ಎಲೆಕ್ಟ್ರಿಕಲ್ ಸ್ಕೂಟರ್ (EV-Scooter) ಅಥವಾ ಬೈಕ್ (EV- Bike) ಖರೀದಿಸಬೇಕು ಅಂದುಕೊಂಡರೆ ಹಲವರಿಗೆ ಇದು ತುಸು ದುಬಾರಿ ಎನ್ನಿಸಬಹುದು ಯಾಕೆಂದರೆ ಪೆಟ್ರೋಲ್ ಇಂಜಿನ್ (Petrol engine) ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿವೆ.
ಆದರೆ ಈಗ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಮೋಟಾರ್ ಕಂಪನಿಗಳು ಕೂಡ ತಯಾರು ಮಾಡುತ್ತಿವೆ. ಹಾಗಾಗಿ ನೀವು ಹೊಸದಾಗಿ ಎಲೆಕ್ಟ್ರಿಕ್ ಬೈಕ್ (Electric Bike) ಒಂದನ್ನು ಖರೀದಿ ಮಾಡಬೇಕು ಅಂದುಕೊಂಡರೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ಎಲೆಕ್ಟ್ರಿಕಲ್ ಬೈಕ್ ಖರೀದಿ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ ಹಾಗಾಗಿ ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿರುವ ಹಾಗೂ ಕಡಿಮೆ ಬೆಲೆಯಲ್ಲಿಯೂ ಕೂಡ ಇ- ಬೈಕ್ ಗಳು ಲಭ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಅರ್ಬನ್ ಇ ಬೈಕ್ (Urban E-Bike)!
ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬೈಕ್ ಅನ್ನು ನೀವು ಕೇವಲ 999 ರೂಪಾಯಿಗಳಿಗೆ ಬುಕ್ ಮಾಡಿಕೊಳ್ಳಬಹುದು. ವಾಹನ ವಿತರಣೆಗೆ ಇನ್ನು ಸ್ವಲ್ಪ ಸಮಯ ಇದ್ದು ನೀವು ಮಾರುಕಟ್ಟೆಗೆ ಈ ವೆಹಿಕಲ್ (Vehicle) ಬರುವುದಕ್ಕಿಂತ 14 ದಿನದ ಮೊದಲು ಬುಕಿಂಗ್ (Booking) ಮಾಡಿಕೊಳ್ಳಬೇಕು.
ಅರ್ಬನ್ ಈ ಬೈಕ್ ವೈಶಿಷ್ಟ್ಯತೆ
ಸಾಮಾನ್ಯವಾಗಿ ಎಲೆಕ್ಟ್ರಿಕ್ ಬೈಕ್ಗಳಲ್ಲಿ ಮುಖ್ಯವಾಗಿರುವುದೇ ಅದರ ಎಲೆಕ್ಟ್ರಿಕ್ ಮೋಟಾರ್ (Electric Motor) . 20 ಎಎಚ್ ಬ್ಯಾಟರಿ ಯನ್ನು ಇದರಲ್ಲಿ ಅಳವಡಿಸಲಾಗಿದ್ದು ಕೇವಲ ನಾಲ್ಕು ಗಂಟೆಗಳ ಸಮಯದಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಬಿ ಎಲ್ ಡಿ ಸಿ (BLDC) ಮೋಟಾರ್ ಅಳವಡಿಸಲಾಗಿದ್ದು ಬ್ಯಾಟರಿ ವೋಲ್ಟೇಜ್ 36 ವಿ.
ಅರ್ಬನ್ ಬೈಕ್ ನ ವೇಗ ಗಂಟೆಗೆ 25 ಕಿಲೋಮೀಟರ್ಗಳು. ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ವರೆಗೆ ಚಲಿಸಬಹುದು ಎಂದು ಕಂಪನಿ ತಿಳಿಸಿದೆ. ಅರ್ಬನ್ ಈ ಬೈಕ್ ನಲ್ಲಿ ಇರುವ ಇದರ ವೈಶಿಷ್ಟ್ಯತೆಗಳನ್ನು ನೋಡುವುದಾದರೆ ಡಿಸ್ಕ್ ಬ್ರೇಕ್ (Disc brake) ಅಳವಡಿಸಲಾಗಿದ್ದು ಮೊಬೈಲ್ ಕನೆಕ್ಟಿವಿಟಿ ಕೂಡ ಇದೆ.
ಕಂಪನಿಯು HDFC Bank, Bajaj finserv, zest ಮೊದಲದ ಖಾಸಗಿ ಸಂಸ್ಥೆಗಳ ಜೊತೆಗೆ ಪಾಲುದಾರಿಕೆ ಹೊಂದಿದ್ದು ನೀವು ಈ ಕಂಪನಿ ಅಥವಾ ಬ್ಯಾಂಕ್ ಮೂಲಕ ಸುಲಭವಾಗಿ ಸಾಲ ಸೌಲಭ್ಯವನ್ನು (Two Wheeler Loan) ಕೂಡ ಪಡೆದುಕೊಳ್ಳಬಹುದು.
ಅರ್ಬನ್ ಬೈಕ್ ಬೆಲೆ ನೋಡುವುದಾದರೆ ಆರಂಭಿಕ ಎಕ್ಸ್ ಶೋರೂಮ್ ಬೆಲೆ 55,555 ರೂಪಾಯಿಗಳು. ಆದರೆ ನೀವು ಮುಂಗಡವಾಗಿ 999 ರೂಪಾಯಿಗಳನ್ನು ಕೊಟ್ಟು ಬುಕ್ ಮಾಡಿಕೊಂಡರೆ ನಿಮಗೆ 49, 999 ರೂಪಾಯಿಗಳಿಗೆ ಈ ಬೈಕ್ ಸಿಗುತ್ತದೆ.
ಇನ್ನು ನೀವು ಬ್ಯಾಂಕ್ನಿಂದ ಲೋನ್ (Bank Loan) ತೆಗೆದುಕೊಂಡು ಇಎಂಐ (EMI) ಮೂಲಕ ಪ್ರತಿ ತಿಂಗಳು ಹಣ ಪಾವತಿಸುವುದಾದರೆ, 1999 ರೂಪಾಯಿಗಳಿಂದ ಈ EMI ಸೌಲಭ್ಯ ಇದೆ. ಈ ಸೌಲಭ್ಯ ಪಡೆದುಕೊಳ್ಳಲು ಡೌನ ಪೆಮೆಂಟ್ ಆಗಿ 9,999 ರೂಪಾಯಿಗಳನ್ನು ಪಾವತಿಸಬೇಕು.
ಇದರಲ್ಲಿ ಬ್ಯಾಟರಿ ಚಾರ್ಜಿಂಗ್ ಚಂದಾದಾರರಿಗೆ ಯೋಜನೆ ಕೂಡ ಲಭ್ಯವಿದ್ದು ರೂ. 399 ರೂಪಾಯಿಗಳಿಂದ ಆರಂಭವಾಗುತ್ತದೆ. ಅರ್ಬನ್ ಈ ಬೈಕ್ ನ ಬೆಲೆ ಹಾಗೂ ಅದೇ ವಿನ್ಯಾಸದಲ್ಲಿ ಜೊತೆಗೆ ಇದೇ ಫೈನಾನ್ಸ್ (finance) ನಲ್ಲಿ ಯುಲು ವಿನ್ (Yulu Wynn) ಹೆಸರಿನ ಎಲೆಕ್ಟ್ರಿಕಲ್ ಸ್ಕೂಟರ್ ಕೂಡ ಲಭ್ಯವಿದೆ
ವಿಶೇಷ ಅಂದ್ರೆ ಈ ಎರಡು ಎಲೆಕ್ಟ್ರಿಕ್ ವಾಹನಕ್ಕೆ ಯಾವುದೇ ಡ್ರೈವಿಂಗ್ ಲೈಸೆನ್ಸ್ ಅಥವಾ ಪರವಾನಿಗೆ ಬೇಕಾಗಿಲ್ಲ. ಯಾಕೆಂದರೆ ಇದರಲ್ಲಿ ಪೆಡಲಿಂಗ್ ಸೌಲಭ್ಯ ಕೂಡ ಇದೆ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Motovolt Urbn E-Bike Yulu Wynn Price Feature and Mileage