ನಿಮ್ಮ ಹೆಂಡತಿ ಹೆಸರಲ್ಲಿ ಇಲ್ಲಿ ಹೂಡಿಕೆ ಮಾಡಿ ಸಾಕು, ಒನ್ ಟು ಡಬಲ್ ಆದಾಯ
ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಹಣವನ್ನ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ನಿವೃತ್ತಿಯ ನಂತರದ ಜೀವನವನ್ನು ಸುಗಮವಾಗಿ ಕಳೆಯಬಹುದು
- ನ್ಯಾಷನಲ್ ಪಿಂಚಣಿ ಯೋಜನೆಯಿಂದ ನಿವೃತ್ತಿ ಜೀವನ ಸುರಕ್ಷಿತ
- ನಿಮ್ಮ ಹೆಂಡತಿ ಹೆಸರಲ್ಲಿ ಖಾತೆ ತೆರೆಯಿರಿ
- ಕೇವಲ ₹1,000 ಹೂಡಿಕೆ ಮಾಡಿ ಒನ್ ಟು ಡಬಲ್ ಆದಾಯ
ಒಂದು ವೇಳೆ ನಿವೃತ್ತಿಯ ನಂತರ ನಿಮ್ಮ ಜೀವನ ಉತ್ತಮವಾಗಬೇಕು ಎನ್ನುವಂತಹ ಆಸೆ ನಿಮಗಿದ್ರೆ ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ (National Pension Scheme) ಹಣವನ್ನ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ನಿವೃತ್ತಿಯ ನಂತರದ ಜೀವನವನ್ನು ಸುಗಮವಾಗಿ ಕಳೆಯಬಹುದಾಗಿದ್ದು, ನಿಮ್ಮ ಹೆಂಡತಿಯ ಹೆಸರಿನಲ್ಲಿ ಕೂಡ ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದೆ.
ನ್ಯಾಷನಲ್ ಪಿಂಚಣಿ ಯೋಜನೆ
18 ರಿಂದ 75 ವರ್ಷದ ನಡುವೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ನಿಮಗೆ 60 ವರ್ಷ ಆದ ನಂತರ ನೀವು ಹೂಡಿಕೆಯ ಒಂದು ಭಾಗವನ್ನು ಪಡೆದುಕೊಳ್ಳಬಹುದು. ಉಳಿದ ಹಣದ ಜೊತೆಗೆ ನೀವು ವರ್ಸಾಷನ ಯೋಜನೆಯಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಯೋಜನೆಯನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ಮಾಡುವುದರಿಂದಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ ಈ ರೀತಿ ಕಾರ್ಯನಿರ್ವಹಿಸುತ್ತದೆ
* ಕೇವಲ ಮಿನಿಮಂ ಸಾವಿರ ರೂಪಾಯಿಗಳಿಂದ ಈ ಖಾತೆಯನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ಕರೆಯಬಹುದಾಗಿದೆ.
* ಸಾಮಾನ್ಯವಾಗಿ ಈ ಹೂಡಿಕೆ ನಿಮಗೆ ವರ್ಷಕ್ಕೆ 12% ರಿಟರ್ನ್ ನೀಡುತ್ತದೆ.
* 60 ವರ್ಷ ವಯಸ್ಸಾದಾಗ ಈ ಯೋಜನೆಯ ಮೆಚ್ಯುರಿಟಿ ಆಗುತ್ತದೆ. ಇದನ್ನ 65 ವರ್ಷಕ್ಕೆ ವಿಸ್ತರಿಸಬಹುದಾಗಿದೆ.
ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಲಾಭಗಳು
ಹೆಂಡತಿಗೆ 30 ವರ್ಷ ಇರಬೇಕಾದರೆ ಪ್ರತಿ ತಿಂಗಳಿಗೆ 5,000 ರೂಪಾಯಿಗಳ ರೀತಿಯಲ್ಲಿ ವರ್ಷಕ್ಕೆ 60 ಸಾವಿರ ರೂಪಾಯಿಯನ್ನು ನೀವು ಪಾವತಿ ಮಾಡ್ತೀರಿ. 30 ವರ್ಷಗಳಲ್ಲಿ ಒಟ್ಟಾರೆ 18 ಲಕ್ಷ ರೂಪಾಯಿಗಳ ಹುಡುಗಿಯರು ನೀವು ಮಾಡಿದ ಹಾಗೆ ಆಗುತ್ತದೆ. ಈ ಲೆಕ್ಕಾಚಾರದಲ್ಲಿ 60ನೇ ವಯಸ್ಸಿನಲ್ಲಿ ನಿಮ್ಮ ಕಾರ್ಪಸ್
1,76,49,569 ಆಗಿರುತ್ತದೆ ಹಾಗೂ ಕೇವಲ ಬಡ್ಡಿ 1,05,89,741 ಆಗಿರುತ್ತದೆ.
ಅಕೌಂಟ್ ತೆರೆಯುವುದು ಹೀಗೆ
ನ್ಯಾಷನಲ್ ಪೆನ್ಷನ್ ಸ್ಕೀಮ್ ನ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ಖಾತೆಯನ್ನು ತೆರೆಯ ಬಹುದಾಗಿದೆ. ಇದಲ್ಲದೆ ಹೋದಲ್ಲಿ ಹತ್ತಿರದ ಪಾಯಿಂಟ್ ಆಫ್ ಪ್ರೆಸೆನ್ಸ್ ಗೆ ಹೋಗಿ ಬೇಕಾಗಿರುವಂತಹ ಅಗತ್ಯ ದಾಖಲೆಗಳಾಗಿರುವ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್ ಸೇರಿದಂತೆ ಬೇಕಾಗಿರುವಂತಹ ಪ್ರಮುಖವಾದ ದಾಖಲೆಗಳನ್ನು ಒದಗಿಸಬೇಕಾಗಿರುತ್ತದೆ. ಇದಾದ ನಂತರ ಖಾತೆಯನ್ನು ತೆರೆದು ಮಾಸಿಕ ಅಥವಾ ವರ್ಷಕ್ಕೆ ಒಮ್ಮೆ ಹಣವನ್ನು ಕಟ್ಟುವುದನ್ನು ಆಯ್ಕೆ ಮಾಡಬೇಕಾಗಿರುತ್ತದೆ.
* ಸಾವಿರ ರೂಪಾಯಿಯಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.
* ಹೆಂಡತಿಯ ಹೆಸರಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ.
* ನ್ಯಾಷನಲ್ ಪೆನ್ಷನ್ ಸ್ಕೀಮ್ ಎಷ್ಟು ಲಾಭವನ್ನು ತರುತ್ತೆ ಗೊತ್ತಾ?
National Pension Scheme, Secure Your Future with a Small Investment