ಒಂದು ತಿಂಗಳು ಇಎಂಐ ಕಟ್ಟಿಲ್ಲ ಅಂದ್ರೆ ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ ಗೊತ್ತಾ

ಇಎಂಐ (EMI) ಪಾವತಿಯಲ್ಲಿ ವಿಳಂಬವಾದರೆ ಕ್ರೆಡಿಟ್ ಸ್ಕೋರ್ (credit score) ತೀವ್ರವಾಗಿ ಕಡಿಮೆಯಾಗಬಹುದು. ಆದರೆ ಸರಿಯಾದ ಸಮಯದಲ್ಲಿ ಜವಾಬ್ದಾರಿ ವಹಿಸಿದರೆ ಸ್ಕೋರ್ ಪುನರ್ ನಿರ್ಮಾಣ ಸಾಧ್ಯ.

  • 30 ದಿನ EMI ವಿಳಂಬದಿಂದಲೇ 90 ಪಾಯಿಂಟ್ ಸ್ಕೋರ್ ಇಳಿಕೆ
  • RBI ಹೊಸ ನಿಯಮ: 15 ದಿನಕ್ಕೆ ಕ್ರೆಡಿಟ್ ಅಪ್‌ಡೇಟ್
  • ಕ್ರೆಡಿಟ್ ಸರಿ ಮಾಡಲು ಬ್ಯಾಂಕ್ ಸಹಾಯವಿದೆ

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸಾಲ (loan) ಪಡೆಯಬೇಕಾದರೆ ಅಥವಾ ಕ್ರೆಡಿಟ್ ಕಾರ್ಡ್ (credit card) ಪಡೆಯಬೇಕಾದರೆ, ಮೊದಲ ಪ್ರಶ್ನೆಯಾಗುವುದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಎಷ್ಟು ಎಂಬುದು. ಇದು ಹಣಕಾಸು ಕ್ಷೇತ್ರದಲ್ಲಿ ನಂಬಿಕೆಗೆ ಅಳತೆಗೋಲು ಆಗಿದೆ.

ಕ್ರೆಡಿಟ್ ಸ್ಕೋರ್ 300 ರಿಂದ 900 ರವರೆಗೆ ಇರುತ್ತದೆ. ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚು ಸ್ಕೋರ್ ಇದ್ದರೆ ಅದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಒಂದೇ ತಿಂಗಳು EMI ಪಾವತಿಯಲ್ಲಿ ವಿಳಂಬವಾದರೂ 90-100 ಪಾಯಿಂಟ್‌ಗಳು ಕಡಿಮೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬರಿ ₹5000ಕ್ಕೆ ಸ್ಮಾರ್ಟ್‌ಫೋನ್ ಲಾಂಚ್! ಬಡವರ ಇಂಡಿಯನ್ ಬ್ರಾಂಡ್ ಇದು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ನಿಯಮದಂತೆ ಈಗಾಗಲೇ ಜನವರಿ 1, 2025ರಿಂದ ಬ್ಯಾಂಕುಗಳು ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಮಾಹಿತಿ ಅಪ್‌ಡೇಟ್ ಮಾಡಬೇಕಾಗಿದೆ. ಇದು ಏನರ್ಥ ಎಂದರೆ ನೀವು EMI ತಪ್ಪಿಸಿದರೆ ಅದು ಶೀಘ್ರದಲ್ಲೇ ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ (credit report) ಕಾಣಿಸಿಕೊಳ್ಳುತ್ತದೆ.

EMI ಪಾವತಿಸಲು ವಿಳಂಬ ಮಾಡಿದರೆ ನಿಮ್ಮ ಸ್ಕೋರ್ ಮಾತ್ರವಲ್ಲ, ಫೈನಾನ್ಷಿಯಲ್ ವ್ಯವಹಾರಗಳ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ: ಲೇಟು ಪೇಮೆಂಟ್ ಫೀ, ಹೆಚ್ಚಿನ ಬಡ್ಡಿದರ, ಕಾನೂನು ಕ್ರಮಗಳಿಗೂ ಕಾರಣವಾಗಬಹುದು. ಮುಂದೆ ಗೃಹ (home Loan), ಕಾರು (car Loan) ಲೋನ್ ಪಡೆಯುವಲ್ಲಿ ಸಹ ಪರಿಣಾಮ ಬೀಳುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಬರಿ ₹20 ರೂಪಾಯಿ ಡೆಪಾಸಿಟ್‌ನಲ್ಲಿ ₹2 ಲಕ್ಷದ ಪಾಲಿಸಿ! ಈ ಸ್ಕೀಮ್ ಬಗ್ಗೆ ಗೊತ್ತಾ

ಇಷ್ಟಾದರೂ ಸಹ ಆತಂಕಪಡುವ ಅಗತ್ಯವಿಲ್ಲ. EMI ಮಿಸ್ ಮಾಡಿದ ಬಳಿಕ ಕೂಡ ನೀವು ಸರಿಯಾದ ಕ್ರಮ ತೆಗೆದುಕೊಂಡರೆ ಸ್ಕೋರ್ ಪುನರ್ ನಿರ್ಮಾಣ ಸಾಧ್ಯ. ಮೊದಲಿಗೆ ನಿಮ್ಮ ಒಪ್ಪಂದಿತ ಬ್ಯಾಂಕ್‌ನ್ನು ಸಂಪರ್ಕಿಸಿ. ಕೆಲವೊಮ್ಮೆ ಶಾರ್ಟ್ ಗ್ರೇಸ್ ಪೀರಿಯಡ್ ಅಥವಾ ರೀಸ್ಟ್ರಕ್ಚರಿಂಗ್ ಆಯ್ಕೆ ನೀಡುತ್ತಾರೆ.

Credit Score

ಇನ್ನೊಂದು ಬುದ್ಧಿವಂತಿಕೆ ಎಂದರೆ ಆಟೋ ಪೇಮೆಂಟ್ ಅಥವಾ ರಿಮೈಂಡರ್ ಸೆಟಪ್ ಮಾಡುವುದು. ನಿಮ್ಮ ಮರುಪಾವತಿಗಳಲ್ಲಿ ನಿಯಮಿತ ಕಾಪಾಡಿದರೆ, ಸಹಜವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಪುನಃ ಸುಧಾರಣೆಯಾಗುತ್ತದೆ.

ಕ್ರೆಡಿಟ್ ಯುಟಿಲೈಜೇಶನ್ ರೇಷಿಯೊ (credit utilization ratio) ಕೂಡ ಮುಖ್ಯ ಪಾತ್ರವಹಿಸುತ್ತದೆ. ನಿಮ್ಮ ಲಿಮಿಟ್‌ನ 30% ಕ್ಕಿಂತ ಹೆಚ್ಚು ಬಳಸಬಾರದು. ಆಗ ನಿಮ್ಮ ನಂಬಿಕೆ ಮಟ್ಟ ಹೆಚ್ಚಾಗಿ ಸ್ಕೋರ್ ಸುಧಾರಣೆ ಕಾಣಬಹುದು.

ಇದನ್ನೂ ಓದಿ: ಮಾರುತಿ ಸುಜುಕಿಯ ವ್ಯಾಗನ್‌ಆರ್ ಕಾರ್ ಮೇಲೆ ಬರೋಬ್ಬರಿ ₹1 ಲಕ್ಷವರೆಗೆ ಡಿಸ್ಕೌಂಟ್

EMI ಪಾವತಿ ತಪ್ಪಿದ್ದರೂ ಹೊಸ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹಾಕಬೇಡಿ, ಪ್ರಯತ್ನಿಸಬೇಡಿ. ಇದು ತಕ್ಷಣಕ್ಕೆ ನೀವು ಹಣಕಾಸಿನ ಬಿಕ್ಕಟ್ಟಿನಲ್ಲಿ ಇರುವಾಗ ಸಹಾಯಕವಲ್ಲ. ಬದಲಾಗಿ ಹಿಂದಿನ ಸಾಲ ಸರಿದೂಗಿಸಿ ನಂತರ ಹೊಸದನ್ನು ಯೋಚಿಸಬೇಕು.

Missed EMI? Here’s How to Recover Your Credit Score

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories