ಡ್ ಮೋಟಾರ್ ಮತ್ತು 4-ಸ್ಪೀಡ್ ಸೀಕ್ವೆನ್ಷಿಯಲ್ ಗಿಯರ್‌ಬಾಕ್ಸ್ ಹೊಂದಿದೆ.

ಈ ಬೈಕ್ ಬೆಲೆ ₹1.88 ಲಕ್ಷ (ಎಕ್ಸ್‌ಶೋ ರೂಮ್) ರಿಂದ ಪ್ರಾರಂಭವಾಗುತ್ತದೆ. ಆದರೆ ಮೊದಲ 500 ಖರೀದಿದಾರರಿಗೆ ₹1.79 ಲಕ್ಷದ ವಿಶೇಷ ಆರಂಭಿಕ ದರದಲ್ಲಿ ಲಭ್ಯವಿದ್ದು, ₹15,000 ಮೌಲ್ಯದ ಲೈಫ್ಟೈಮ್ ಬ್ಯಾಟರಿ ವಾರಂಟಿಯೂ ಉಚಿತವಾಗಿ ದೊರೆಯಲಿದೆ.

ಬ್ಯಾಟರಿ ಸಾಮರ್ಥ್ಯವಿಷಯಕ್ಕೆ ಬಂದರೆ, ಇದು 5kWh ಲಿಥಿಯಮ್-ಐಯಾನ್ ಬ್ಯಾಟರಿಯಿಂದ ಶಕ್ತಿ ಪಡೆಯುತ್ತದೆ. ಒಂದು ಚಾರ್ಜ್‌ಗೆ 125 ಕಿಮೀ ದೂರದವರೆಗೆ ಪವರ್ ನೀಡುತ್ತದೆ. ತಾಂತ್ರಿಕವಾಗಿ, ನಾವಿಗೇಶನ್, ಇನ್‌ಕಮಿಂಗ್ ಕಾಲ್ಸ್, ಮ್ಯೂಸಿಕ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್‌ಗಳನ್ನು 7 ಇಂಚಿನ ಡಿಜಿಟಲ್ ಡಿಸ್‌ಪ್ಲೇ ಮೂಲಕ ಕಾಣಬಹುದಾಗಿದೆ.

ಮೊಬೈಲ್ ಅಪ್ಲಿಕೇಶನ್‌ಮೂಲಕ ಬೋರ್ಡ್ ಮೇಲೆ ಲೈವ್ ಬೈಕ್ ಡೇಟಾ, ರಿಮೋಟ್ ಲಾಕ್, ಜಿಯೋಫೆನ್ಸಿಂಗ್, ಸರ್ವೀಸ್ ಸೂಚನೆಗಳನ್ನು ಪಡೆಯಬಹುದಾಗಿದೆ. ಎಲೆಕ್ಟ್ರಿಕ್ ಬೈಕ್‌ನ ಈ ಹೊಸ ಅವತಾರ ಶ್ರೇಷ್ಟ ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನವನ್ನು ಒದಗಿಸುವಂತಿದೆ.

ಡಿಸ್ಕ್ ಬ್ರೇಕ್‌, ಟೆಲಿಸ್ಕೋಪಿಕ್ ಫೋರ್ಕ್‌ಗಳು, ಡ್ಯುಯಲ್ ರಿಯರ್ ಸಸ್ಪೆನ್ಶನ್ ಇತ್ಯಾದಿ ಭದ್ರತಾ ಲಕ್ಷಣಗಳೊಂದಿಗೆ ಲಭ್ಯವಿದ್ದು, ಕೇವಲ 25 ಪೈಸೆಗೆ ಕಿಮೀ ಪ್ರಯಾಣಿಸುವ ಸಾಮರ್ಥ್ಯವಿದೆ ಎಂಬುದೂ ಗಮನಾರ್ಹ. ಮ್ಯಾಟರ್ ಕಂಪನಿ ಸದ್ಯದಲ್ಲಿ ಬೆಂಗಳೂರಿನಲ್ಲಿ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಥಾಪಿಸುವ ಯೋಜನೆಯಲ್ಲಿ ಇದೆ.

ಮ್ಯಾಟರ್ ಸಂಸ್ಥೆಯ ಸಿಇಒ ಮೋಹಲ್ ಲಾಲ್ಭಾಯಿ ಪ್ರಕಾರ, ಎಲೆಕ್ಟ್ರಿಕ್ ಬೈಕ್‌ಗಳ ಪ್ರಯೋಗಕ್ಕೆ ಬೆಂಗಳೂರಿಗಿಂತ ಉತ್ತಮ ನಗರವೇ ಇಲ್ಲ. ಈ ಹೊಸ ಬೈಕ್ ಅವರು ನಿರೀಕ್ಷಿಸುವ ತಂತ್ರಜ್ಞಾನ ಮತ್ತು ಅನುಭವವನ್ನು ಖಚಿತವಾಗಿ ನೀಡುತ್ತದೆ ಎಂದು ಅವರು ನಂಬಿಕೆ ವ್ಯಕ್ತಪಡಿಸಿದ್ದಾರೆ.

Matter Aera EV Bike Launched in Bengaluru

Our Whatsapp Channel is Live Now 👇

Whatsapp Channel

Related Stories