ಮತ್ತೆ ಏರಿಕೆ ಆಗಲಿವೆ ಜಿಯೋ, ಏರ್‌ಟೆಲ್ ರೀಚಾರ್ಜ್ ದರಗಳು! ಮೊಬೈಲ್ ಬಳಕೆದಾರರಿಗೆ ಶಾಕ್

ಜಿಯೋ, ಏರ್‌ಟೆಲ್ ಮತ್ತು Vi ಕಂಪನಿಗಳು 2024ರ ಅಂತ್ಯ ಅಥವಾ 2025ರ ಆರಂಭದಲ್ಲಿ ರೀಚಾರ್ಜ್ ದರಗಳನ್ನು 10-15%ವರೆಗೆ ಹೆಚ್ಚಿಸಲು ಸಿದ್ಧರಾಗಿವೆ. ಇದಕ್ಕೆ 5G ವಿಸ್ತರಣೆ ಪ್ರಮುಖ ಕಾರಣವಾಗಿದೆ.

Recharge Plans: ಮೊಬೈಲ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ (Vi) ತಮ್ಮ ರೀಚಾರ್ಜ್ ಪ್ಲಾನ್‌ಗಳ ದರವನ್ನು ಶೀಘ್ರದಲ್ಲೇ ಹೆಚ್ಚಿಸಲು ಯೋಚಿಸುತ್ತಿವೆ.

ವರದಿಗಳ ಪ್ರಕಾರ, ಈ ದರ ಏರಿಕೆ 10 ರಿಂದ 15 ಶೇಕಡಾದವರೆಗೆ ಇರಬಹುದು ಮತ್ತು ಇದು 2024ರ ಅಂತ್ಯದಿಂದ 2025ರ ಆರಂಭದೊಳಗೆ ಜಾರಿಗೆ ಬರಬಹುದು.

5G ನೆಟ್‌ವರ್ಕ್ ವಿಸ್ತರಣೆ, ಫೈಬರ್ ಮೂಲಸೌಕರ್ಯ ಮತ್ತು ಸ್ಪೆಕ್ಟ್ರಂ ಖರೀದಿ ವೆಚ್ಚ ಹೆಚ್ಚಳವು ಈ ಬದಲಾವಣೆಯ ಪ್ರಮುಖ ಕಾರಣಗಳಾಗಿವೆ.

ಕಂಪನಿಗಳು ಹೊಸ ತಂತ್ರಜ್ಞಾನ ಮತ್ತು ವ್ಯಾಪಕ ಸೇವಾ ಸುಧಾರಣೆಗೆ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಖರ್ಚುಗಳನ್ನು ಸಮತೋಲನಗೊಳಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಈಗಾಗಲೇ ಕೆಲವು ಪ್ಲಾನ್‌ಗಳಲ್ಲಿ ಬದಲಾವಣೆ ಮಾಡಿವೆ. ಉದಾಹರಣೆಗೆ, ಜಿಯೋ ಕಂಪನಿಯ ರೂ.249 ಪ್ಲಾನ್ ಈಗ ರೂ.299ಗೆ ಏರಿಕೆಯಾಗಿದೆ ಮತ್ತು ಡೇಟಾ ಪ್ರಮಾಣವನ್ನು ದಿನಕ್ಕೆ 1GBರಿಂದ 1.5GBಗೆ ಬದಲಿಸಲಾಗಿದೆ. ಏರ್‌ಟೆಲ್‌ನಲ್ಲಿಯೂ ಇದೇ ಮಾದರಿಯ ಬದಲಾವಣೆಗಳು ನಡೆದಿವೆ.

ಟೆಲಿಕಾಂ ಕಂಪನಿಗಳು ಇನ್ನೂ ಅಧಿಕೃತ ಘೋಷಣೆ ನೀಡದಿದ್ದರೂ, 2025ರ ಕೊನೆಯೋಳಗೆ ಈ ಹೊಸ ದರಗಳು ಸಂಪೂರ್ಣವಾಗಿ ಜಾರಿಗೆ ಬರುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಗ್ರಾಹಕರು ಶೀಘ್ರದಲ್ಲೇ ರೀಚಾರ್ಜ್ ಖರ್ಚು ಹೆಚ್ಚಾಗುವುದಕ್ಕೆ ಸಿದ್ಧರಾಗಬೇಕು.

Mobile recharge prices set to rise again soon

TRENDING ARTICLES1 / 4
Show More

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories